ವರದಿ : ಕಾಗತಿ ನಾಗರಾಜಪ್ಪ
ಚಿಕ್ಕಬಳ್ಳಾಪುರ (ಡಿ.02): ಕೋಲಾರ-ಚಿಕ್ಕಬಳ್ಳಾಪುರ (chikkaballapura ) ಜಿಲ್ಲೆಗಳನ್ನೊಳಗೊಂಡ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ (MLC Election) ನಡೆಯುತ್ತಿರುವ ಚುನಾವಣೆ ಇದೇ ಮೊದಲ ಬಾರಿಗೆ ತ್ರೀಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ. ಆರೋಗ್ಯ ಸಚಿವ ಡಾ.ಸುಧಾಕರ್ (Dr K Sudhakar) ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಆಗಿರುವುದರಿಂದ ಆಡಳಿತಾರೂಢ ಬಿಜೆಪಿಗೆ (BJP) ಈ ಚುನಾವಣೆ ಪ್ರತಿಷ್ಠೆಯ ಕಣವಾದರೆ, ಜೆಡಿಎಸ್‌ಗೆ (Election) ಸ್ಥಾನ ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಇದೇವೇಳೆ ಕಾಂಗ್ರೆಸ್‌ಗೆ (Congress) ಪಾಲಿಗೆ ಸ್ಥಳೀಯ ಸಂಸ್ಥೆಗಳಲ್ಲಿನ ತನ್ನ ಪಕ್ಷದ ಪ್ರಾಬಲ್ಯ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ.
ಜೆಡಿಎಸ್‌ನಿಂದ (JDS) ಕಳೆದ ಬಾರಿ ಗೆದ್ದಿರುವ ಆರ್.ಮನೋಹರ್ ಬದಲಾಗಿ ವಕ್ಕಲೇರಿ ರಾಮು ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಕಾಂಗ್ರೆಸ್‌ನಿಂದ ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದ ಅನಿಲ್ ಕುಮಾರ್ ಮತ್ತು ಬಿಜೆಪಿಯಿಂದ ಪಕ್ಷದ ಜಿಲ್ಲಾಧ್ಯಕ್ಷ ಡಾ.ಎನ್.ವೇಣುಗೋಪಾಲ ಅವರನ್ನು ಕಣಕ್ಕಿಳಿಸಲಾಗಿದೆ. ಎರಡು ಜಿಲ್ಲೆಗಳಲ್ಲಿನ ಸ್ಥಳೀಯ ಸಂಸ್ಥೆಗಳು ಮೊದಲನಿಂದಲೂ ಕಾಂಗ್ರೆಸ್ (Congress) ಪಾಲಿಗೆ ಭದ್ರಕೋಟೆ. ಕಾಂಗ್ರೆಸ್‌ಗೆ ಜೆಡಿಎಸ್ ಸಾಂಪ್ರದಾಯಿಕ ಎದುರಾಳಿ. ಆದರೆ ಇದೇ ಮೊದಲ ಬಾರಿಗೆ ಇವೆರಡರ ಪ್ರಬಲ ಸ್ಪರ್ಧೆ ನಡುವೆ ಬಿಜೆಪಿ ತನ್ನ ಅಭ್ಯರ್ಥಿ ಕಣಕ್ಕಿಳಿಸಿರುವುದು ಮತ್ತು ಸ್ಥಳೀಯ ಸಂಸ್ಥೆಗಳ ಮೇಲೆ ತನ್ನದೇ ಆದ ಹಿಡಿತ ಹೊಂದಿರುವ ಮಾಜಿ ಸಚಿವ ವರ್ತೂರು ಪ್ರಕಾಶ್‌ರನ್ನು ತನ್ನತ್ತ ಸೆಳೆದುಕೊಂಡಿರುವುದು ಕುತೂಹಲ ಕೆರಳಿಸಿದೆ.
ಅನಿಲ್‌ಗೆ ಅಗ್ನಿ ಪರೀಕ್ಷೆ: ಕಳೆದ ಚುನಾವಣೆಯಲ್ಲಿ (Election) ಎಂ.ಎಲ್.ಅನಿಲ್ ಕುಮಾರ್‌ಗೆ ಗೆಲ್ಲುವ ಅವಕಾಶ ಇದ್ದರೂ ಉಭಯ ಜಿಲ್ಲೆಗಳ ಕಾಂಗ್ರೆಸ್ ನಾಯಕರ ಒಳಜಗಳದಿಂದಾಗಿ ಜೆಡಿಎಸ್‌ನಿಂದ (JDS) ಸ್ಪರ್ಧಿಸಿದ್ದ ಸಿ.ಆರ್.ಮನೋಹರ್ ಎದುರು ಅಲ್ಪಮತಗಳ ಅಂತರದಿಂದ ಸೋಲು ಕಂಡಿದ್ದರು. ಇದೀಗ ಪುನಃ ಕಾಂಗ್ರೆಸ್ ಟಿಕೆಟ್ ಪಡೆದು ಅಗ್ನಿ ಪರೀಕ್ಷೆಗೆ ಸಜ್ಜಾಗಿದ್ದಾರೆ. ಇನ್ನು ಸಿ.ಆರ್.ಮನೋಹರ್ ಈ ಬಾರಿ ಜೆಡಿಎಸ್ ಟಿಕೆಟ್ ಸಿಗದೆ ಚುನಾವಣಾ ಕಣದಿಂದ ದೂರ ಉಳಿದಿದ್ದು ವಕ್ಕಲೇರಿ ರಾಮುವಿಗೆ ಸತ್ವ ಪರೀಕ್ಷೆ ಎದುರಾಗಿದೆ
ರಂಗೇರಿದ ಚಿತ್ರದುರ್ಗ -ದಾವಣಗೆರೆ ಕ್ಷೇತ್ರ : ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ ಚಿತ್ರದುರ್ಗ- ದಾವಣಗೆರೆ (Davanagere) ಕ್ಷೇತ್ರ ರಂಗೇರಿದೆ. ಚಿತ್ರದುರ್ಗ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಶಾಸಕರು, ಸಂಸದರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಗೆಲ್ಲುವ ಹಾಗೂ ಫಲಿತಾಂಶದ ಬಗ್ಗೆ ಖಚಿತ ಭರವಸೆಗಳಿಲ್ಲ. ಜನಪ್ರತಿನಿಧಿಗಳಿಂದ ನೇರವಾಗಿ ಜನಪ್ರತಿನಿಧಿ ಗಳ ಆಯ್ಕೆ ನಡೆಯಬೇಕಾಗಿರುವುದರಿಂದ ಸಾಮಾನ್ಯರಲ್ಲಿ ಅಷ್ಟಾಗಿ ಕುತೂಹಲಗಳಿಲ್ಲ.
ಕಳೆದ ಎರಡು ಬಾರಿ ಸ್ಪರ್ಧಿಸಿ ಸೋತಿದ್ದ ಕೆ.ಎಸ್ ನವೀನ್‌ಗೆ ಬಿಜೆಪಿ(BJP) ಇಲ್ಲಿ ಮತ್ತೆ ಟಿಕೆಟ್ ನೀಡಿದ್ದರೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿ.ಸೋಮಶೇಖರ್ ಅವರನ್ನು ಕಾಂಗ್ರೆಸ್ ಕಣಕ್ಕಿಲಿಸಿದೆ. ಉಳಿದಂತೆ ಹನುಮಂತಪ್ಪ ಎಂಬವರು ಪಕ್ಷೇತರ ರಾಗಿ ಸ್ಪರ್ಧಿಸಿದ್ದರೂ ಕಾಂಗ್ರೆಸ್, ಬಿಜೆಪಿ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.
ಅನುಕಂಪದ ಅಲೆ ನಿರೀಕ್ಷೆ: ಚಿತ್ರದುರ್ಗ ಜಿಲ್ಲೆಯ ಆರು ಹಾಗೂ ದಾವಣಗೆರೆ ಜಿಲ್ಲೆಯ ಮೂರು ತಾಲೂಕುಗಳು ಚಿತ್ರದುರ್ಗ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಬಿಜೆಪಿಯ ಇಬ್ಬರು ಲೋಕಸಭೆ ಸದಸ್ಯರು ಹಾಗೂ ಎಂಟು ಮಂದಿ ಶಾಸಕರಿದ್ದರೆ ಕಾಂಗ್ರೆಸ್‌ನ ಮೂರು ಜನ ಎಂಎಲ್‌ಎಗಳಿದ್ದಾರೆ. ಈ ಕಾರಣಕ್ಕಾಗಿಯೇ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಕಳೆದ ಎರಡು ಬಾರಿ ಸೋತಿರುವುದರಿಂದ ಅನುಕಂಪದ ಅಲೆ ನನ್ನ ಪರವಾಗಿದೆ ಎಂಬ ಸಹಜ ನಿರೀಕ್ಷೆ ಅವರದ್ದು.
ಗ್ರಾಪಂಗಳಲ್ಲಿ ‘ಕೈ’ ಮೇಲು: ಕಳೆದ ಎರಡು ಬಾರಿ ಸ್ಪರ್ಧಿಸಿ ಜಯ ಸಾಧಿಸಿದ್ದ ರಘು ಆಚಾರ್ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಬದಲಾಗಿ ರಾಮನಗರ ಮೂಲದ ಬಿ.ಸೋಮಶೇಖರ್‌ಗೆ ನೀಡಿದೆ. ಅವರು ಮೂರು ಮಂದಿ ಕಾಂಗ್ರೆಸ್ ಶಾಸಕರ ನೆಚ್ಚಿದ್ದಾರೆ. ಗ್ರಾಮ ಪಂಚಾಯ್ತಿಗಳಲ್ಲಿ ಅತಿ ಹೆಚ್ಚು ಮಂದಿ ಕಾಂಗ್ರೆಸ್ (Congress) ಸದಸ್ಯರಿದ್ದಾರೆ. ಹಿಂದುಳಿದ ಸಮುದಾಯದವರೇ ಹೆಚ್ಚು ಇದ್ದಾರೆ. ಇದಲ್ಲದೆ ಆಡಳಿತ ವಿರೋಧಿ ಅಲೆ ಇರುವುದರಿಂದ ಗೆಲವು ನಮ್ಮದಾಗುತ್ತದೆ ಎಂಬ ವಿಶ್ವಾಸ ಹೊಂದಿದ್ದಾರೆ.