ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದೆ ಮೋದಿ ಸರ್ಕಾರ : ಸಂಸದ ಅಣ್ಣಾಸಾಹೇಬ ಜೊಲ್ಲೆ

By Kannadaprabha News  |  First Published Jun 12, 2023, 9:14 PM IST

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 9 ವರ್ಷಗಳಲ್ಲಿ ಸಾಕಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಿ, ದೇಶವನ್ನು ಅಭಿವೃದ್ಧಿ ಪಥದಲ್ಲಿ ನಡೆಸುತ್ತಿದೆ ಎಂದು ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.


ರಾಯಬಾಗ (ಜೂ.12):  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 9 ವರ್ಷಗಳಲ್ಲಿ ಸಾಕಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಿ, ದೇಶವನ್ನು ಅಭಿವೃದ್ಧಿ ಪಥದಲ್ಲಿ ನಡೆಸುತ್ತಿದೆ ಎಂದು ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ತಾಲೂಕಿನ ಭೆಂಡವಾಡ ಮತ್ತು ನಂದಿಕುರಳಿ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮಹಾ ಜನಸಂಪರ್ಕ ಅಭಿಯಾನ(BJP janasamparka campaign)ದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ(PM Narendra Modi) ಅವರು ರೈತರಿಗೆ ಪಿಎಂ ಕಿಸಾನ(PM Kissan) ಯೋಜನೆ, ಪ್ರತಿ ಮನೆಗಳಿಗೆ ಜಲಜೀವನ್‌ ಯೋಜನೆ ಮೂಲಕ ನಳ ಸಂಪರ್ಕ, ಮಹಿಳೆಯರಿಗೆ ಉಚಿತ ಸಿಲಿಂಡರ್‌ ನೀಡಲಾಗಿದೆ ಎಂದರು.

Latest Videos

undefined

 

ವಿಶ್ವದ ಬಲಾಢ್ಯ ರಾಷ್ಟ್ರವನ್ನಾಗಿ ರೂಪಿಸಿದ್ದು ಬಿಜೆಪಿ ಸರ್ಕಾರ: ಅಣ್ಣಸಾಹೇಬ ಜೊಲ್ಲೆ

ಜನೌಷಧಿ ಕೇಂದ್ರದ ಮೂಲಕ ಕಡಿಮೆ ದರದಲ್ಲಿ ಔಷಧಿ ವಿತರಣೆ ಸೇರಿದಂತೆ ಅನೇಕ ಒಳ್ಳೆಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಲ್ಲ ಯೋಜನೆಗಳನ್ನು ಪ್ರತಿ ಮನೆಗಳಿಗೆ ಮುಟ್ಟಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು. ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಪ್ರತಿ ಮತಕ್ಷೇತ್ರದಲ್ಲಿ ಒಂದೊಂದು ಆಂಬ್ಯುಲೆನ್ಸ್‌ ನೀಡಲಾಗಿದೆ. ಪ್ರತಿ ತಾಲೂಕಿಗೆ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ಡಿ.ಎಂ.ಐಹೊಳೆ ಮಾತನಾಡಿ, ರಾಜ್ಯದ ಜನ ಕೇವಲ 5-6 ಗ್ಯಾರಂಟಿಗಳಿಗೆ ಮರಳಾಗಿದ್ದಾರೆ. ಆದರೆ ಪ್ರಧಾನಿ ಮೋದಿ ಅವರು 40-50 ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದಾರೆ. ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ಬರುವ 11 ತಿಂಗಳಲ್ಲಿ ಎಲ್ಲರಿಗೂ ಮನವರಿಕೆ ಮಾಡಿ, ಮತ್ತೊಮ್ಮೆ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳುಹಿಸಲು ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡೋಣವೆಂದು ಕರೆ ನೀಡಿದರು.

ಸಚಿವೆ ಜೊಲ್ಲೆಗೆ ನಿಮ್ಮ ಮತದಾನವೆಂದರೇ ಅಭಿವೃದ್ಧಿಗೆ ಮತದಾನ: ಸಂಸದ ಅಣ್ಣಾಸಾಹೇಬ್‌ ಜೊಲ್ಲೆ

ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ, ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ಭೆಂಡವಾಡೆ, ಸತೀಶ ಅಪ್ಪಾಜಿಗೋಳ, ರಾಜಶೇಖರ ಖನದಾಳೆ, ಅಪ್ಪಾಸಾಬ ಬ್ಯಾಕೂಡ, ಬಸವರಾಜ ಡೊಣವಾಡೆ, ಮಹಾದೇವ ಬಬಲೇಶ್ವರ, ಅಪ್ಪು ಬಾನೆ, ಉಮೇಶ ಪೂಜಾರಿ, ಸುರೇಶ ಚೌಗಲಾ, ರೇವಣು ಶಿವಾಪೂರೆ, ರಾವಸಾಹೇಬ ದೇಸಾಯಿ, ಸಂಗಪ್ಪ ಬೆನ್ನಾಳೆ, ರೇವಣು ದೂಪದಾಳ, ಡಾ.ಅಪ್ಪಯ್ಯ ನಾಯಿಕ, ಬಸವರಾಜ ಸಾರಾಪೂರೆ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

click me!