ಕಾಂಗ್ರೆಸ್‌ನಲ್ಲಿ‌ ಸಿಎಂ ಖುರ್ಚಿ ರೇಸ್: ಸಿದ್ದರಾಮಯ್ಯ ಪ್ರಕರಣ ಏನಾಗುತ್ತೆ ನೋಡೋಣ, ಬಿ.ಕೆ.ಹರಿಪ್ರಸಾದ್

By Girish Goudar  |  First Published Sep 3, 2024, 1:46 PM IST

ಪ್ರಜಾಪ್ರಭುತ್ವದಲ್ಲಿ ಅವರ ಅನಿಸಿಕೆ ಹೇಳಲು ಆಸ್ಪದ ಇದೆ, ಅದನ್ನ ಹೇಳ್ತಾ ಇದ್ದಾರೆ. ನಾನು ಯಾವುದೇ ರೇಸ್ ನಲ್ಲಿ ಇಲ್ಲ, ರೇಸ್ ನಲ್ಲಿ ಓಡುವ ಕುದುರೆಯೂ ಅಲ್ಲ, ಕತ್ತೆಯೂ ಅಲ್ಲ. ಆ ಪ್ರಶ್ನೆನೇ ಬೇಡಾ. ಈಗ ನ್ಯಾಯಾಂಗದ ಹೋರಾಟ ನಡೀತಿದೆ, ಆಗಲಿ ಎಂದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ 


ಮಂಗಳೂರು(ಸೆ.03):  ಕಾಂಗ್ರೆಸ್‌ನಲ್ಲಿ‌ ಮುಖ್ಯಮಂತ್ರಿ ಪಟ್ಟಕ್ಕಾಗಿ ರೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದಾಗ ನಮ್ಮ ನಾಯಕರು ಉತ್ತರಗಳನ್ನ ಕೊಡ್ತಿದ್ದಾರೆ, ಏನೂ ಮಾಡಕ್ಕಾಗಲ್ಲ. ಅವೆಲ್ಲಾ ತೀರ್ಮಾನ ಆಗೋದು ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯಲ್ಲಿ. ಸಿದ್ದರಾಮಯ್ಯನವರ ಈ ಪ್ರಕರಣ ಏನಾಗುತ್ತೆ ನೋಡೋಣ. ಇನ್ನೂ ಪ್ರಕರಣ ಇತ್ಯರ್ಥ ಆಗಿಲ್ಲ, ತೀರ್ಪು ಬರುತ್ತೋ, ಇಲ್ವಾ ಗೊತ್ತಿಲ್ಲ. ಇದು ಕಾನೂನಿನ ಹೋರಾಟ, ಕಾನೂನಿನ ಹೋರಾಟ ನಡೆಯುವ ವೇಳೆ ಏನೇ ಮಾಡಿದ್ರು ನ್ಯಾಯಾಂಗ ನಿಂದನೆ ಆಗುತ್ತೆ. 135 ಜನ ಶಾಸಕರಿದ್ದಾರೆ, ಇಂಗ್ಲೀಷ್‌ನಲ್ಲಿ ವನ್ ಎಮಾಂಗ್ ಈಕ್ವಲ್ಸ್ ಅಂತಾರೆ. ಹೀಗಾಗಿ ಅವರ ಅವರ ಅನಿಸಿಕೆ ಅವರವರು ಹೇಳ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. 

ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್ ಅವರು, ಪ್ರಜಾಪ್ರಭುತ್ವದಲ್ಲಿ ಅವರ ಅನಿಸಿಕೆ ಹೇಳಲು ಆಸ್ಪದ ಇದೆ, ಅದನ್ನ ಹೇಳ್ತಾ ಇದ್ದಾರೆ. ನಾನು ಯಾವುದೇ ರೇಸ್ ನಲ್ಲಿ ಇಲ್ಲ, ರೇಸ್ ನಲ್ಲಿ ಓಡುವ ಕುದುರೆಯೂ ಅಲ್ಲ, ಕತ್ತೆಯೂ ಅಲ್ಲ. ಆ ಪ್ರಶ್ನೆನೇ ಬೇಡಾ. ಈಗ ನ್ಯಾಯಾಂಗದ ಹೋರಾಟ ನಡೀತಿದೆ, ಆಗಲಿ ಎಂದು ತಿಳಿಸಿದ್ದಾರೆ. 

Latest Videos

undefined

'ಕೈ'ಕಮಾಂಡ್ ಕೈಯಲ್ಲಿ ಸಿದ್ದರಾಮಯ್ಯ ಸಿಂಹಾಸನ ಭವಿಷ್ಯ: ತಲೆದಂಡವೋ.. ಪದತ್ಯಾಗವೋ.. ರಣರಂಗದಲ್ಲಿ ಕುಸ್ತಿಯೋ..?

ಕೋವಿಡ್ ಹಗರಣದ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆ ವಿಚಾರದ ಬಗ್ಗೆ ಮಾತನಾಡಿದ ಹರಿಪ್ರಸಾದ್‌, ಡಾ.ಕೆ ಸುಧಾಕರ್ ಅವರು ಆರೋಗ್ಯ ಮಂತ್ರಿಯಾಗಿದ್ದರು. ಕರ್ನಾಟಕ ರಾಜ್ಯದಲ್ಲಿ ನಾಲ್ಕು ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ. ವ್ಯಾಕ್ಸಿನ್ ಅವ್ಯವಸ್ಥೆ ಹೇಗಿತ್ತು ಅನ್ನೋದನ್ನ ಜನ ನೋಡಿದ್ದಾರೆ. ಕೋವಿಡ್ ಬಂದಾಗ ಒಳ್ಳೆಯ ಹೋಟೇಲ್ ನಲ್ಲಿ ಸ್ವಿಮ್ಮಿಂಗ್ ಮಾಡ್ತಿದ್ದನ್ನು ನೋಡಿದ್ದೀವಿ. ಅದರ ಬಗ್ಗೆ ಅವರು ಮಾತನಾಡದೇ ಇರೋದು ಒಳ್ಳೆಯದು. ವರದಿ ಏನು ಬಂದಿದೆ? ಅದರಲ್ಲಿ ಏನ್ ಸತ್ಯ ಇದೆ ಅದು ಹೊರಗಡೆ ಬರಲಿ. ತಪ್ಪಾಗಿದ್ರೆ ಅವರು ಶಿಕ್ಷೆ  ಅನುಭವಿಸಲು ಮುಂದಾಗಲಿ ಎಂದು ಹೇಳಿದ್ದಾರೆ. 

click me!