BJP Government: ಶಾಸಕರೇ 8-10 ಪರ್ಸೆಂಟ್‌ ಮುಂಗಡ ನೀಡಿ ಕೆಲಸ ಮಾಡಿಕೊಳ್ಳುತ್ತಿದ್ದಾರೆ: ಕಂದಕೂರ

By Kannadaprabha News  |  First Published Dec 29, 2021, 12:51 PM IST

*   ವಿಪಕ್ಷ ಶಾಸಕರಿಗೆ ಅನುದಾನದಲ್ಲಿ ತಾರತಮ್ಯ
*   ಅಧಿವೇಶನದಲ್ಲಿ ಉ-ಕ ಬಗ್ಗೆ ಚರ್ಚೆಯಾಗಿದ್ದೇ 5 ಗಂಟೆ
*   ಬಿಲ್‌ ಪಾಸ್‌ ಮಾಡಿಕೊಳ್ಳಲು ಬಹುತೇಕ ಸಮಯ 
 


ಯಾದಗಿರಿ(ಡಿ.29): ಉತ್ತರ ಕರ್ನಾಟದ(North Karnataka) ಸಮಸ್ಯೆಗಳ ಬಗ್ಗೆ ಚರ್ಚಿಸಲೆಂದೇ ಬೆಳಗಾವಿಯಲ್ಲಿ 109 ದಿನಗಳ ಕಾಲ ನಡೆದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಬಗ್ಗೆ ಕೇವಲ ಗಂಟೆಗಳ ಮಾತ್ರ ಚರ್ಚೆಯಾಯ್ತೇ ಹೊರತು, ಸರ್ಕಾರ ಬಿಲ್‌ಗಳ ಪಾಸ್‌ ಮಾಡಲೆಂದು ಹೆಚ್ಚಿನ ಸಮಯ ವ್ಯಯಿಸಿತು ಎಂದು ಬೆಳಗಾವಿ ಅಧಿವೇಶನ(Belagavi Assembly Session) ಕುರಿತು ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರು(Nagangouda Kandkur) ಬೇಸರ ವ್ಯಕ್ತಪಡಿಸಿದ್ದಾರೆ. 

ನಗರದಲ್ಲಿರುವ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ(BJP Government) ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು 10 ದಿನಗಳ ಕಾಲ ಬೆಳಗಾವಿಯಲ್ಲಿ ಅ​ಧಿವೇಶನ ನಡೆಸಿತು. ಆದರೆ, ಆ ಭಾಗದ ಜನಪ್ರತಿನಿಧಿ​ಗಳು ಹಾಗೂ ಜನರ ನಿರೀಕ್ಷೆಯಂತೆ ಜನಪರ ಚರ್ಚೆ ನಡೆದು ಪರಿಹಾರ ಸಿಗಲಿಲ್ಲ ಎಂದರು.

Tap to resize

Latest Videos

undefined

Karnataka Politics: ಪ್ರಿಯಾಂಕ ಖರ್ಗೆ ಅಪ್ರಬುದ್ಧ ರಾಜಕಾರಣಿ: ಸಚಿವ ಬೈರತಿ

ಬಿಜೆಪಿ ಸರ್ಕಾರ ಅ​ಧಿವೇಶನಕ್ಕೂ ಮೊದಲು ತಮ್ಮ ಪ್ರಮುಖ ಬಿಲ್‌ಗಳನ್ನು ಸದನದಲ್ಲಿ ಪಾಸ್‌ ಮಾಡಿಕೊಳ್ಳಲು ಯೋಜನೆ ರೂಪಿಸಿ, ಬಹುತೇಕ ಸಮಯ ಅದಕ್ಕೆ ಕಳೆಯಿತು. ಕೇವಲ 52 ಗಂಟೆಗಳ ಕಾಲ ಮಾತ್ರ ರಾಜ್ಯದ(Karnataka) ಸಮಸ್ಯೆಗಳ ಬಗ್ಗೆ ಗದ್ದಲದ ನಡುವೆ ಚರ್ಚೆ ನಡೆಯಿತು. ಆದರೆ, ಉತ್ತರ ಕರ್ನಾಟಕದ ಬಗ್ಗೆ ಮಾತ್ರ 5 ಗಂಟೆಗಳ ಚರ್ಚೆ ನಡೆಯಿತು. ಇದರಿಂದ ಶಾಸಕರು ತಮ್ಮ ಮತಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಸಾಧ್ಯವಾಗಲಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ:

ಗುರುಮಠಕಲ್‌ ಮತಕ್ಷೇತ್ರದ ಕಡೇಚೂರ-ಬಾಡಿಯಾಳ ಕೈಗಾರಿಕಾ ಪ್ರದೇಶ ಸ್ಥಾಪನೆಗೆ 2011ರಲ್ಲಿ 3 ಸಾವಿರ ಎಕರೆ ರೈತರ(Farmers) ಭೂಮಿ ಭೂಸ್ವಾಧೀ​ನ(Land Acquisition) ಪಡಿಸಿಕೊಂಡು ಕಾಟಾಚಾರಕ್ಕೆಂಬಂತೆ ಅಲ್ಲಿ 3-4 ಸಣ್ಣ ಕಾರ್ಖಾನೆಗಳು ಆರಂಭವಾಗಿದ್ದು, ಇಡೀ ಪ್ರದೇಶ ಪರಿಸರ ಮಾಲಿನ್ಯದಿಂದ ಜನರು ಎದುರಿಸುತ್ತಿದ್ದಾರೆ. ಈಗ ಮತ್ತೆ ಸರ್ಕಾರ 3 ಸಾವಿರ ಎಕರೆ ಭೂಮಿ ಭೂಸ್ವಾ​ಧೀನ ಪಡಿಸಕೊಳ್ಳಲು ಮುಂದಾಗಿದೆ, ಈಗಾಗಲೇ ರೈತರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿ, ಯಾವುದೇ ಕಾರಣಕ್ಕೂ ಭೂಮಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, ಈ ಕುರಿತು ನಾನು ಸದನದಲ್ಲಿ ಸಮಸ್ಯೆ ಪ್ರಸ್ತಾಪಿಸಿದೆ. ಅದಕ್ಕೆ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ(Murugesh Nirani) ಪತ್ರ ಕಳುಹಿಸಿ, ಇನ್ನೂ 3 ಸಾವಿರ ಎಕರೆ ಭೂಮಿ ನೀಡಿದರೇ, ಕೇಂದ್ರ ಸರ್ಕಾರದಿಂದ(Central Government) ಸಹಕಾರ ದೊರೆತು ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆಗಳ ಸ್ಥಾಪನೆ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು, ಆದರೆ ಇಲ್ಲಿಯವರಗೆ ಅಲ್ಲಿ ಎಷ್ಟುದೊಡ್ಡ ಕಾರ್ಖಾನೆಗಳು ಸ್ಥಾಪನೆಯಾಗಿವೆ, ಎಷ್ಟು ಜನರಿಗೆ ಉದ್ಯೋಗ(Job) ದೊರೆತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಗಂಬಂಡಾ ನೀರಾವರಿ ಯೋಜನೆ:

ಜಿಲ್ಲೆಯ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ತೆಲಂಗಾಣ(Telangana) ಸರ್ಕಾರದ ಸಂಗಂಬಂಡ ನೀರಾವರಿ ಯೋಜನೆಯಿಂದ ಗುರುಮಠಕಲ್‌ ಮತಕ್ಷೇತ್ರದ 5-6 ಗ್ರಾಮಗಳು ಹಿನ್ನಿರಿನಿಂದ ರೈತರ ಬೆಳೆಗಳು ಮುಳುಗಡೆಯಾಗಿ ತೊಂದರೆಯಾಗುತ್ತಿದೆ, ಬರುವ ದಿನಗಳಲ್ಲಿ ಪ್ರಮುಖರ ನಿಯೋಗ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನು ಭೇಟಿಯಾಗಿ ಶಾಸ್ವತವಾಗಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

Karnataka Politics: ಅಭಿವೃದ್ಧಿಗಿಂತ ಅಪಪ್ರಚಾರವೇ ಕಾಂಗ್ರೆಸ್ಸಿನ ದೊಡ್ಡ ಸಾಧನೆ: ರಾಜೂಗೌಡ

ಬಿಜೆಪಿ ಸರ್ಕಾರದಲ್ಲಿ  ಭ್ರಷ್ಟಾಚಾರ ಮಿತಿ ಮೀರಿದೆ

ಯಾದಗಿರಿ: ರಾಜ್ಯ ಸರ್ಕಾರದಿಂದ ವಿರೋಧ ಪಕ್ಷ ಶಾಸಕರಿಗೆ ಅನುದಾನ ನೀಡುವಲ್ಲಿ ತಾರತಮ್ಯ ತೋರಲಾಗುತ್ತಿದೆ ಎಂದು ಆರೋಪಿಸಿದ ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರ, ಕಳೆದ 2 ವರ್ಷಗಳಿಂದ ಅನುದಾನ ನೀಡುತ್ತಿಲ್ಲ. ಅಲ್ಲದೆ ಭ್ರಷ್ಟಾಚಾರ(Corruption) ಮಿತಿ ಮೀರಿದೆ ಎಂದು ಟೀಕಿಸಿದರು.

ಸರ್ಕಾರದ ಹಲವಾರು ಯೋಜನೆಗಳ ಅನುದಾನ ತರಲು ಆಡಳಿತಾರೂಢ ಶಾಸಕರೇ 8-10 ಪರ್ಸೆಂಟ್‌ ಮುಂಗಡ ಹಣ ನೀಡಿ, ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಹಲವಾರು ಶಾಸಕರು ಬಹಿರಂಗವಾಗಿ ವ್ಯವಸ್ಥೆ ಕುರಿತು ಮಾತನಾಡಿದ್ದಾರೆ, ಜನರು ಭ್ರಮನಿರಸಗೊಂಡಿದ್ದಾರೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿಎಸ್‌ವೈ(BS Yediyurappa) ಆಡಳಿತದಲ್ಲಿ ಹೆಚ್ಚಾದ ಭ್ರಷ್ಟಾಚಾರದಿಂದ ಬೇಸತ್ತು ಬಿಜೆಪಿ ಹೈ ಕಮಾಂಡ್‌ ಅವರನ್ನು ಅಧಿ​ಕಾರದಿಂದ ಕೆಳಗಿಳಿಸಿ, ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಆದರೆ, ಮತ್ತೆ ಅವರನ್ನು ಅಧಿ​ಕಾರದಿಂದ ಕೆಳಗಿಳಿಸುವ ಷಡ್ಯಂತ್ರ ಬಿಜೆಪಿಯಲ್ಲಿ ನಡೆಯುತ್ತಿದೆ, ಬರುವ ವಿಧಾನಸಭಾ ಚುನಾವಣೆಯಲ್ಲಿ(Assembly Election) ಬಿಜೆಪಿ ಯಾವುದೇ ಕಾರಣಕ್ಕೂ ಅ​ಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.
 

click me!