ಕರ್ನಾಟಕದ MLC ಪುತ್ರ ಹಠಾತ್ ನಿಧನ, ಮಗನ ಮುಖ ನೋಡದ ಸ್ಥಿತಿಯಲ್ಲಿ ತಂದೆ

By Suvarna News  |  First Published Oct 18, 2020, 1:26 PM IST

ಕಾಂಗ್ರೆಸ್‌ ಪಕ್ಷದ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯರೊಬ್ಬರ ಪುತ್ರ ದಿಢೀರ್ ಸಾವನ್ನಪ್ಪಿದ್ದು, ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.


ಶಿವಮೊಗ್ಗ, (ಅ.18): ಕಾಂಗ್ರೆಸ್‌ ಪಕ್ಷದ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಅವರ ಪುತ್ರ ಸುಹಾಸ್ (31) ನಿಧನರಾಗಿದ್ದಾರೆ.

ಇಂದು (ಭಾನುವಾರ) ಹೃದಯಾಘಾತದಿಂದ ಮೃತರಾಗಿದ್ದಾರೆ. ಮುಂಜಾನೆ ಎದೆನೋವಿನಿಂದ ನಿತ್ರಾಣರಾಗಿ ಕುಸಿದು ಬಿದ್ದ ಸುಹಾಸ್ ರನ್ನು ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಎಂಎಲ್ಸಿ ಪುತ್ರ ಸುಹಾಸ್ ಕೊನೆಯುಸಿರೆಳೆದಿದ್ದಾರೆ. 

Tap to resize

Latest Videos

ಕೊರೋನಾ ಸೊಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಉಪಮುಖ್ಯಮಂತ್ರಿ ಪುತ್ರನ ಸ್ಥಿತಿ ಗಂಭೀರ

ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಎಂಎಲ್ಸಿ ಪ್ರಸನ್ನ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ. ಸುಹಾಸ್ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

ಪ್ರಸನ್ನ ಕುಮಾರ್ ಗೆ ಇಬ್ಬರು ಮಕ್ಕಳು ಸೂರಜ್ ಹಾಗೂ ಸುಹಾಸ್. ಮೂವತ್ತೊಂದು ವರ್ಷದ ಸುಹಾಸ್ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದರು. ಇನ್ನು ಆರ್.ಪ್ರಸನ್ನ ಕುಮಾರ್,  ಅವರು  ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಮಗನ ಮುಖ ನೋಡಲಾದ ಪರಿಸ್ಥಿತಿಯಲ್ಲಿದ್ದಾರೆ.

ಇದನ್ನೂ ನೋಡಿ | ಫಲಿಸಲಿಲ್ಲ ಪ್ರಾರ್ಥನೆ; ಕೋವಿಡ್‌ನಿಂದ ಬಳಲುತ್ತಿದ್ದ ಶಿಕ್ಷಕಿ ಸಾವು

"

click me!