Council Election Karnataka : ಕಣದಲ್ಲಿ ಐವರಿದ್ದರೂ ಬಿಜೆಪಿ, ಕಾಂಗ್ರೆಸ್‌ ಮಧ್ಯೆಯೇ ಬಿಗ್ ಫೈಟ್‌

By Kannadaprabha News  |  First Published Nov 29, 2021, 9:12 AM IST
  •  ಕಣದಲ್ಲಿ ಐವರಿದ್ದರೂ ಬಿಜೆಪಿ, ಕಾಂಗ್ರೆಸ್‌ ಮಧ್ಯೆಯೇ ಬಿಗ್ ಫೈಟ್‌
  •  ಕಾಂಗ್ರೆಸ್‌ ಕ್ಷೇತ್ರ ವಶಪಡಿಸಿಕೊಳ್ಳಲು ಬಿಜೆಪಿ ಕದನ
  •  ಕಾಂಗ್ರೆಸ್‌ನಿಂದ ತೀವ್ರ ಪೈಪೋಟಿ: ತೀವ್ರ ಕುತೂಹಲ

ವರದಿ :  ವಸಂತಕುಮಾರ್‌ ಕತಗಾಲ

 ಕಾರವಾರ (ನ.29):  ಉತ್ತರ ಕನ್ನಡ (Uttara kannada) ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ (MLC Election) ಐವರು ಅಭ್ಯರ್ಥಿಗಳಿದ್ದರೂ, ಬಿಜೆಪಿಯ (BJP) ಗಣಪತಿ ಉಳ್ವೇಕರ ಹಾಗೂ ಕಾಂಗ್ರೆಸ್‌ನ (Congress) ಭೀಮಣ್ಣ ನಾಯ್ಕ ಅವರ ನಡುವಣ ಹೋರಾಟ ಮತದಾರರನ್ನಷ್ಟೇ ಅಲ್ಲ, ಇಡೀ ಜಿಲ್ಲೆಯ ಜನರನ್ನು ತುದಿಗಾಲ ಮೇಲೆ ನಿಲ್ಲಿಸಿದೆ. ಎಸ್‌.ಎಲ್‌.ಘೋಟ್ನೇಕರ್‌ ಅವರ ಮೂಲಕ ಕಾಂಗ್ರೆಸ್‌ (Congress) ವಶದಲ್ಲಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಲು ಪಕ್ಷದ ತೀವ್ರ ಪ್ರಯತ್ನ ಹಾಗೂ ಹೇಗಾದರೂ ಮಾಡಿ ಕ್ಷೇತ್ರವನ್ನು ಉಳಿಸಿಕೊಳ್ಳಬೇಕೆಂಬ ಕಾಂಗ್ರೆಸ್ಸಿಗರ ಬಿಗಿ ಪಟ್ಟುಗಳ ನಡುವೆ ಪರಿಷತ್‌ ಚುನಾವಣೆ ನಿಧಾನವಾಗಿ ಕಾವೇರುತ್ತಿದೆ.

Tap to resize

Latest Videos

undefined

ಇದೇ ಮೊದಲ ಬಾರಿಗೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಮೇಲ್ನೋಟಕ್ಕೆ ಕಾಂಗ್ರೆಸ್‌ ಕೋಟೆಯಾಗಿದ್ದ ಈ ಕ್ಷೇತ್ರವನ್ನು ವಶಪಡಿಸಿಕೊಳ್ಳುವ ಎಲ್ಲ ಅವಕಾಶಗಳೂ ಬಿಜೆಪಿಗಿದೆ. ಆದರೆ ಈ ಅವಕಾಶವನ್ನು ಎಷ್ಟರ ಮಟ್ಟಿಗೆ ಬಿಜೆಪಿ ಅಭ್ಯರ್ಥಿ (BJP Candidate) ,  ಜನಪ್ರತಿನಿಧಿಗಳು, ನಾಯಕರು ಸದ್ಬಳಕೆ ಮಾಡಿಕೊಳ್ಳುತ್ತಾರೆ ಎನ್ನುವುದರ ಮೇಲೆ ಗೆಲುವು-ಸೋಲಿನ ಲೆಕ್ಕಾಚಾರ ನಿಂತಿದೆ. ಒಂದು ಲೆಕ್ಕಾಚಾರದ ಪ್ರಕಾರ 1600ರಷ್ಟು ಬಿಜೆಪಿ ಬೆಂಬಲಿತರು ಸ್ಥಳೀಯ ಸಂಸ್ಥೆಗಳಲ್ಲಿದ್ದಾರೆ. 1000 ದಷ್ಟು ಕಾಂಗ್ರೆಸ್‌ ಬೆಂಬಲಿತ ಸದಸ್ಯರಿದ್ದಾರೆ. ಆದರೆ ಗ್ರಾಪಂ (Grama Panchayat) ಸದಸ್ಯರ ಮೇಲೆ ರಾಜಕೀಯ ಪಕ್ಷಗಳಿಗೆ (Political Parties) ನೇರ ಹಿಡಿತ ಇಲ್ಲದ ಕಾರಣ ಸೋಲು - ಗೆಲುವಿನಲ್ಲಿ ಈ ಲೆಕ್ಕಾಚಾರವೊಂದೇ ಪಕ್ಕಾ ಆಗದು. ಜತೆಗೆ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಪ್ರಾಬಲ್ಯ ಇರುವುದರಿಂದ ಆ ಪಕ್ಷದಿಂದ ಟಿಕೆಟ್‌ (Ticket) ಆಕಾಂಕ್ಷಿಗಳ ಸಂಖ್ಯೆ 21ಕ್ಕೇರಿತ್ತು. ಅವರೆಲ್ಲರೂ ಈಗ ಪಕ್ಷದ ಅಭ್ಯರ್ಥಿಯ ಪರ ಸಕ್ರಿಯವಾಗಿ ಕೆಲಸ ಮಾಡುತ್ತಾರೆಯೇ ಇಲ್ಲವೇ ಎನ್ನುವುದೂ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.

ಕಳೆದ ಬಾರಿ ಗೆದ್ದಿದ್ದ ಕಾಂಗ್ರೆಸ್‌ನ ಎಸ್‌.ಎಲ್‌. ಘೋಟ್ನೇಕರ್‌ (SL Ghotnekar) ಈ ಬಾರಿ ಸ್ಪರ್ಧಿಸಲು ಮನಸ್ಸು ಮಾಡಿಲ್ಲ. ಆಗ ಘೋಟ್ನೇಕರ್‌ 1,742 ಮತಗಳನ್ನು ಪಡೆದು 737 ಮತಗಳ ಅಂತರದಿಂದ ಗೆದ್ದರೆ, ಅವರ ಎದುರಾಳಿ ಗಣಪತಿ ಉಳ್ವೇಕರ 1,005 ಮತಗಳನ್ನು ಪಡೆದಿದ್ದರು.

ಕಳೆದ ಬಾರಿಯ ಫಲಿತಾಂಶ

ಎಸ್‌.ಎಲ್‌.ಘೋಟ್ನೇಕರ್‌ (ಕಾಂಗ್ರೆಸ್‌)- 1743

ಗಣಪತಿ ಉಳ್ವೇಕರ (ಬಿಜೆಪಿ)- 1005

ಕಣದಲ್ಲಿರುವ ಅಭ್ಯರ್ಥಿಗಳು

ಗಣಪತಿ ಉಳ್ವೇಕರ (ಬಿಜೆಪಿ)

ಭೀಮಣ್ಣ ನಾಯ್ಕ (ಕಾಂಗ್ರೆಸ್‌)

ಸೋಮಶೇಖರ ವಿ.(ರೈತ ಭಾರತ ಪಾರ್ಟಿ)

ಈಶ್ವರ ಗೌಡ (ಪಕ್ಷೇತರ)

ದತ್ತಾತ್ರೇಯ ನಾಯ್ಕ (ಪಕ್ಷೇತರ)

ಮಹಿಳಾ ಮತದಾರರೇ ಹೆಚ್ಚು:

ಒಟ್ಟು ಮತದಾರರ ಸಂಖ್ಯೆ 2929

ಪುರುಷ ಮತದಾರರು 1394

ಮಹಿಳಾ ಮತದಾರರು 1535

  • ಉತ್ತರ ಕನ್ನಡ (Uttara Kannada) ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆ
  •  ಕಣದಲ್ಲಿ ಐವರಿದ್ದರೂ ಬಿಜೆಪಿ, ಕಾಂಗ್ರೆಸ್‌ ಮಧ್ಯೆಯೇ ಬಿಗ್ ಫೈಟ್‌ -  ಕಾಂಗ್ರೆಸ್‌ ಕ್ಷೇತ್ರ ವಶಪಡಿಸಿಕೊಳ್ಳಲು ಬಿಜೆಪಿ ಕದನ
  •  ಕಾಂಗ್ರೆಸ್‌ನಿಂದ ತೀವ್ರ ಪೈಪೋಟಿ : ತೀವ್ರ ಕುತೂಹಲ
  • ಉತ್ತರ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆ
  • ಎಸ್‌.ಎಲ್‌.ಘೋಟ್ನೇಕರ್‌ ಅವರ ಮೂಲಕ ಕಾಂಗ್ರೆಸ್‌ ವಶದಲ್ಲಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಲು ಪಕ್ಷದ ತೀವ್ರ ಪ್ರಯತ್ನ
  • ಗ್ರಾಪಂ ಸದಸ್ಯರ ಮೇಲೆ ರಾಜಕೀಯ ಪಕ್ಷಗಳಿಗೆ ನೇರ ಹಿಡಿತ ಇಲ್ಲದ ಕಾರಣ ಸೋಲು-ಗೆಲುವಿನಲ್ಲಿ ಈ ಲೆಕ್ಕಾಚಾರವೊಂದೇ ಪಕ್ಕಾ ಆಗದು
click me!