ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾಂದ್ ಎಂದು ಕೂಗುವ ದೇಶದ್ರೋಹಿಗಳಿಗೆ ಶಕ್ತಿ ಕೊಟ್ಟಿದ್ದೆ ಕಾಂಗ್ರೆಸ್ ಸರ್ಕಾರ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಕಿಡಿಕಾರಿದರು.
ಶಿವಮೊಗ್ಗ (ಮಾ.01): ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾಂದ್ ಎಂದು ಕೂಗುವ ದೇಶದ್ರೋಹಿಗಳಿಗೆ ಶಕ್ತಿ ಕೊಟ್ಟಿದ್ದೆ ಕಾಂಗ್ರೆಸ್ ಸರ್ಕಾರ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಇಡೀ ರಾಷ್ಟ್ರವನ್ನೇ ತಲ್ಲಣಗೊಳಿಸಿದೆ. ದೇಶ ವಿರೋಧಿ ಘೋಷಣೆ ಕೂಗಿದರೂ ಯಾವುದೇ ಕ್ರಮವನ್ನು ಕೈಗೊಳ್ಳದ ಕಾಂಗ್ರೆಸ್ ಸರ್ಕಾರ ನಿರ್ವೀಯ ಸರ್ಕಾರ. ಈ ರೀತಿ ಘೋಷಣೆ ಕೂಗುವ ದೇಶದ್ರೋಹಿಗಳಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಹರಿಹಾಯ್ದರು.
ಸಾಮಾನ್ಯವಾಗಿ ಪಾಕಿಸ್ತಾನ ಮತ್ತು ಇಂಡಿಯಾದ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ ಕೆಲವರು ‘ಪಾಕಿಸ್ತಾನ ಜಿಂದಾಬಾದ್’ ಎಂದು ಕೂಗುತ್ತಿದ್ದರು. ಆದರೆ, ಈಗ ವಿಧಾನಸೌಧದ ಆವರಣದಲ್ಲಿಯೇ ಈ ದೇಶದ್ರೋಹದ ಘೋಷಣೆ ಕೇಳಿ ಬಂದಿದೆ. ಇದಕ್ಕೆ ಶಕ್ತಿಕೊಟ್ಟಿರುವುದೇ ಕಾಂಗ್ರೆಸ್ ಸರ್ಕಾರ. ಇದನ್ನು ಪ್ರಶ್ನೆ ಮಾಡಿದರೆ ಬೇರೆ ಕಥೆಯನ್ನೇ ಕಟ್ಟುತ್ತಾರೆ. ರಾಷ್ಟ್ರಭಕ್ತಿಯನ್ನು ನಿಮ್ಮಿಂದ ಕಲಿಯಬೇಕಾಗಿಲ್ಲ ಎನ್ನುತ್ತಾರೆ. ನಾವು ಕಲಿಸಲು ಹೊರಟಿಲ್ಲ, ತಿಳಿಸಲು ಹೊರಟಿದ್ದೇವೆ ಎಂದು ಕುಟುಕಿದರು.
undefined
ಕಾಂಗ್ರೆಸ್ ಗ್ಯಾರಂಟಿಗಳನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ರಾಜ್ಯಸಭೆಗೆ ಆಯ್ಕೆಯಾದ ನಾಸೀರ್ ಹುಸೇನ್ ಅವರು ಪತ್ರಕರ್ತರು ಪ್ರಶ್ನೆ ಕೇಳಿದ್ದಕ್ಕೆ ಗೆಟ್ ಔಟ್ ಎಂದು ಹೇಳಿದ್ದಾರೆ. ಆತನಿಗೆ ಎಂತಹ ಸೊಕ್ಕು ಇದೆ. ಇವನನ್ನು ಪಾಕಿಸ್ತಾನಕ್ಕೆ ಕಳಿಸಬೇಕು ಎಂದು ಏಕವಚನದಲ್ಲೇ ಹರಿಹಾಯ್ದರು ಅವರು, ಈ ರಾಜ್ಯದಲ್ಲಿ ಇರುವುದು ಭಾರತದ ಕಾಂಗ್ರೆಸ್ ಅಲ್ಲ, ಪಾಕಿಸ್ತಾನದ ಕಾಂಗ್ರೆಸ್. ಇಂತಹ ದೇಶ ದ್ರೋಹಿಗಳನ್ನು ಮತ್ತು ದೇಶ ದ್ರೋಹದ ಮಾತನಾಡಿದರೂ ಅವರನ್ನು ರಕ್ಷಿಸುತ್ತಿರುವವರನ್ನು ಭಗವಂತನೂ ಕ್ಷಮಿಸಲಾರ ಎಂದು ಕಟುವಾಗಿ ಟೀಕಿಸಿದರು.
ಈ ಬಗ್ಗೆ ಪ್ರಶ್ನಿಸಲು ನಾನು ಸದನದಲ್ಲಿ ಅವಕಾಶ ಕೇಳಿದ್ದೆ, ಆದರೆ, ನನಗೆ ಅವಕಾಶವನ್ನೇ ಕೊಡಲಿಲ್ಲ. ಪ್ರಿಯಾಂಗ ಖರ್ಗೆ ಅವನಿಗೆ ಅವಕಾಶ ಕೊಡಬೇಡಿ, ಬೆಂಕಿ ಹಚ್ಚುತ್ತಾನೆ ಎಂದು ಸಭಾಧ್ಯಕ್ಷರಿಗೆ ಹೇಳಿದ್ದಾರೆ. ಸಣ್ಣ ಖರ್ಗೆಯವರೇ ನೀವು ನಾಲಿಗೆ ಬಿಗಿ ಹಿಡಿದು ಮಾತನಾಡಿ, ಸಭಾಧ್ಯಕ್ಷರನ್ನೇ ಕಪಿಮುಷ್ಟಿಯಲ್ಲಿಟ್ಟುಕೊಳ್ಳುವುದನ್ನು ಬಿಡಿ ಎಂದು ತಿರುಗೇಟು ನೀಡಿದರು.
ಪಾಪ ಕುಮಾರಣ್ಣ ಹೆದರಿ ಮಂಡ್ಯಕ್ಕೆ ಓಟ: ಶಾಸಕ ಬಾಲಕೃಷ್ಣ ಲೇವಡಿ
ಕಾಂಗ್ರೆಸ್ ಸರ್ಕಾರಕ್ಕೆ ಸತ್ಯ ಹೇಳಿದರೆ ಬೆಂಕಿ ಹಚ್ಚಿದ ಹಾಗೆ ಇರುತ್ತದೆಯೇ, ನಾಸೀರ್ ಹುಸೇನ್‌ನಂತವರು ದೇಶದ್ರೋಹದ ಮಾತನಾಡಿದರೆ, ಅವರನ್ನು ಸಮರ್ಥಿಸಿ ಕೊಳ್ಳಬೇಕೇ, ಇಂಥವರು ರಾಜ್ಯ ಸಭೆಗೆ ಹೋಗಬೇಕೇ, ಇದು ದೇಶ ಪ್ರೇಮವೇ, ಈ ನಾಸೀರ್ ಹುಸೇನ್ ರಾಜ್ಯ ಸಭೆಗೆ ಹೋಗಲು ಅರ್ಹನಲ್ಲ ಎಂದು ಕಿಡಿಕಾರಿದರು. ಪತ್ರಿಆಗೋಷ್ಠಿಯಲ್ಲಿ ಪ್ರಮುಖರಾದ ಮೋಹನ್ ರೆಡ್ಡಿ, ಜ್ಞಾನೇಶ್ವರ್, ಚಂದ್ರಶೇಖರ್, ನಾಗರಾಜ್, ದೀನದಯಾಳ್, ಅಣ್ಣಪ್ಪ ಇನ್ನಿತರರು ಉಪಸ್ಥಿತರಿದ್ದರು.