ವರದಿ : ರುದ್ರಪ್ಪ ಆಸಂಗಿ
ವಿಜಯಪುರ (ಡಿ.04): ವಿಜಯಪುರ- ಬಾಗಲಕೋಟೆ (Vijayapura -Bagalkot) ವಿಧಾನ ಪರಿಷತ್ ದ್ವಿ ಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ (Congress-BJP) ಗೆಲುವಿಗೆ ಪಕ್ಷೇತರರು ತಲೆನೋವಾಗಿ ಪರಿಣಮಿಸಿದ್ದಾರೆ. ಡಿ.10ರಂದು ಸ್ಥಳೀಯ ಸಂಸ್ಥೆಗಳಿಂದ ನಡೆಯಲಿರುವ ವಿಧಾನ ಪರಿಷತ್‌ನ ದ್ವಿಸದಸ್ಯ ಸ್ಥಾನ ಚುನಾವಣೆಯಲ್ಲಿ (MLC Election) ಕಾಂಗ್ರೆಸ್‌ನಿಂದ (Congress) ಸುನೀಲಗೌಡ ಪಾಟೀಲ, ಬಿಜೆಪಿಯಿಂದ (BJP) ಪಿ. ಎಚ್.ಪೂಜಾರ ಅಖಾಡಕ್ಕೆ ಇಳಿದಿ ದ್ದಾರೆ. ಇಲ್ಲಿ ಅವಿರೋಧ ಆಯ್ಕೆ ಸಲುವಾಗಿ ಕಾಂಗ್ರೆಸ್, ಬಿಜೆಪಿ ಕಣದಲ್ಲಿದ್ದ 10 ಪಕ್ಷೇತರ ಅಭ್ಯರ್ಥಿಗಳ ಮನವೊಲಿಕೆಗೆ ಹರ ಸಾಹಸ ಮಾಡಿದರು. ಅದರ ಫಲವಾಗಿ ಐವರು ಕಣದಿಂದ ಹಿಂದೆ ಸರಿದಿದ್ದಾರೆ.
ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಅವರು ಕಾಂಗ್ರೆಸ್ ಮತಗಳನ್ನು ಸೆಳೆಯುವಲ್ಲಿ ಒಂದು ಹಂತಕ್ಕೆ ಸಫಲರಾಗಬಹುದು. ಆದರದು ಫಲಿತಾಂಶದ (Result) ಮೇಲೆ ಪರಿಣಾಮ ಬೀರಲಾರದು ಎನ್ನಲಾಗಿದೆ. ಕಾಂಗ್ರೆಸ್ಸಿನ ಎಸ್.ಆರ್.ಪಾಟೀಲ (SR Patil) ಅವರಿಗೆ ಈ ಬಾರಿ ಕೈ ಟಿಕೆಟ್ ತಪ್ಪಿದೆ. ಇಬ್ಬರು ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಲೆಕ್ಕಾ ಚಾರ ಹಾಕಿತ್ತು. ಆದರೆ ಎಸ್.ಆರ್.ಪಾಟೀಲ ತಮಗೆ ಒಬ್ಬರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದರಿಂದಾಗಿ ಅವರಿಗೆ ಕೈ ಟಿಕೆಟ್ ಕೈ ತಪ್ಪಿದೆ ಎನ್ನಲಾಗಿದೆ.
2015ರಲ್ಲಿ ಕೈ ಪಕ್ಷದಿಂದ ಎಸ್. ಆರ್.ಪಾಟೀಲ ಗೆದ್ದರು. ಬಿಜೆಪಿ ಯಿಂದ (BJP) ಬಾಗಲಕೋಟೆ ಭಾಗದ ಜಿ.ಎಸ್. ನ್ಯಾಮಗೌಡ ಹಾಗೂ ಟಿಕೆಟ್ ವಂಚಿತ ಬಸನಗೌಡ ಪಾಟೀಲ ಯತ್ನಾಳ ಪಕ್ಷೇತರ ಅಭ್ಯರ್ಥಿ ಯಾಗಿ ಕಣಕ್ಕಿಳಿದಿದ್ದರು. ಯತ್ನಾಳ ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಯಾಗಿ ಗೆದ್ದಿದ್ದರು. ಯತ್ನಾಳ 2018ರಲ್ಲಿ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿ ವಿಜಯಪುರ ವಿಧಾನಸಭೆ ಕ್ಷೇತ್ರಕ್ಕೆ 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬಂದರು. ಆಗ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಮಾಜಿ ಸಚಿವ ಸುನೀಲಗೌಡ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಚುನಾಯಿತರಾದರು.
ಅವಿರೋಧ ಆಯ್ಕೆ ಕಸರತ್ತು : ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ (MLC Election) ನಡೆಯುವ ಚುನಾವಣೆ ಕಾವು ಪಡೆದುಕೊಂಡಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ. ಆದರೆ, ವಿಜಯಪುರ- ಬಾಗಲಕೋಟೆ (Vijayapura - Bagalkote) ದ್ವಿಸದಸ್ಯ ಕ್ಷೇತ್ರದಲ್ಲಿನ ಲೆಕ್ಕಾಚಾರವೇ ಬೇರೆಯಾಗಿದೆ. ಕಾಂಗ್ರೆಸ್ (Congress), ಬಿಜೆಪಿ (BJP) ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲು ತೆರೆಮರೆಯ ಕಸರತ್ತು ಆರಂಭಗೊಂಡಿದೆ. ಡಿ.10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ವಿಜಯಪುರ-ಬಾಗಲಕೋಟೆ ದ್ವಿ ಸದಸ್ಯತ್ವ ಕ್ಷೇತ್ರಕ್ಕೆ ಒಟ್ಟು 13 ಜನರು 19 ನಾಮಪತ್ರ ಸಲ್ಲಿಸಿದ್ದರು. ಆದರೆ, ನಾಮಪತ್ರ ಪರಿಶೀಲನೆ ವೇಳೆ ಪಕ್ಷೇತರ ಅಭ್ಯರ್ಥಿ ನಾಮಪತ್ರ (Nomination) ತಿರಸ್ಕೃತಗೊಂಡಿದ್ದು, 12 ಜನರು ಈಗ ಕಣದಲ್ಲಿ ಉಳಿದುಕೊಂಡಿದ್ದಾರೆ. ಈ ಪೈಕಿ ಕಾಂಗ್ರೆಸ್, ಬಿಜೆಪಿಯಿಂದ (BJP) ಒಬ್ಬ ಅಭ್ಯರ್ಥಿ ಉಳಿದ 10 ಜನರು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದಾರೆ. ಹೀಗಾಗಿ 10 ಜನ ಪಕ್ಷೇತರರನ್ನು ಕಣದಿಂದ ಹಿಂದಕ್ಕೆ ಸರಿಸಿ, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುವ ಕಸರತ್ತು ತೆರೆಮರೆಯಲ್ಲಿ ಗಂಭೀರವಾಗಿ ನಡೆಯುತ್ತಿದೆ.
ಏನೆಲ್ಲಾ ತಂತ್ರಗಳನ್ನು ಮಾಡುತ್ತಿದ್ದಾರೆ?: ಅಭ್ಯರ್ಥಿ ಗುರು ಲಿಂಗಪ್ಪ ಅಂಗಡಿ ಅವರು ಬಿಜೆಪಿಯವರಾಗಿದ್ದು (BJP), ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಹೀಗಾಗಿ ಅವರನ್ನು ಕಣದಿಂದ ಹಿಂದೆ ಸರಿಸಲು ಬಿಜೆಪಿ ನಾಯಕರು ಈಗಾಗಲೇ ಅಂಗಡಿ ಅವರ ಮನವೊಲಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಉಳಿದಂತೆ 9 ಜನ ಪಕ್ಷೇತರ ಅಭ್ಯರ್ಥಿಗಳಲ್ಲಿ 6 ಜನರು ವಿಜಯಪುರ (Vijayapura) ಜಿಲ್ಲೆಯವರಾಗಿದ್ದಾರೆ. ಹಾಗಾಗಿ ವಿಜಯಪುರ ಕಾಂಗ್ರೆಸ್ ನಾಯಕರು ಈ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸಲು ಶತಾಯ ಗತಾಯ ಶ್ರಮಿಸುತ್ತಿದ್ದಾರೆ. ಬಿಜೆಪಿಗಿಂತ ಕಾಂಗ್ರೆಸ್ (congress) ಪಕ್ಷದಲ್ಲಿಯೇ ಈ ಚಟುವಟಿಕೆ ನಡೆಯುತ್ತಿದ್ದು, ಹೆಚ್ಚಾಗಿ ಇದು ಗಮನ ಸೆಳೆಯುತ್ತಿದೆ.
10 ಜನ ಪಕ್ಷೇತರ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸುವುದು ಎಂದರೆ ಸಿಪ್ಪೆ ಸುಲಿದಷ್ಟು ಸುಲಭವಲ್ಲ. ಆದ್ದರಿಂದ ಕಾಂಗ್ರೆಸ್, ಬಿಜೆಪಿ (BJP) ನಾಯಕರು 10 ಜನ ಪಕ್ಷೇತರ ಅಭ್ಯರ್ಥಿಗಳನ್ನು ಮನವೊಲಿಸಿ ಕಣದಿಂದ ಹಿಂದೆ ಸರಿಸುವಲ್ಲಿ ಯಶಸ್ವಿಯಾದರೆ ವಿಜಯಪುರ-ಬಾಗಲಕೋಟೆ ದ್ವಿ ಸದಸ್ಯ ವಿಧಾನ ಪರಿಷತ್ ಕ್ಷೇತ್ರ ಅವಿರೋಧ ಆಯ್ಕೆ ಆಗುವುದರಲ್ಲಿ ಅನುಮಾನವಿಲ್ಲ. ನ.26ರಂದು ನಾಮಪತ್ರ ಹಿಂದೆ ಪಡೆಯಲು ಕೊನೆಯ ದಿನವಾಗಿದ್ದು, ಅಲ್ಲಿಯವರೆಗೆ ಯಾವ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುತ್ತಾರೆ ಎಂಬುವುದು ಕುತೂಹಲ ಮೂಡಿಸಿದೆ. ಈಗಾಗಲೇ ಕೆಲವು ಪಕ್ಷೇತರ ಅಭ್ಯರ್ಥಿಗಳನ್ನು ಸಂಪರ್ಕಿಸಿರುವ ಕಾಂಗ್ರೆಸ್ ನಾಯಕರು ಅವರ ಮನವೊಲಿಸುವತ್ತ ಹೆಜ್ಜೆ ಹಾಕಿದ್ದಾರೆ. ಪ್ರಚಾರಕ್ಕಿಂತ ಇದಕ್ಕೆ ಹೆಚ್ಚಿನ ಗಮನ ಹರಿಸಿದ್ದಾರೆ ಎಂದು ಮೂಲಗಳು ಕೂಡ ಹೇಳಿವೆ. ಮಾತ್ರವಲ್ಲ, ನಾಮಪತ್ರ ಸಲ್ಲಿಕೆ ನಂತರ ನಡೆದ ಕಾಂಗ್ರೆಸ್ ಸಭೆಯಲ್ಲಿಯೂ ಈ ವಿಚಾರ ಕೂಡ ಮುನ್ನೆಲೆಗೆ ಬಂದಿತ್ತು ಎಂದು ಹೇಳಲಾಗುತ್ತಿದೆ.
ಅವಿರೋಧವಾದರೆ ರಾಜ್ಯದಲ್ಲೇ ಮೊದಲು: ಪಕ್ಷೇತರರ ಮನವೊಲಿಸಿದರೆ, ಕೊನೆಗೆ ಕಣದಲ್ಲಿ ಉಳಿಯುವುದು ಕಾಂಗ್ರೆಸ್, ಬಿಜೆಪಿ (BJP) ಅಭ್ಯರ್ಥಿಗಳು ಮಾತ್ರ. ದ್ವಿಸದಸ್ಯ ಸ್ಥಾನ ಇರುವುದರಿಂದ ಚುನಾವಣಾ ಆಯೋಗ ಇಬ್ಬರೇ ಅಭ್ಯರ್ಥಿಗಳು ಇರುವುದರಿಂದ ಅವಿರೋಧ ಆಯ್ಕೆ ಘೋಷಿಸಬಹುದು. ಹೀಗಾದಲ್ಲಿ ಇದು ರಾಜ್ಯದಲ್ಲೇ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಮೊದಲ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಕೀರ್ತಿಗೂ ಪಾತ್ರವಾಗುತ್ತವೆ. ಒಂದು ವೇಳೆ ಚುನಾವಣೆ ನಡೆದರೂ ಕೂಡ ಈಗ ಕಾಂಗ್ರೆಸ್- ಬಿಜೆಪಿ ನಡುವೆಯೇ ನೇರ ಹೋರಾಟ ನಡೆಯಲಿದೆ.
ಅವಿರೋಧ ಆಯ್ಕೆಯಾದರೆ ದುಂದು ವೆಚ್ಚ, ಸಮಯದ ಅಪವ್ಯಯ ತಪ್ಪಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂಬ ವಿಚಾರ ಕಾಂಗ್ರೆಸ್, ಬಿಜೆಪಿ ನಾಯಕರಲ್ಲಿ ಬಂದಿದೆ. ಹಾಗಾಗಿ ಈಗ ಕಾಂಗ್ರೆಸ್, ಬಿಜೆಪಿ ನಾಯಕರು ಅವಿರೋಧ ಆಯ್ಕೆಯತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಈಗ ಆ ನಿಟ್ಟಿನಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷದ ನಾಯಕರು ತೆರೆಮರೆಯಲ್ಲಿ ಬಿರುಸಿನ ಪ್ರಯತ್ನ ನಡೆಸಿದ್ದಾರೆ.ಕಾಂಗ್ರೆಸ್, ಬಿಜೆಪಿ ನಾಯಕರು ತೆರೆಮರೆಯಲ್ಲಿ 10 ಜನ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸಲು ಭಾರಿ ಕಸರತ್ತು ಮಾಡುತ್ತಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಅವಿರೋಧ ಆಯ್ಕೆಗೆ ಪಕ್ಷದ ವಲಯದಲ್ಲಿ ಪ್ರಯತ್ನಿಸಲಾಗುತ್ತಿದೆ. ಎಲ್ಲರ ಮನವೊಲಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆದಿವೆ. ಇದರಲ್ಲಿ ಯಶಸ್ಸು ಕಾಣುವುದು ಬಿಡುವುದು ಪಕ್ಷೇತರ ಅಭ್ಯರ್ಥಿಗಳ ನಿರ್ಧಾರವನ್ನು ಅವಲಂಬಿಸಿದೆ.