
ಧಾರವಾಡ, (ಫೆ.08): ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಕಿಂಗ್ ಮೇಕರ್ ಆಗುತ್ತಾರೆ ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ, ರಾಜಕೀಯವಾಗಿ ಏನಾದರೂ ಹೆಚ್ಚು-ಕಮ್ಮಿಯಾದರೆ ನಮ್ಮದೇ ಸರ್ಕಾರ ಎಂಬ ಅರ್ಥದಲ್ಲಿ ಕುಮಾರಸ್ವಾಮಿ ಮಾತನಾಡಿದ್ದಾರೆ. ಕುಮಾರಸ್ವಾಮಿ ಮತ್ತೆ ನಮ್ಮ ಸರ್ಕಾರ ಅಂತ ಯಾವ ಅರ್ಥದಲ್ಲಿ ಹೇಳುತ್ತಾರೆಯೋ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಪುಟ ವಿಸ್ತರಣೆ ಬೆನ್ನಲ್ಲೇ ಹೊಸ ಬಾಂಬ್ ಸಿಡಿಸಿದ HDK:ಬಿಜೆಪಿಯಲ್ಲಿ ಏನಾಗುತ್ತೆ..?
ನಮ್ಮದೇ ಸರ್ಕಾರ ಎನ್ನುವುದು ಬಹಳ ಕಷ್ಟ, ಬಿಜೆಪಿಯವರು ಈಗ 120 ಜನ ಶಾಸಕರಿದ್ದಾರೆ. ಬಿಜೆಪಿಯಲ್ಲಿ ಅತೃಪ್ತರ ಗುಂಪು ಜಾಸ್ತಿ ಆಗಿದ್ದರೂ ಅವರ ಹೈಕಮಾಂಡ್ ಗಟ್ಟಿ ಇದೆ ಅಂತ ಇನ್ನೂ ಸುಮ್ಮನಿದ್ದಾರೆ. ಆದರೆ ಕೆಲ ಬಿಜೆಪಿಯವರಿಗೆ ಒಳಗಿಂದೊಳಗೆ ಬಹಳ ನೋವುಗಳಿವೆ ಎಂದರು.
ನನಗೆ ಅನಿಸಿದಂತೆ ಸರ್ಕಾರದಲ್ಲಿ ಅತೃಪ್ತಿ ಹೊಗೆ ಶುರುವಾದರೆ ಅದು ಬಹಳ ಕಷ್ಟ. ಆಗ ಕೆಲ ಶಾಸಕರು ಹೆಚ್ಚು ಕಮ್ಮಿ ಮಾಡಿದರೆ ಆಪರೇಷನ್ ಕಮಲ ಹೋಗಿ ಬೇರೆನೇ ಆಗುತ್ತೆ. ಬೇರೆ ಆಪರೇಷನ್ ಆದರೆ ಸಹಜವಾಗಿ ಕುಮಾರಸ್ವಾಮಿ ಕಿಂಗ್ ಮೇಕರ್ ಆಗುತ್ತಾರೆ ಎಂದು ಹೊರಟ್ಟಿ ಬಾಂಬ್ ಸಿಡಿಸಿದರು.
ಇನ್ನು ಎಂಎಲ್‍ಸಿ ಚುನಾವಣೆಯಲ್ಲಿ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಬೇಡ ಅಂತ ಪಕ್ಷೇತರನನ್ನು ನಿಲ್ಲಿಸಿ ಬೆಂಬಲಿಸುತ್ತಿದ್ದಾರೆ. ಅದರ ಹಿಂದೆ ನಿರ್ದಿಷ್ಟವಾದ ಐಡಿಯಾ ಇದೆ ಎಂದು ಹೊರಟ್ಟಿ ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.