* ವಾಟ್ಸ್‌ಆ್ಯಪ್ ಗೂಪ್‌ಗೆ ಸಂದೇಶ ಕಳಿಸಿದ ಹಳ್ಳಿಗೌಡ
* ಬಳಿಕ ‘ನನ್ನ ಮೇಲೆ ಹಲ್ಲೆಯಾಗಿಲ್ಲ’ ಎಂದು ಉಲ್ಟಾ
* ಈ ಬಗ್ಗೆ ಬಿಜೆಪಿ ಷಡ್ಯಂತ್ರ ಮಾಡಿ ಸುಳ್ಳು ಸುದ್ದಿ ಹರಡುತ್ತಿದೆ
ಬೆಂಗಳೂರು(ಜ.21): ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್(Mohammed Haris Nalapad) ಹಾಗೂ ಬೆಂಬಲಿಗರು ಬುಧವಾರ ರಾತ್ರಿ ಬೆಂಗಳೂರಿನ(Bengaluru) ಖಾಸಗಿ ಹೋಟೆಲ್‌ನಲ್ಲಿ ಬಳ್ಳಾರಿ(Ballari) ಯುವ ಕಾಂಗ್ರೆಸ್(Congress) ಅಧ್ಯಕ್ಷ ಸಿದ್ದು ಹಳ್ಳಿಗೌಡ ಅವರ ಮೇಲೆ ಹಲ್ಲೆ(Assault) ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಯುವ ಕಾಂಗ್ರೆಸ್‌ನ ವಾಟ್ಸ್‌ಆ್ಯಪ್ ಗ್ರೂಪ್ ಒಂದರಲ್ಲಿ ಸಂದೇಶ ಹಾಕಿದ್ದ ಸಿದ್ದು ಹಳ್ಳಿಗೌಡ, ಬಳಿಕ ‘ನನ್ನ ಮೇಲೆ ಯಾವುದೇ ಹಲ್ಲೆ ಆಗಿಲ್ಲ. ಈ ಬಗ್ಗೆ ಬಿಜೆಪಿ(BJP) ಷಡ್ಯಂತ್ರ ಮಾಡಿ ಸುಳ್ಳು ಸುದ್ದಿ ಹರಡುತ್ತಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೊಹಮ್ಮದ್ ನಲಪಾಡ್, ನನ್ನ ವಿರುದ್ಧ ನಮ್ಮವರೇ ಪಿತೂರಿ ಮಾಡುತ್ತಿದ್ದಾರೆ. ಬುಧವಾರ ರಾತ್ರಿ ಹೋಟೆಲ್‌ನಲ್ಲಿ ನಾನು 10 ನಿಮಿಷ ಮಾತ್ರ ಇದ್ದೆ. ಅಲ್ಲಿ ಯಾವುದೇ ಗಲಾಟೆ ನಡೆದಿಲ್ಲ. ಬೇಕಿದ್ದರೆ ಸಿಸಿಟಿವಿ(CCTV) ದೃಶ್ಯಾವಳಿ ಪರೀಕ್ಷಿಸಿಕೊಳ್ಳಿ ಎಂದಿದ್ದಾರೆ.
undefined
Bitcoin : ನಲಪಾಡ್ ನಂಟು ವಿಚಾರ - ಕೈನಲ್ಲೀಗ ಸಂಚಲನ
ಜ.30ರ ಬಳಿಕ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಮೊಹಮ್ಮದ್ ನಲಪಾಡ್ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಸಂಬಂಧ ಸಿದ್ಧತೆಗಾಗಿ ಸಭೆ ನಡೆಸಿದ್ದ ಬಳಿಕ ಯಲಹಂಕ ಬಳಿಯ ಹೋಟೆಲ್ ಒಂದರಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸಿದ್ದು ಹಳ್ಳಿಗೌಡ(Siddu Halligouda) ಯುವ ಕಾಂಗ್ರೆಸ್ ಚುನಾವಣೆಯಲ್ಲಿ ತಮ್ಮ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ನಲಪಾಡ್ ಹಾಗೂ ಬೆಂಬಲಿಗರು ನನ್ನ ಮೇಲೆ ಹಲ್ಲೆ ನಡೆಸಿದರು ಎಂಬ ಆರೋಪವುಳ್ಳ ಸಂದೇಶ ಹರಿದಾಡುತ್ತಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ಪ್ರತಿಕ್ರಿಯಿಸಿದ್ದು, ಯಾವುದೇ ಗಲಾಟೆ ನಡೆದಿಲ್ಲ. ಈ ಬಗ್ಗೆ ಸಿದ್ದುಗೆ ಮಾತನಾಡಿದ್ದು, ಅವರ ಮೊಬೈಲ್ ಅನ್ನು ಬಳಸಿ ಯಾರೋ ಕಿಡಿಗೇಡಿ ಸಂದೇಶ ರವಾನಿಸಿದ್ದಾರೆ ಎಂದು ತಿಳಿಸಿದ್ದಾನೆ ಎಂದರು.
ಬೇಸರಗೊಂಡಿದ್ದ ನಲಪಾಡ್‌ಗೆ ಡಿಕೆಶಿ ಸಮಾಧಾನ
ರಾಮನಗರ: ಮೂರನೇ ದಿನದ ಪಾದಯಾತ್ರೆ(Padayatra) ಸಮಯದಲ್ಲಿ ಸಂಸದ ಡಿ.ಕೆ.ಸುರೇಶ್(DK Suresh) ಅವರು ನಲಪಾಡ್ ಹ್ಯಾರಿಸ್ ಕಾಲರ್ ಹಿಡಿದು ಪಕ್ಕಕ್ಕೆ ತಳ್ಳಿದ್ದರಿಂದ ಬೇಸರಗೊಂಡಿದ್ದ ನಲಪಾಡ್‌ರನ್ನು ಡಿಕೆಶಿ ಸಮಾಧಾನ ಮಾಡಿದ್ದಾರೆ. ನೀನು ನನ್ನ ಸಹೋದರ ಇದ್ದಂತೆ. ನಿನ್ನ ಹೆಗಲ ಮೇಲೆ ಕೈ ಹಾಕುತ್ತೇನೆ ಬಿಡು ಎಂದು ತಮ್ಮನ್ನು ಭೇಟಿಯಾದ ನಲಪಾಡ್‌ಗೆ ಹೇಳಿದ್ದರು. ಬಳಿಕ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ನಲಪಾಡ್, ಡಿ.ಕೆ.ಸುರೇಶ್ ಅವರು ನನನ್ನು ನೋಡಿರಲಿಲ್ಲ. ಹೀಗಾಗಿ ಎಳೆದು ಪಕಕ್ಕೆ ಸರಿಸಿದ್ದರು. ಬಳಿಕ ನನ್ನ ಮುಖ ನೋಡಿ, ಕರೆದು ಮಾತನಾಡಿಸಿದರು. ಇದರಲ್ಲಿ ಇಬ್ಬರದು ತಪ್ಪಿಲ್ಲ ಎಂದಿದ್ದಾರೆ.
'ನಲಪಾಡ್ ಹಲ್ಲೆ ಘಟನೆ ಕ್ಷುಲ್ಲಕ ಅಲ್ಲ: 2018ರಲ್ಲೇ ಎಚ್‌ಡಿಕೆ ಎಚ್ಚರಿಸಿದ್ದರೂ ಸಿದ್ದು ‘ಬಿಟ್’ ಹಾಕಿದ್ದರು'
ಬೆಂಗಳೂರು: ಮೂರು ವರ್ಷದ ಹಿಂದೆ ನಗರದ ಯುಬಿ ಸಿಟಿಯಲ್ಲಿ (UB Cuty) ನಡೆದಿದ್ದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ (Congress MLA NA Harris) ಪುತ್ರ ಮೊಹಮ್ಮದ್ ನಲಪಾಡ್ ಗಲಾಟೆ ಪ್ರಕರಣದ ಹಿಂದೆ ಬಿಟ್ ಕಾಯಿನ್ ದಂಧೆ ಇದೆ ಎಂಬ ಶಂಕೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಆಗಲೇ ವ್ಯಕ್ತಪಡಿಸಿದ್ದರೂ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನಿರ್ಲಕ್ಷಿಸಿದ್ದು ಯಾಕೆ ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.
ರಕ್ತ ಸುರಿಯುತ್ತಿದ್ರೂ ಬಿಡದೆ ಮಾರಣಾಂತಿಕ ಹಲ್ಲೆ: ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಹೇಳಿದ್ದಿಷ್ಟು
ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಬಿಟ್ ಕಾಯಿನ್ ಪ್ರಕರಣದ (Bitcoin Scam) ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ವಿರೋಧ ಪಕ್ಷದಲ್ಲಿದ್ದವರು ಸರ್ಕಾರದ ಗಮನಕ್ಕೆ ತರಬೇಕಾಗಿತ್ತು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ (BJP) ಈ ತಿರುಗೇಟು ನೀಡಿದೆ.
ಆಗ ವಿರೋಧ ಪಕ್ಷದಲ್ಲಿದ್ದ ಕುಮಾರಸ್ವಾಮಿ ಅವರು ನಲಪಾಡ್ ಪ್ರಕರಣದ ಹಿಂದೆ ಬಿಟ್ ಕಾಯಿನ್ ದಂಧೆಯಿದೆ ಎಂಬ ಗಂಭೀರ ಆರೋಪವನ್ನು ಹುಬ್ಬಳ್ಳಿಯಲ್ಲಿ ಮಾಡಿದ್ದರು. ಆ ಬಗ್ಗೆ 2018ರ ಫೆ.21ರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆದರೆ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಆ ಆರೋಪವನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ಆಗ ಸುಮ್ಮನಿದ್ದವರು ಈಗಿನ ಸರ್ಕಾರದ ವಿರುದ್ಧ ಸುಖಾಸುಮ್ಮನೆ ಆಪಾದನೆ ಮಾಡುತ್ತಿದ್ದಾರೆ. ವಾಸ್ತವವಾಗಿ ಈಗ ನಮ್ಮ ಸರ್ಕಾರ ತನಿಖೆಗೆ ಆದೇಶಿಸಿ ಕ್ರಮ ಕೈಗೊಂಡಿದೆ ಎಂದು ಬಿಜೆಪಿ ಕಿಡಿಕಾರಿದೆ.