ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಅದು ಬಿಜೆಪಿಗೆ ಹಾಕಿದಂತೆ ಜೆಡಿಎಸ್ ಪಕ್ಷವು ರಾಜ್ಯದಲ್ಲಿ ಬಿಜೆಪಿಯ ಬಿ ಟೀಮ್, ಕರ್ನಾಟಕದಲ್ಲಿ ಬಿಜೆಪಿ ಬೆಳೆಯಲು ಬೀಜ ಹಾಕಿದ್ದು ಕುಮಾರಸ್ವಾಮಿ ಎಂದು ಮಾಜಿ ಸಚಿವ ಹಾಗೂ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ತಿಳಿಸಿದರು.
ಶ್ರೀನಿವಾಸಪುರ (ಫೆ.02): ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಅದು ಬಿಜೆಪಿಗೆ ಹಾಕಿದಂತೆ ಜೆಡಿಎಸ್ ಪಕ್ಷವು ರಾಜ್ಯದಲ್ಲಿ ಬಿಜೆಪಿಯ ಬಿ ಟೀಮ್, ಕರ್ನಾಟಕದಲ್ಲಿ ಬಿಜೆಪಿ ಬೆಳೆಯಲು ಬೀಜ ಹಾಕಿದ್ದು ಕುಮಾರಸ್ವಾಮಿ ಎಂದು ಮಾಜಿ ಸಚಿವ ಹಾಗೂ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ತಿಳಿಸಿದರು.
ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ಗೌನಪಲ್ಲಿ ಗ್ರಾಮದಲ್ಲಿ ಬುಧವಾರ ಭಾರತ್ ಜೋಡೋ ಕಾರ್ಯಕ್ರಮ ಹಾಗೂ ನೂರಾರು ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಜೆಡಿಎಸ್ ಪಕ್ಷದಲ್ಲಿ ದೇವೇಗೌಡರು ಇದ್ದಾಗಿನ ವಾತಾವರಣವೇ ಬೇರೆ ಕುಮಾರಸ್ವಾಮಿ ರಾಜಕೀಯಕ್ಕೆ ಬಂದ ನಂತರ ಜೆಡಿಎಸ್ ಚಿತ್ರಣವೇ ಬೇರೆಯಾಗಿದೆ, ಜ್ಯಾತ್ಯತೀತ ಮನೋಭಾವವೆ ಅವರಲ್ಲಿ ಇಲ್ಲ, ಆರ್‌ಎಸ್‌ಎಸ್‌ನ ಚೆಡ್ಡಿಗಳ ಜೊತೆಯಲ್ಲಿ ನಿಕಟ ಸಂರ್ಪಕ ಬೆಳೆಸಿದ್ದಾರೆಂದು ಆರೋಪಿಸಿದರು.
Chikkaballapur: ಅಮೃತ ಕಾಲದಲ್ಲಿ ಸರ್ವಸ್ಪರ್ಶಿ ಬಜೆಟ್: ಸಚಿವ ಸುಧಾಕರ್
ಜಾತಿಗಳ ನಡುವೆ ಗೋಡೆ ನಿರ್ಮಾಣ: ಶಾಸಕ ರಮೇಶ್ ಕುಮಾರ್ ಮಾತನಾಡಿ, ದೇಶವನ್ನು ಕಟ್ಟಿರೀ ಎಂದರೆ ಜಾತಿಗಳ ಮಧ್ಯೆ ಗೋಡೆ ಕಟ್ಟುತ್ತಿದ್ದಾರೆ, ಬಡವರ ಅನ್ನಕ್ಕಾಗಲಿ, ಉದ್ಯೋಗಕ್ಕಾಗಲಿ, ರೈತ ಬಗ್ಗೆ ಆಗಲಿ ಹಾಗು ರೈತರ ಬೆಳೆ ಬಗ್ಗೆ ಆಗಲಿ ಚಕಾರವೆತ್ತುತ್ತಿಲ್ಲ, ದೇಶಕ್ಕೆ ಅಂಟಿಕೊಂಡಿರುವ ದರಿದ್ರ ಸರ್ಕಾರ ಆಡಳಿತ ನಡೆಸುತ್ತಿದ್ದೆ. ಇದರಲ್ಲಿ ಪ್ರಧಾನಿ ನರೇಂದ್ರಮೋದಿ, ಗೃಹಮಂತ್ರಿ ಇಬ್ಬರೂ ದೇಶಕ್ಕೆ ಹಿಡಿದ ಶನಿಗಳು. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಮುಖ್ಯ ಮಂತ್ರಿ ಯಾರು ಆದರೂ ಪರವಾಗಿಲ್ಲ ನಮಗೆ. ರಾಜ್ಯದ ಜನತೆ ಸಿದ್ದರಾಮಯ್ಯ ಆಗಬೇಕು ಎನ್ನುತ್ತಿದ್ದಾರೆ ಕಾರಣ ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದಾಗ ಬಡ ಜನತೆ ಅನ್ನವನ್ನು ನೀಡಿದ್ದಾರೆ ಎಂದರು.
ಬೋನಿನಲ್ಲಿ ಹಾಕಿದ್ದರು: ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ರಾಹುಲ್ ಗಾಂಧಿರನ್ನು ಆಚೆ ಬಿಡದಂತೆ ಬೋನಿನಲ್ಲಿ ಹಾಕಿದ್ದರು, ಮಹಾತ್ಮಾ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹತ್ಯೆಯಾದ ನಂತರ ರಾಹುಲ್ ಗಾಂಧಿಗೆ ಭಯ ಹುಟ್ಟಿಸಿದ್ದರು. ಅವರು ಬಿಜೆಪಿಯ ದುರಾಡಳಿತ ಸಹಿಸದೆ ಹೊರ ಬಂದು ಸತ್ತರೆ ದೇಶಕ್ಕಾಗಿ ಸಾಯುತ್ತೇನೆ ಎಂದು ಸಾವಿರಾರು ಕಿ.ಮೀ ಪಾದಯಾತ್ರೆ ಪೂರೈಸಿ ಭಾರತ್ ಜೋಡೊ ಕಾರ್ಯಕ್ರಮದಲ್ಲಿ ಸಮುದಾಯಗಳನ್ನು ಜೋಡಿಸುವ ಕೆಲಸ ಮಾಡಿದ್ದಾರೆ, ಅದು ಇಲ್ಲಗೆ ನಿಲ್ಲಬಾರದು, ಮುಂದುವರಿಸಬೇಕು ಎಂದರು.
ಸಿಡಿ ಪ್ರಕರಣ ಬಗ್ಗೆ ಸಿಎಂ ಜತೆ ಚರ್ಚಿಸುವೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್, ಮಾಜಿ ಸಚಿವ ನಜೀರ್ ಅಹಮದ್, ಜಿ.ಪಂ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಮಾತನಾಡಿದರು. ಮಾಜಿ ಶಾಸಕ ಬಿ.ಎ.ಬಾವಾ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಜಿ.ಪಂ ಮಾಜಿ ಸದಸ್ಯರಾದ ಮ್ಯಾಕಲ ನಾರಾಯಣಸ್ವಾಮಿ, ಗೋವಿಂದಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ್ ಷರೀಫ್, ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ, ಕೋಚಿಮುಲ್ ನಿರ್ದೇಶಕ ಹನುಮೇಶ್, ಜಾಮಕಾಯಿಲ ವೆಂಕಟೇಶ್ ಇದ್ದರು.