ಕ್ರಾಂತಿಕಾರಕ ಕಾಯ್ದೆಯ ರೂವಾರಿ ದೇವರಾಜ ಅರಸು: ಶಾಸಕ ದೇಶಪಾಂಡೆ

By Kannadaprabha News  |  First Published Aug 21, 2023, 5:39 PM IST

ಭೂರಹಿತ ರೈತರಿಗೆ ಭೂ ಒಡೆತನದ ಹಕ್ಕನ್ನು ನೀಡುವ ಮೂಲಕ ಭೂ ಸುಧಾರಣೆ ಎಂಬ ಕ್ರಾಂತಿಕಾರಕ ಕಾಯ್ದೆ ಜಾರಿಗೊಳಿಸಿದ ದೇವರಾಜ ಅರಸರನ್ನು ರಾಜ್ಯದ ಜನತೆ ಹಾಗೂ ಕೃಷಿಕ ವರ್ಗದವರು ಯಾವತ್ತೂ ಮರೆಯಬಾರದು ಎಂದು ಮಾಜಿ ಸಚಿವ ಹಿರಿಯ ಶಾಸಕ ಆರ್‌.ವಿ.ದೇಶಪಾಂಡೆ ಹೇಳಿದರು. 


ಹಳಿಯಾಳ (ಆ.21): ಭೂರಹಿತ ರೈತರಿಗೆ ಭೂ ಒಡೆತನದ ಹಕ್ಕನ್ನು ನೀಡುವ ಮೂಲಕ ಭೂ ಸುಧಾರಣೆ ಎಂಬ ಕ್ರಾಂತಿಕಾರಕ ಕಾಯ್ದೆ ಜಾರಿಗೊಳಿಸಿದ ದೇವರಾಜ ಅರಸರನ್ನು ರಾಜ್ಯದ ಜನತೆ ಹಾಗೂ ಕೃಷಿಕ ವರ್ಗದವರು ಯಾವತ್ತೂ ಮರೆಯಬಾರದು ಎಂದು ಮಾಜಿ ಸಚಿವ ಹಿರಿಯ ಶಾಸಕ ಆರ್‌.ವಿ.ದೇಶಪಾಂಡೆ ಹೇಳಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಳಿಯಾಳ ದಾಂಡೇಲಿ ತಾಲೂಕಾಡಳಿತದ ಜಂಟಿ ಸಹಯೋಗದಲ್ಲಿ ದೇವರಾಜ ಅರಸು ಸಭಾಭವನದಲ್ಲಿ ಆಯೋಜಿಸಿದ ದಿ.ಡಿ. ದೇವರಾಜ ಅರಸು 108ನೇ ಜನ್ಮದಿನಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದಿನ ಯುಗದಲ್ಲಿ ಮಾನವರಲ್ಲಿ ಬೆಳೆಯುತ್ತಿರುವ ಕೃತಘ್ನತೆಯ ಭಾವನೆಯಿಂದ ಸಮಾಜದ ಮತ್ತು ಜನರ ಉದ್ಧಾರಕ್ಕಾಗಿ ಮಾಡಿದ ಉತ್ತಮ ಕಾರ್ಯಕ್ರಮ,ಯೋಜನೆ ಹಾಗೂ ಈ ಯೋಜನೆಗಳ ಹರಿಕಾರರನ್ನು ಮರೆತು ಹೋಗುತ್ತಿದ್ದೇವೆ. ಸಹಾಯ ಮಾಡಿದವರನ್ನು ನೆನಪಿಸುವ ಮನಸ್ಸು ಉದಾರತೆ ಕೊರತೆ ಬೆಳೆಯಲಾರಂಭಿಸಿದೆ ಎಂದರು. 

Tap to resize

Latest Videos

ನೌಕರರ ಬೇಡಿಕೆಗಳಿಗೆ ಐಎಎಸ್‌ ಅಧಿಕಾರಿಗಳು ಅಡ್ಡಗಾಲು ಹಾಕ್ತಾರೆ: ರೇಣುಕಾಚಾರ್ಯ

ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಾನು ಹಳಿಯಾಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷನಾಗಿದ್ದೆ, ಅರಸು ಅವರು ಕೈಗೊಂಡ ಭೂಸುಧಾರಣೆ ಕಾಯ್ದೆಯ ಪರಿಣಾಮ ನಾವು ಸಹ ನೂರಾರು ಏಕರೆ ಜಮೀನು ಕಳೆದುಕೊಂಡೆವು ಎಂದು ಹಿಂದಿನ ದಿನಗಳನ್ನು ಸ್ಮರಿಸಿಕೊಂಡ ದೇಶಪಾಂಡೆ ಮೈಸೂರ ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ,ಜೀತದಾಳು ಪದ್ಧತಿ ನಿರ್ಮೂಲನೆ, ಹಿಂದುಳಿದ ವರ್ಗಗಳ ಅಭಿವೃದ್ಧಿ, ನೀರಾವರಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಯೋಜನೆ ಜಾರಿಗೊಳಿಸಿದ ಅರಸು ಅವರ ಜನಸೇವೆಯ ಸರ್ವರಿಗೂ ಮಾದರಿಯಾಗಿದೆ ಎಂದರು. 

ಅಸಮಾಧಾನ: ಕಾರ್ಯಕ್ರಮಕ್ಕೆ ಗೈರು ಹಾಜರಾದ ದಾಂಡೇಲಿ ನಗರಸಭೆ,ತಾಪಂ,ತಾಲೂಕಾಡಳಿತ, ಹಾಗೂ ಹಳಿಯಾಳದ ಪುರಸಭೆ ಅಧಿಕಾರಿಗಳ ಬಗ್ಗೆ ದೇಶಪಾಂಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಕಾರ್ಯಕ್ರಮಗಳಿಗೆ ಹೀಗೆ ಅಧಿಕಾರಿಗಳು ಗೈರಾಗುವುದು ಸರಿಯಲ್ಲ ಎಂದರು.

ಸನ್ಮಾನ: ಪ್ರೌಢಶಾಲಾ ಶಿಕ್ಷಕ ರಂಗನಾಥ ವಾಲ್ಮೀಕಿಯವರು ಅರಸು ಅವರ ಬಗ್ಗೆ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಸತಿ ನಿಯಲದ ವಿದ್ಯಾರ್ಥಿಗಳಾದ ಅಖಿಲೇಶ ಗೌಡಾ,ಹೀನಾ ಜಮಾದಾರ, ಅಜಯಕುಮಾರ ಕಾಳೆ, ಪ್ರತೀಕ್ಷಾ ಪಾಟೀಲ ಅವರನ್ನು ಶಾಸಕರು ಸನ್ಮಾನಿಸಿದರು.

ಹೋರಾಟ ನಡೆಸಿದಾಗ ಕೇಸ್‌ ಸಹಜ, ಹೆದರದಿರಿ: ಸಚಿವ ಎಸ್ಸೆಸ್‌ ಮಲ್ಲಿಕಾರ್ಜುನ

ಕಾರ್ಯಕ್ರಮದಲ್ಲಿ ತಾಪಂ ಇಒ ಪರಶುರಾಮ ಗಸ್ತೆ,ಪ್ರಭಾರೆ ತಹಸೀಲ್ದಾರ್‌ ಜಿ.ಕೆ. ರತ್ನಾಕರ, ಪಶು ವೈದ್ಯಾಧಿಕಾರಿ ಡಾ. ಕೆ.ಎಂ. ನದಾಫ್‌, ಜಿಪಂ ಮಾಜಿ ಅಧ್ಯಕ್ಷ ಕೃಷ್ಣ ಪಾಟೀಲ, ಕೆಪಿಸಿಸಿ ಸದಸ್ಯ ಸುಭಾಸ ಕೊರ್ವೆಕರ, ರಾಜು ಮೇತ್ರಿ,ರಾಮಕೃಷ್ಣ ಗುನಗಾ,ಬಿಸಿಎಂ ತಾಲೂಕು ಕಲ್ಯಾಣಾಧಿಕಾರಿ ಸುಜಾತಾ ಅಡತರೆ ಇದ್ದರು. ವಸತಿ ನಿಲಯದ ಮೇಲ್ವಿಚಾರಕ ಚಿದಾನಂದ ಚಿಕ್ಕೊಪ್ಪ ನಿರ್ವಹಿಸಿದರು.

click me!