Council Election Karnataka : ಜೆಡಿಎಸ್‌ ಕೋಟೆ ಭೇದಿಸಲು ಕಾಂಗ್ರೆಸ್‌, ಬಿಜೆಪಿ ಪ್ರಯತ್ನ

By Kannadaprabha News  |  First Published Nov 29, 2021, 9:35 AM IST
  • ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲುಂಡರೂ ಈಗಲೂ ಜೆಡಿಎಸ್‌ ಭದ್ರಕೋಟೆಯಾಗಿಯೇ ಉಳಿದಿರುವ ಮಂಡ್ಯ
  • ಮಂಡ್ಯ ಕ್ಷೇತ್ರ ಇದೀಗ ಜೆಡಿಎಸ್‌ ಜತೆಗೆ ಕಾಂಗ್ರೆಸ್‌ ಮತ್ತು ಬಿಜೆಪಿಗಳಿಗೂ ಪ್ರತಿಷ್ಠೆಯ ಪ್ರಶ್ನೆ

ವರದಿ :  ಮಂಡ್ಯ ಮಂಜುನಾಥ

 ಮಂಡ್ಯ(ನ.29):  ಕಳೆದ ಲೋಕಸಭಾ ಚುನಾವಣೆಯಲ್ಲಿ (Loksabha Election) ಸೋಲುಂಡರೂ ಈಗಲೂ ಜೆಡಿಎಸ್‌ (JDS) ಭದ್ರ ಕೋಟೆಯಾಗಿಯೇ ಉಳಿದಿರುವ ಮಂಡ್ಯ (Mandya) ಕ್ಷೇತ್ರ ಇದೀಗ ಜೆಡಿಎಸ್‌ ಜತೆಗೆ ಕಾಂಗ್ರೆಸ್‌ (congress) ಮತ್ತು ಬಿಜೆಪಿಗಳಿಗೂ (BJP) ಪ್ರತಿಷ್ಠೆಯ ಪ್ರಶ್ನೆ. ಹೀಗಾಗಿ ಮೂರೂ ಪಕ್ಷದ ಅಭ್ಯರ್ಥಿಗಳು ಗೆಲುವಿಗೆ ವಿಭಿನ್ನ ರೀತಿಯ ಕಾರ್ಯತಂತ್ರ ರೂಪಿಸಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಕ್ಷೇತ್ರದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ಈವರೆಗೆ ಪ್ರವೇಶ ಪಡೆದವರಲ್ಲಿ ಜೆಡಿಎಸ್‌ನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರದ 24 ವರ್ಷದ ಇತಿಹಾಸವನ್ನೊಮ್ಮೆ ಗಮನಿಸಿದರೆ ಜಿ.ಬಿ.ಶಿವಕುಮಾರ್‌ , ಎಚ್‌.ಹೊನ್ನಪ್ಪ, ಬಿ.ರಾಮಕೃಷ್ಣ, ಎನ್‌.ಅಪ್ಪಾಜಿಗೌಡ (Appaki gowda) ಸೇರಿ ಪ್ರಮುಖರು ಜನತಾದಳದಿಂದ ವಿಧಾನ ಪರಿಷತ್‌ಗೆ (MLC) ಆಯ್ಕೆಯಾಗಿದ್ದರು. 2003ರಲ್ಲಿ ಎಸ್‌.ಎಂ.ಕೃಷ್ಣ (CM Krishna) ಸಿಎಂ ಆಗಿದ್ದ ಸಮಯದಲ್ಲಿ ಎಸ್‌.ಎಂ.ಶಂಕರ್‌ ಕಾಂಗ್ರೆಸ್‌ನಿಂದ ಪರಿಷತ್‌ ಪ್ರವೇಶಿಸಿದ್ದರು. 2015ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಎನ್‌.ಅಪ್ಪಾಜಿ ಗೌಡರು ಇದೀಗ ಮರು ಆಯ್ಕೆ ಬಯಸಿ ಮತ್ತೊಮ್ಮೆ ಅಖಾಡದಲ್ಲಿ ಉಳಿದುಕೊಂಡಿದ್ದಾರೆ. ಜೆಡಿಎಸ್‌ನ 6 ಶಾಸಕರು, ಇಬ್ಬರು ಪರಿಷತ್‌ ಸದಸ್ಯರು ಎನ್‌.ಅಪ್ಪಾಜಿ ಗೌಡರ ಬೆನ್ನಿಗಿದ್ದಾರೆ. ಕಳೆದ ಗ್ರಾಪಂ ಚುನಾವಣೆಯಲ್ಲಿ (Grama Panchayat Election) ಜೆಡಿಎಸ್‌ ಬೆಂಬಲಿತರು ಅಧಿಕ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ ಎನ್ನಲಾಗಿದ್ದು, ಇದು ಪಕ್ಷದ ಗೆಲುವಿಗೆ ಸಹಕಾರಿಯಾಗಬಹುದು ಎಂಬ ನಿರೀಕ್ಷೆ ಇದೆ.

Latest Videos

undefined

ಅಸ್ತಿತ್ವಕ್ಕಾಗಿ ‘ಕೈ’ ಹೋರಾಟ: 2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 1 ಸ್ಥಾನವನ್ನೂ ಗೆಲ್ಲಲಾಗದ ಕಾಂಗ್ರೆಸ್‌ (Congress) ಪಾಲಿಗೆ ಈ ಪರಿಷತ್‌ ಚುನಾವಣೆ ಅಸ್ತಿತ್ವದ ಹೋರಾಟವಾಗಿದೆ. ಪಕ್ಷದ ಅಚ್ಚರಿಯ ಅಭ್ಯರ್ಥಿ ದಿನೇಶ್‌ ಗೂಳಿಗೌಡ (Dinesh Guligowda) ಅವರು ಎಲ್ಲಾ ನಾಯಕರನ್ನು ಒಗ್ಗೂಡಿಸಿಕೊಂಡು ತಾಲೂಕು ಕೇಂದ್ರಗಳಲ್ಲಿ ಪ್ರಚಾರದ ಧೂಳೆಬ್ಬಿಸಿದ್ದಾರೆ. ಚುನಾವಣೆಯಲ್ಲಿ ಜೆಡಿಎಸ್‌ - ಬಿಜೆಪಿಯೊಂದಿಗೆ ಮೈತ್ರಿ ಮಾತುಗಳು ಕೇಳಿ ಬಂದಿರುವುದರಿಂದ ಗೂಳಿಗೌಡಗೆ ವಿಜಯ ಮಾಲೆ ತೊಡಿಸಲು ಹೊಸ ರಣನೀತಿ ಅನುಸರಿಸುತ್ತಿದೆ. ಮಾಜಿ ಸಚಿವರಾದ ಎನ್‌.ಚಲುವರಾಯಸ್ವಾಮಿ (N cheluvarayaswamy), ಪಿ.ಎಂ.ನರೇಂದ್ರ ಸ್ವಾಮಿ ಪಕ್ಷದ ಚುನಾವಣಾ ಸಾರಥ್ಯ ವಹಿಸಿದ್ದಾರೆ.

ಬಿಜೆಪಿಗೆ ಗೆಲ್ಲುವ ಅನಿವಾರ್ಯತೆ:  ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡರಿಗೂ (Narayana Gowda) ಇದು ಪ್ರತಿಷ್ಠೆಯ ಚುನಾವಣೆ. ಕಳೆದ ಗ್ರಾಪಂ ಚುನಾವಣೆಯಲ್ಲಿ ಜಿಲ್ಲೆಯ ಕೆಲವೆಡೆ ಬಿಜೆಪಿ (BJP) ಸ್ವಲ್ಪ ನೆಲೆ ಕಂಡುಕೊಂಡಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡು ಅಧಿಕಾರ ಬಲದೊಂದಿಗೆ ಕಾಂಗ್ರೆಸ್‌, ಜೆಡಿಎಸ್‌ ಬೆಂಬಲಿತರನ್ನು ಸೆಳೆಯುವ ಸಾಹಸಕ್ಕೆ ಮುಂದಾಗಿದೆ.

ಮತದಾರರ ವಿವರ

ಒಟ್ಟು ಮತದಾರರು-4033

ಪುರುಷರು-1930

ಮಹಿಳೆಯರು-2103

ಕಳೆದ ಬಾರಿಯ ಫಲಿತಾಂಶ

ಎನ್‌.ಅಪ್ಪಾಜಿಗೌಡ (ಜೆಡಿಎಸ್‌) - 2302

ಎಲ್‌.ಆರ್‌.ಶಿವರಾಮೇಗೌಡ (ಕಾಂಗ್ರೆಸ್‌) - 1660

ಕೆ.ನಾಗಣ್ಣಗೌಡ (ಬಿಜೆಪಿ)-139

(ದಿನೇಶ್‌ ಗೂಳಿಗೌಡ, ಎನ್‌.ಅಪ್ಪಾಜಿಗೌಡ, ಬೂಕಹಳ್ಳಿ ಮಂಜು- ಅವರ ಹೆಸರಿನಲ್ಲೇ ಫೋಟೋಗಳು ಇವೆ)

ನಾರಾಯಣ ಗೌಡಗೆ ಪ್ರತಿಷ್ಠೆ : 

 ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ(Vidhan Parishat Election) ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಮೂರು ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರೂ ಆಡಳಿತಾರೂಢ ಬಿಜೆಪಿಗೆ(BJP) ಕಠಿಣ ಸವಾಲಾಗಿ ಎದುರಾಗಿದೆ.

ಕಾಂಗ್ರೆಸ್‌(Congress), ಜೆಡಿಎಸ್‌ನ(JDS) ರಾಜಕೀಯ(Politics) ಕರ್ಮಭೂಮಿ ಎಂದೇ ಬಿಂಬಿತವಾಗಿರುವ ಮಂಡ್ಯ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಕೆ.ಆರ್‌.ಪೇಟೆ ಕ್ಷೇತ್ರದಿಂದ ಗೆಲುವು ಆರಂಭಿಸಿದ ಬಿಜೆಪಿ, ಪ್ರಸ್ತುವ ವಿಧಾನ ಪರಿಷತ್‌ ಚುನಾವಣೆಯನ್ನು ಹೊಸ ಭರವಸೆಯನ್ನು ಎದುರಿಸುತ್ತಿದ್ದು, ಸಚಿವ ಕೆ.ಸಿ.ನಾರಾಯಣಗೌಡ(KC Narayana Gowda) ನಾಯಕತ್ವದಲ್ಲಿ ಬಿರುಸಿನ ಪ್ರಚಾರ(Campaign) ಆರಂಭಿಸಿದೆ.

ಹೆಚ್ಚು ಮತಗಳಿಕೆ ಅನಿವಾರ್ಯ:

ಈ ಹಿಂದಿನ ಬಹುತೇಕ ಚುನಾವಣೆಗಳಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿತ್ತು. ಕೆ.ಆರ್‌.ಪೇಟೆ(KR Pete) ಫಲಿತಾಂಶದ ಬಳಿಕ ಬಿಜೆಪಿಯನ್ನು ಅಷ್ಟುಹಗುರವಾಗಿ ಪರಿಗಣಿಸಲಾಗದು. ಜಿಲ್ಲಾ ಉಸ್ತುವಾರಿಯನ್ನೇ ಬಿಜೆಪಿಯ ನಾರಾಯಣಗೌಡರು ವಹಿಸಿರುವುದರಿಂದ ಕಾಂಗ್ರೆಸ್‌, ಜೆಡಿಎಸ್‌ಗೆ ಸರಿಸಮನಾಗಿಯೇ ಮತಗಳಿಸಲೇಬೇಕಾದ ಅನಿವಾರ್ಯತೆ ಇದೆ.

ಕಳೆದ ಕೆಲವು ತಿಂಗಳ ಹಿಂದೆ ನಡೆದ ಗ್ರಾಪಂ ಚುನಾವಣೆಯಲ್ಲೂ ಕೂಡ ಕೆ.ಆರ್‌.ಪೇಟೆ, ಮದ್ದೂರು ಸೇರಿದಂತೆ ಕೆಲವೆಡೆ ಬಿಜೆಪಿ ಕನಿಷ್ಠ ನೆಲೆಯನ್ನು ಕಂಡುಕೊಂಡಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಬಿಜೆಪಿ ಅಧಿಕಾರಬಲದ ಮೂಲಕವೇ ಕಾಂಗ್ರೆಸ್‌, ಜೆಡಿಎಸ್‌ ಬೆಂಬಲಿತ ಮತದಾರರನ್ನು ಸೆಳೆಯುವ ಸಾಹಸಕ್ಕೆ ಮುಂದಾಗಿದೆ.

click me!