ಹಾನಗಲ್ ಕ್ಷೇತ್ರದವರು ಎಂದರೆ ಸರ್ಕಾರಕ್ಕೆ ಮಲತಾಯಿ ಮಕ್ಕಳು ಇದ್ದ ಹಾಗೆ: ಶಾಸಕ ಶ್ರೀನಿವಾಸ್ ಮಾನೆ

By Govindaraj S  |  First Published Nov 2, 2022, 3:34 PM IST

ಅನುದಾನ ಕೊಡುವ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾರತಮ್ಯ ಮಾಡ್ತಿದ್ದಾರೆ. ತಮ್ಮ ಶಾಸಕರಿಗೆ 60 ರಿಂದ 70 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿದ್ದಾರೆ. ಆದರೆ ನಮಗೆ ಕೇವಲ 25 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 


ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ

ಹಾವೇರಿ (ನ.02): ಅನುದಾನ ಕೊಡುವ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾರತಮ್ಯ ಮಾಡ್ತಿದ್ದಾರೆ. ತಮ್ಮ ಶಾಸಕರಿಗೆ 60 ರಿಂದ 70 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿದ್ದಾರೆ. ಆದರೆ ನಮಗೆ ಕೇವಲ 25 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಾನಗಲ್ ಶಾಸಕರಾಗಿ 1 ವರ್ಷ ಅವಧಿ ಪೂರೈಸಿದ ಹಿನ್ನೆಲೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಶಾಸಕ ಮಾನೆ, ಸರ್ಕಾರದ ನಡೆ ಖಂಡಿಸಿದರು. 

Tap to resize

Latest Videos

undefined

ಹಾವೇರಿ ಜಿಲ್ಲೆ ಮುಖ್ಯಮಂತ್ರಿಗಳ ಜಿಲ್ಲೆ. ಅವರು ಎಲ್ಲರನ್ನೂ ಸಮಾನವಾಗಿ ನೋಡಬೇಕು. ಆದರೆ ಹಾನಗಲ್ ತಾಲೂಕಿನ ವಿಚಾರದಲ್ಲಿ ಸಿಎಂ ಬೊಮ್ಮಾಯಿಯವರು ತಾರತಮ್ಯ ನಡೆಸಿದ್ದಾರೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳೂ ನಮ್ಮವೇ ಎಂಬ ಭಾವನೆ ಸಿಎಂ ಅವರಿಗೆ ಇರಬೇಕು. ಆದರೆ ಹಾನಗಲ್ ಕ್ಷೇತ್ರದವರು ಎಂದರೆ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಈ ಜಿಲ್ಲೆ ಮಾದರಿ ಜಿಲ್ಲೆ ಆಗಬೇಕು. ಇದಕ್ಕಾಗಿ ಎಲ್ಲರೂ ಶ್ರಮಿಸುವ ಅಗತ್ಯ ಇದೆ. ನಮ್ಮ ತಾಲೂಕಿನ ಬೇಡಿಕೆಗಳನ್ನು ಕೂಡಾ ಸಿಎಂ ಈಡೇರಿಸಬೇಕಿದೆ ಎಂದು ಆಗ್ರಹಿಸಿದರು.

ಹಾವೇರಿ ಮೆಡಿಕಲ್‌ ಕಾಲೇಜು ಕಟ್ಟಡದಲ್ಲೇ ತರಗತಿ ಆರಂಭಕ್ಕೆ ಸಿದ್ಧತೆ

ಎಲ್ಲಾ ವಿಷಯಗಳಲ್ಲೂ ಸರ್ಕಾರ ಬೇಧ ತೋರುತ್ತಿದೆ. ಮಳೆಯಿಂದ ಶಾಲಾ ಕೊಠಡಿಗಳು ಹಾಳಾಗಿವೆ. ಬೇರೆ ಶಾಸಕರಿಗೆ 40 ಶಾಲಾ ಕೊಠಡಿಗಳನ್ನು ಮಂಜೂರು ಮಾಡಿದ್ದರೆ ನಮಗೆ ಕೇವಲ 20 ಶಾಲಾ ಕೊಠಡಿ ಕೊಟ್ಟಿದ್ದಾರೆ.ಬೇರೆ ತಾಲೂಕಿನಲ್ಲಿ ಸಿಬ್ಬಂದಿ ಕೊರತೆ ಇದ್ದರೆ ಹಾನಗಲ್ ತಾಲೂಕಿನ ಸಿಬ್ಬಂದಿ ವರ್ಗಾವಣೆ ಮಾಡಿ ಹಾಕಿಕೊಳ್ತಾರೆ. ಹಾನಗಲ್ ಪುರಸಭೆಯಲ್ಲಿ ರೆವೆನ್ಯೂ  ಇನ್ಸ್ಪೆಕ್ಟರ್ ಇಲ್ಲ. ಸಿಬ್ಬಂದಿ ‌ಕೊರತೆ ಇದೆ ಎಂದು ಅಸಮಾಧಾನ ಹೊರ ಹಾಕಿದರು.

ಅಕ್ಕಿಆಲೂರು ಆರ್ಥಿಕ ವ್ಯವಸ್ಥೆಗೆ ಅರ್ಬನ್‌ ಬ್ಯಾಂಕ್‌ ಊರುಗೋಲು: ಅತ್ಯಂತ ಕಡಿಮೆ ಬಡ್ಡಿದರದಲ್ಲಿ ವಿವಿಧ ಯೋಜನೆಗಳ ಮೂಲಕ ಗ್ರಾಮೀಣ ಭಾಗದ ಜನತೆಗೆ ಸಾಲ ವ್ಯವಸ್ಥೆ ಮಾಡಿಕೊಟ್ಟು, ಆರ್ಥಿಕವಾಗಿ ಗ್ರಾಮೀಣರು ಬಲಿಷ್ಠರಾಗುವಂತೆ ಪ್ರೇರೇಪಿಸುವ ಯತ್ನ ಮುಂದುವರೆಸಿಕೊಂಡು ಸಾಗಿರುವ ಅರ್ಬನ್‌ ಬ್ಯಾಂಕ್‌ ಇದೀಗ ನೂತನ ಸೇವೆಗಳೊಂದಿಗೆ ಗ್ರಾಹಕರ ಸೇವೆಗೆ ತನ್ನನ್ನು ತಾನು ತೆರೆದುಕೊಂಡಿರುವುದು ಶ್ಲಾಘನೀಯ ಎಂದು ಶಾಸಕ ಶ್ರೀನಿವಾಸ್‌ ಮಾನೆ ಹೇಳಿದರು. 

ಪಟ್ಟಣದ ಶ್ರೀ ಕುಮಾರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಅರ್ಬನ್‌ ಕೋ-ಆಪರೇಟಿವ್‌ ಬ್ಯಾಂಕಿನ 63ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆರಂಭದಿಂದಲೇ ಈ ಭಾಗದ ಜನರ ಆಶಾಕಿರಣವಾಗಿ, ಭವಿಷ್ಯದ ಭದ್ರ ಬುನಾದಿಯಾಗಿ ಹೆಮ್ಮರವಾಗಿ ಬೆಳೆದು ನಿಂತಿರುವ ಅರ್ಬನ್‌ ಬ್ಯಾಂಕ್‌ ಜನರ ಜೊತೆಗೆ ಉತ್ತಮ ಬಾಂಧವ್ಯವಿಟ್ಟುಕೊಳ್ಳುವ ಮೂಲಕ ಗ್ರಾಮೀಣ ಭಾಗಗಳ ಅಭಿವೃದ್ಧಿಯ ಕನಸು ಕಾಣುತ್ತಿದೆ. 

ಸಹಕಾರ ಸಂಘಗಳು ರೈತರಿಗೆ ಹತ್ತಿರವಾಗುವ ಕಾರ್ಯ ಮಾಡಬೇಕು: ಸಚಿವ ಬಿ.ಸಿ.ಪಾಟೀಲ್‌

ಸಹಕಾರಿ ಬ್ಯಾಂಕ್‌ಗಳು ಹಳ್ಳಿಗರ ಜೀವನಾಡಿಯಾಗಿದ್ದು, ಆಯಾ ಭಾಗದ ಅನುಕೂಲಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿ ಸಾಲ ವಿತರಣೆ ಮಾಡುವ ಇವುಗಳ ಕಾರ್ಯ ತತ್ಪರತೆ ಅಭಿನಂದನಾರ್ಹವಾಗಿದೆ ಎಂದರು. ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಸಹಕಾರಿ ಬ್ಯಾಂಕ್‌ಗಳಲ್ಲಿ ತೆಗೆದುಕೊಂಡ ಸಾಲವನ್ನು ಸಕಾಲಕ್ಕೆ ಮರುಪಾವತಿಸಿ ಹೆಚ್ಚಿನ ಸೇವೆ ಒದಗಿಸಲು ಅನುವು ಮಾಡಿಕೊಡುವುದು ಸದಸ್ಯರೆಲ್ಲರ ಜವಾಬ್ದಾರಿಯಾಗಿದೆ. ಸಕಾಲಕ್ಕೆ ಸಾಲ ಮರುಪಾವತಿಸುವುದರಿಂದ ಇನ್ನಷ್ಟುಹೊಸ ಯೋಜನೆಗಳನ್ನು ಬಿಡುಗಡೆಗೊಳಿಸುವಲ್ಲಿ ಬ್ಯಾಂಕ್‌ಗಳಿಗೆ ನೆರವಾಗಲಿದೆ ಎಂದರು.

click me!