ಭವಾನಿ ರೇವಣ್ಣರ ಗಲಾಟೆ ಬೆನ್ನಲ್ಲೇ ಎಚ್‌ಡಿ ರೇವಣ್ಣರ ವಿರುದ್ಧ ಅವಹೇಳನಕಾರಿ ಮಾತಾಡಿದ ಶಾಸಕ ಶಿವಲಿಂಗೇಗೌಡ!

By Ravi Janekal  |  First Published Dec 5, 2023, 10:52 PM IST

ಇಂದು ಸದನದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ವಿರುದ್ಧ ಎಚ್‌ಡಿ ರೇವಣ್ಣ ಸಮರ ಸಾರಲು ಸಜ್ಜಾಗಿದ್ದಾರೆ. ಕೊಬ್ಬರಿಗೆ ಬೆಂಬಲ ಬೆಲೆ ಕುರಿತು ಮಾತಾಡುವವ ವೇಳೆ ಅಡ್ಡಿಪಡಿಸಿದ್ದಲ್ಲದೇ ಅವಹೇಳನಕಾರಿ ಪದ ಬಳಕೆ ಮಾಡಿರುವ ಶಾಸಕ ಶಿವಲಿಂಗೇಗೌಡ. ನಾಳೆ ಹಕ್ಕುಚ್ಯುತಿ ಮಂಡಿಸಲು ಮುಂದಾದ ಎಚ್‌ಡಿ ರೇವಣ್ಣ.


ಬೆಳಗಾವಿ (ಡಿ.5) ಇಂದು ಸದನದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ವಿರುದ್ಧ ಎಚ್‌ಡಿ ರೇವಣ್ಣ ಸಮರ ಸಾರಲು ಸಜ್ಜಾಗಿದ್ದಾರೆ. ಕೊಬ್ಬರಿಗೆ ಬೆಂಬಲ ಬೆಲೆ ಕುರಿತು ಮಾತಾಡುವವ ವೇಳೆ ಅಡ್ಡಿಪಡಿಸಿದ್ದಲ್ಲದೇ ಅವಹೇಳನಕಾರಿ ಪದ ಬಳಕೆ ಮಾಡಿರುವ ಶಾಸಕ ಶಿವಲಿಂಗೇಗೌಡ. ನಾಳೆ ಹಕ್ಕುಚ್ಯುತಿ ಮಂಡಿಸಲು ಮುಂದಾದ ಎಚ್‌ಡಿ ರೇವಣ್ಣ.

ಚರ್ಚೆ ಮಾಡುವ ವೇಳೆ ಅವಹೇಳನಕಾರಿ ಮಾತನಾಡಿರುವ ಶಿವಲಿಂಗೇಗೌಡರ ವಿರುದ್ಧ ನಾಳೆ ಹಕ್ಕುಚ್ಯುತಿ ಮಂಡಿಸಲು ಮುಂದಾಗಿರುವ ರೇವಣ್ಣ. ಸದನ ದ ಸದಸ್ಯ ರಾಗಿ ನಮ್ಮ ಹಕ್ಕು ಮೊಟಕುಗೊಳಿಸಲು ಯತ್ನಿಸಿದ್ದಾರೆ. ಹಾಗಾಗಿ ನ್ಯಾಯ ಕೇಳಲು ಮುಂದಾಗಲಿರುವ ರೇವಣ್ಣ. 

Tap to resize

Latest Videos

ಒಂದೂವರೆ ಕೋಟಿ ಕಾರ್, ಬೈಕ್ ಡಿಕ್ಕಿ ಬಳಿಕ ಭವಾನಿ ರೇವಣ್ಣ ದರ್ಪದ ಮಾತು ಫುಲ್ ಟ್ರೋಲ್!

ಏನಿದು ಘಟನೆ:

ಮಂಗಳವಾರ ಶೂನ್ಯವೇಳೆಯಲ್ಲಿ ಕೊಬ್ಬರಿ ಬೆಲೆ ವಿಚಾರ ಪ್ರಸ್ತಾಪ ಮಾಡಲು ಕಾಂಗ್ರೆಸ್‌ ಸದಸ್ಯ ಶಿವಲಿಂಗೇಗೌಡ ಮಾಡಲು ಮುಂದಾದರು. ತಕ್ಷಣ ಎಚ್‌.ಡಿ. ರೇವಣ್ಣ ಅವರು ತಮಗೆ ಮೊದಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು. ಜತೆಗೆ, ಸದನದ ಬಾವಿಗೆ ಜೆಡಿಎಸ್‌ ಸದಸ್ಯರು ಆಗಮಿಸಿದರು. ಪರಿಣಾಮ ಕಲಾಪ ಗದ್ದಲ, ಆರೋಪ-ಪ್ರತ್ಯಾರೋಪಕ್ಕೆ ಸಾಕ್ಷಿಯಾಯಿತು. ಇದೇ ವೇಳೆ ಎಚ್‌. ಡಿ.ರೇವಣ್ಣ ವಿರುದ್ಧ ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದಾಗ ಇಬ್ಬರ ನಡುವೆ ವಾಕ್ಸಮರ ನಡೆಯಿತು. ಸಭಾಧ್ಯಕ್ಷರು ಮಧ್ಯಪ್ರವೇಶಿಸಿ ಸ್ಪೀಕರ್‌ ಅವರು, ಶಿವಲಿಂಗೇಗೌಡ ಅವರು ಸೋಮವಾರವೇ ಸೂಚನಾ ಪತ್ರ ನೀಡಿದ್ದಾರೆ. ಹೀಗಾಗಿ ಅವರು ಮೊದಲು ಪ್ರಸ್ತಾಪಿಸಲಿ, ನಂತರ ತಾವು ಮಾಡುವಂತೆ ರೇವಣ್ಣಗೆ ಮಾಡಿದ ಮನವೊಲಿಕೆ ಯಾವುದೇ ಪ್ರಯೋಜನವಾಗಲಿಲ್ಲ.

ಈ ವೇಳೆ ಧರಣಿ ನಡೆಸಿದ್ದ ಜೆಡಿಎಸ್‍ ಸದಸ್ಯರು ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು. ಇದರಿಂದ ಆಕ್ರೋಶಗೊಂಡ ಶಿವಲಿಂಗೇ ಗೌಡರು, ಇದು ಕೀಳುಮಟ್ಟದ ರಾಜಕಾರಣ. ನಾನು ಕೇಳಿದ ಒಂದು ಪ್ರಶ್ನೆಯ ಚರ್ಚೆಗೂ ಇಲ್ಲಿ ಅಡ್ಡಿಪಡಿಸಲಾಗುತ್ತಿದೆ. ಕೊಬ್ಬರಿ ಬೆಲೆ ಕುರಿತು ಚರ್ಚೆ ಮಾಡಿ ರೈತರಿಗೆ ಅನುಕೂಲವಾದರೆ ಅದರ ಕೀರ್ತಿ ತಮಗೆ ಬರುತ್ತದೆ ಎಂಬ ಹೊಟ್ಟೆಕಿಚ್ಚಿನಿಂದ ರೇವಣ್ಣನವರ ನೇತೃತ್ವದಲ್ಲಿ ಜೆಡಿಎಸ್‍ನವರು ಗದ್ದಲ ಮಾಡುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ಹೊರಹಾಕಿದರು.

ಧರಣಿಯಲ್ಲಿದ್ದು ಕೊಂಡೇ ಜೆಡಿಎಸ್‍ ಸದಸ್ಯರು ಟೀಕೆಗಳನ್ನು ಮಾಡಿದರು. ಇದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಆರೋಪ- ಪ್ರತ್ಯಾರೋಪ ನಡೆಯಿತು. ಈ ವೇಳೆ ತಮ್ಮ ಆಕ್ರೋಶ ಮುಂದುವರಿಸಿದ ಶಿವಲಿಂಗೇಗೌಡ, ರೇವಣ್ಣ ಅವರದ್ದು ಭಂಡ ನ್ಯಾಯವಾಗಿದ್ದು, ನಿಮ್ಮ ಯೋಗ್ಯತೆಗೆ ಈ ರೀತಿ ಮಾಡುವುದು ಸರಿಯಲ್ಲ. ನಿಮ್ಮದು ಮಾನಗೆಟ್ಟ ಬುದ್ದಿ. ಜೆಡಿಎಸ್‌ ಬಿಟ್ಟು ಬಂದ ಕಾರಣಕ್ಕಾಗಿ ಈ ರೀತಿಯಾಗಿ ನನಗೆ ಅಡ್ಡಿ ಪಡಿಸುತ್ತಿದ್ದಾರೆ. ಮಾನ-ಮಾರ್ಯದೆ ಇಲ್ಲದ ಕೆಲಸ ಮಾಡುತ್ತಿದ್ದಾರೆ. ಅನಗತ್ಯವಾಗಿ ಗಲಾಟೆ ಮಾಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಇದರಿಂದ ಗದ್ದಲ ತೀವ್ರಗೊಂಡು ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ಕೇಳದ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು, ಕಲಾಪವನ್ನು ಭೋಜನಾ ವಿರಾಮಕ್ಕೆ ಮುಂದೂಡಿದರು. ನಂತರ ಬುಧವಾರ ಈ ಬಗ್ಗೆ ಚರ್ಚೆಗೆ ರೇವಣ್ಣ, ಶಿವಲಿಂಗೇಗೌಡ ಇಬ್ಬರಿಗೂ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ಭರವಸೆ ನೀಡಿದ ನಂತರ ಕಲಾಪ ಸುಗಮವಾಗಿ ನಡೆಯಿತು.

ಸದನ ಮುಂದೂಡಿಕೆ: ಸಭಾಧ್ಯಕ್ಷರಿಂದ ಸಂಧಾನ

ಭೋಜನಾ ವಿರಾಮದ ಬಳಿಕವೂ ಜೆಡಿಎಸ್‌ ಧರಣಿ ಮುಂದುವರಿಸಿತು. ಇನ್ನೊಂದೆಡೆ ಬಿಜೆಪಿ ಸದಸ್ಯರು ಸದನದಲ್ಲಿ ಸಚಿವರು ಇಲ್ಲದಿರುವ ಕಾರಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತ್ರ ಸದನಲ್ಲಿ ಉಪಸ್ಥಿತರಿದ್ದರು. ಭೋಜನಾ ವಿರಾಮದ ಬಳಿಕ ಸದನ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯ ಸುನೀಲ್‌ ಕುಮಾರ್‌ ಸಚಿವರ ಗೈರಿಗೆ ಆಕ್ಷೇಪ ವ್ಯಕ್ತಪಡಿಸಿದರು.

ನಮ್ಮ ಕುಟುಂಬ ಯಾರಿಗೂ ನೋವುಂಟು ಮಾಡಲ್ಲ: ಭವಾನಿ ಕಾರು ಅಪಘಾತ ಪ್ರಕರಣಕ್ಕೆ ಕ್ಷಮೆ ಕೇಳಿದ ಎಚ್‌ಡಿ ರೇವಣ್ಣ

ಜೆಡಿಎಸ್‌ ಮತ್ತು ಬಿಜೆಪಿ ಸದಸ್ಯರಿಂದ ತೀವ್ರ ಗೊಂದಲ ಉಂಟಾದಾಗ ಸಂಧಾನಕ್ಕಾಗಿ ಸದನವನ್ನು 10 ನಿಮಿಷಗಳ ಕಾಲ ಮುಂದೂಡಿಕೆ ಮಾಡಲಾಯಿತು. ಬಳಿಕ ಸಭಾಧ್ಯಕ್ಷ ಯು.ಟಿ.ಖಾದರ್‌ ತಮ್ಮ ಕಚೇರಿಯಲ್ಲಿ ಜೆಡಿಎಸ್‌, ಬಿಜೆಪಿ ಮತ್ತು ಕಾಂಗ್ರೆಸ್‌ನ ಕೆಲವು ಸದಸ್ಯರ ಜತೆ ಸಂಧಾನ ಸಭೆ ನಡೆಸಿದರು. ನಂತರ ಕಲಾಪ ಆರಂಭಗೊಂಡಾಗ ಬುಧವಾರಕ್ಕೆ ಕೊಬ್ಬರಿ ವಿಚಾರವಾಗಿ ಶಿವಲಿಂಗೇಗೌಡ ಮತ್ತು ಎಚ್‌.ಡಿ.ರೇವಣ್ಣ ಇಬ್ಬರಿಗೂ ಪ್ರಸ್ತಾಪಿಸಲು ಅನುವು ಮಾಡಿಕೊಡುವುದಾಗಿ ಎಂದು ಅಶ್ವಾಸನೆ ನೀಡಿದ ಬಳಿಕ ಜೆಡಿಎಸ್‌ ಸದಸ್ಯರು ಧರಣಿಯನ್ನು ವಾಪಸ್‌ ಪಡೆದು ಕಲಾಪ ಸುಗಮವಾಗಿ ನಡೆಯಲು ಅನುವು ಮಾಡಿಕೊಟ್ಟರು.

click me!