ಚಾಮುಂಡಿ ಬೆಟ್ಟಕ್ಕೆ ಸಿಎಂ ಕಾಲಿಟ್ಟಾಗಲೇ ಆಯ್ತಾ ಅಪಶಕುನ, ಚಾಮುಂಡೇಶ್ವರಿಯ ಪ್ರಸಾದ ಪಡೆಯದ ಮಹದೇವಪ್ಪ!

By Santosh Naik  |  First Published Sep 3, 2024, 12:32 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದಾಗ ಅಪಶಕುನ ಎದುರಾಗಿದೆ. ಬೆಟ್ಟದ ನಿವಾಸಿಯೊಬ್ಬರು ನಿಧನರಾದ ಹಿನ್ನೆಲೆಯಲ್ಲಿ ದೇವಾಲಯವನ್ನು ಕೆಲಕಾಲ ಬಂದ್ ಮಾಡಲಾಗಿತ್ತು. ಸಿಎಂ ಆಗಮನದ ಮೊದಲು ಅಂತ್ಯಕ್ರಿಯೆ ನೆರವೇರಿಸಿ, ದೇಗುಲವನ್ನು ಶುದ್ಧೀಕರಣ ಮಾಡಲಾಯಿತು.


ಮೈಸೂರು (ಸೆ.3): ಮುಡಾ ಕೇಸ್‌ನ ವಿಚಾರವಾಗಿ ಪ್ರಾಸಿಕ್ಯೂಷನ್‌ ಸಂಕಷ್ಟದಲ್ಲಿರುವ ಸಿಎಂ ಸಿದ್ದರಾಮಯ್ಯ ಸಂಪೂರ್ಣವಾಗಿ ವಿಚಲಿತರಾದಂತೆ ಕಂಡುಬಂದಿದ್ದಾರೆ. ಅವರ ಒಂದೊಂದು ನಡೆಗಳು ಕೂಡ ಸಿದ್ದರಾಮಯ್ಯ ಅವರಿಗೆ ಈ ಕೇಸ್‌ ಸಾಕಷ್ಟು ಸಮಸ್ಯೆ ತಂದೊಡ್ಡಿದೆ ಎನ್ನುವುದನ್ನು ಸಾಬೀತು ಮಾಡಿದೆ. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಚಾಮುಂಡಿ ಬೆಟ್ಟಕ್ಕೆ ಕಾಲಿಟ್ಟಾಗಲೇ ಅಪಶಕುನ ಎದುರಾಗಿದೆ. ಕುಟುಂಬದ ಹೆಸರಿನಲ್ಲಿ ಪೂಜೆ ನಡೆಸಲು ಸಿಎಂ ಚಾಮುಂಡಿ ಬೆಟ್ಟಕ್ಕೆ ಬಂದಾಗಲೇ, ಬೆಟ್ಟದ ನಿವಾಸಿಯೊಬ್ಬರು ನಿಧನರಾಗಿದ್ದ ವಿಚಾರ ಗೊತ್ತಾಗಿತ್ತು. ಇದರಿಂದಾಗಿ ಚಾಮುಂಡೇಶ್ವರಿ ದೇಗುಲ ಇಂದು ಬೆಳಿಗ್ಗೆ ಕೆಲ ಕಾಲ ದೇವಾಲಯ ಬಂದ್ ಮಾಡಲಾಗಿತ್ತು. ಚಾಮುಂಡಿ ಬೆಟ್ಟದ ನಿವಾಸಿ 50 ವರ್ಷದ ಭೂತಯ್ಯ ಎನ್ನುವವರು ಅನಾರೋಗ್ಯದ ಕಾರಣ ಸೋಮವಾರ ನಿಧನರಾಗಿದ್ದರು. ಇಂದು ಸಿಎಂ ಸಿದ್ದರಾಮಯ್ಯ ಚಾಮುಂಡಿ ಬೆಟ್ಟಕ್ಕೆ ಬರುವ ಸಮಯದಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಚಾಮುಂಡಿ ಬೆಟ್ಟದಿಂದ ಶವ ಕೊಂಡೊಯ್ದ ಬಳಿಕ ದೇಗುಲ ಶುದ್ದೀಕರಣ ಮಾಡಲಾಗಿದೆ. ಬಳಿಕ ಚಾಮುಂಡೇಶ್ವರಿ ಅಮ್ಮನವರಿಗೆ ಅಭಿಷೇಕ ನೆರವೇರಿಕೆ ಮಾಡಲಾಗಿದೆ. ಸಿಎಂ ಭೇಟಿ ಹಿನ್ನೆಲೆ ಇಂದು ಬೆಳಿಗ್ಗೆ ಮೃತದೇಹವನ್ನ ನಿವಾಸಿಗಳು ಬೆಟ್ಟದಿಂದ ಕೊಂಡೊಯ್ದಿದ್ದಾರೆ.

ಚಾಮುಂಡಿಬೆಟ್ಟಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿದ ಬಳಿಕ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಪೂಜೆ ಸಲ್ಲಿಸಿದ ಬಳಿಕ ಸಿಎಂ ಚಾಮುಂಡೇಶ್ವರಿ ಪ್ರಾಧಿಕಾರದ ಸಭೆಯಲ್ಲಿ ಭಾಗಿಯಾದರು. ಈ ವೇಳೆ ಸಿಎಂಗೆ ಸಚಿವ‌ ಮಹದೇವಪ್ಪ, ವೆಂಕಟೇಶ್, ಹೆಚ್.ಕೆ.ಪಾಟೀಲ್ ಸಾಥ್‌ ನೀಡಿದ್ದರು.

Tap to resize

Latest Videos

23 ದಿನಗಳಲ್ಲಿ ಎರಡನೇ ಬಾರಿಗೆ ಚಾಮುಂಡಿ ತಾಯಿ ದರ್ಶನ ಮಾಡಿದ್ದಾರೆ. ನಾಡದೇವಿಗೆ ಅವರು ವಿಶೇಷ ಪ್ರಾರ್ಥನೆಯನ್ನೂ ಸಲ್ಲಿಸಿದ್ದಾರೆ. ಆ ಬಳಿಕ ದೇವಸ್ಥಾನದ ಹೊರಗೆ ಈಡುಗಾಯಿಯನ್ನೂ ಒಡೆದಿದ್ದಾರೆ. ತಾಯಿ ಚಾಮುಂಡೇಶ್ವರಿ ಮುಂದೆ ಪ್ರಾರ್ಥಿಸಿ ಈಡುಗಾಯಿ ಒಡೆದಿದ್ದಾರೆ. ತೆಂಗಿನಕಾಯಿ ಮೇಲೆ ಕರ್ಪೂರ ಹಚ್ಚಿ, ತಾಯಿಗೆ ಪೂಜಿಸಿ ಈಡುಗಾಯಿ ಅರ್ಪಣೆ ಮಾಡಿದರು. ಪೂಜೆ ಸಲ್ಲಿಕೆ ಮಾಡಿದ ಬಳಿಕ ಸಿಎಂ ಹಣೆಗೆ ಕುಂಕುಮ ಕೂಡ ಇಟ್ಟುಕೊಂಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೆಸರಿನಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಕೆ ಮಾಡಿದ ಬಳಿಕ ಅರ್ಚಕರು ಸಿಎಂ ಹಣೆಗೆ ಕುಂಕುಮ ಇಟ್ಟರು. ಬಳಿಕ ಚಾಮುಂಡೇಶ್ವರಿ ಪಾದುಕೆಗೆ ಸಿದ್ದರಾಮಯ್ಯ ನಮಸ್ಕಾರ ಮಾಡಿದ್ದಾರೆ. ಭಕ್ತಯಿಂದ ಚಾಮುಂಡೇಶ್ವರಿಗೆ ಪ್ರಾರ್ಥನೆ ಮಾಡಿಕೊಂಡ ಸಿಎಂ ಬಳಿಕ ಗಣಪತಿ, ಆಂಜನೇಯ ಸೇರಿದಂತೆ ಇತರ ದೇವರುಗಳಲ್ಲೂ ಪೂಜೆ ಮಾಡಿದ್ದಾರೆ.

ಮುಡಾ ಕೇಸ್: ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ಕೊಟ್ಟವರಿಗೆ ದಂಡ ವಿಧಿಸಿ; ವಕೀಲ ಅಭಿಷೇಕ್ ಮನು ಸಿಂಘ್ವಿ ಮನವಿ!

ಚಾಮುಂಡೇಶ್ವರಿ ಪ್ರಸಾದ ಪಡೆಯದ ಮಹದೇವಪ್ಪ:  ಸಿಎಂ ಜೊತೆ ಹೆಚ್.ಸಿ.ಮಹದೇವಪ್ಪ ಕೂಡ ಚಾಮುಂಡೇಶ್ವರಿ ದರ್ಶನ ಪಡೆದುಕೊಂಡಿದ್ದಾರೆ. ಚಾಮುಂಡೇಶ್ವರಿ ದೇವಿಯ ಕುಂಕುಮ ಹಾಗೂ ಹೂ ಅನ್ನು ಸಿಎಂ ಸಿದ್ದರಾಮಯ್ಯ ಪಡೆದುಕೊಂಡರು.  ಈ ವೇಳೆ ಮಹದೇವಪ್ಪಗೂ ಪ್ರಸಾದ ನೀಡಲು ಅರ್ಚಕರು ಮುಂದಾಗಿದ್ದಾರೆ. ಈ ಹಂತದಲ್ಲಿ ಕೈ ಸನ್ನೆಯಲ್ಲೇ ನನಗೆ ಬೇಡಾ ಎಂದು ಮಹದೇವಪ್ಪ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿರುವ ಸ್ನೇಹಮಯಿ ಕೃಷ್ಣ ಒಬ್ಬ ರೌಡಿಶೀಟರ್: ಎಂ ಲಕ್ಷ್ಮಣ್

click me!