ಆರ್‌ಎಸ್‌ಎಸ್ ಚಡ್ಡಿ ಸುಡಿ ಅಭಿಯಾನಕ್ಕೆ ಕರೆ ಕೊಟ್ಟಿರುವ ಸಿದ್ದರಾಮಯ್ಯ ವಿರುದ್ಧ ಉಡುಪಿ ಶಾಸಕ ಕೆ ರಘುಪತಿ ಭಟ್ ಕಿಡಿಕಾರಿದ್ದಾರೆ. ಸಿದ್ದರಾಮಯ್ಯಗೆ ಆರೆಸ್ಸೆಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ (ಜೂ.04): ಆರ್‌ಎಸ್‌ಎಸ್ ಚಡ್ಡಿ ಸುಡಿ ಅಭಿಯಾನಕ್ಕೆ ಕರೆ ಕೊಟ್ಟಿರುವ ಸಿದ್ದರಾಮಯ್ಯ ವಿರುದ್ಧ ಉಡುಪಿ ಶಾಸಕ ಕೆ ರಘುಪತಿ ಭಟ್ ಕಿಡಿಕಾರಿದ್ದಾರೆ. ಸಿದ್ದರಾಮಯ್ಯಗೆ ಆರೆಸ್ಸೆಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆರ್‌ಎಸ್‌ಎಸ್ ಚಡ್ಡಿ ಸಂಸ್ಕೃತಿ ಬಿಟ್ಟು ಪ್ಯಾಂಟಿಗೆ ಬಂದು ಬಹಳ ಸಮಯವಾಯಿತು. ಈಗ ನಮ್ಮ ಗಣವೇಶ ಅಂಗಿ ಪ್ಯಾಂಟ್ ಆಗಿದೆ. ಸಿದ್ದರಾಮಯ್ಯ ರಾಜಕೀಯ ಕಾರಣಕ್ಕೆ ಹೀಗೆ ಮಾತನಾಡುತ್ತಾರೆ ಎಂದು ರಘುಪತಿ ಭಟ್ ಹೇಳಿದರು.
undefined
ಚಡ್ಡಿ ಇದ್ದಿದ್ದರಿಂದ ದೇಶ ಉಳಿದಿದೆ: ಆರ್‌ಎಸ್‌ಎಸ್ ಚಡ್ಡಿ ಇದ್ದದ್ದರಿಂದ ದೇಶದಲ್ಲಿ ಒಳ್ಳೆಯ ವಾತಾವರಣ ಇದೆ, ಆರ್‌ಎಸ್‌ಎಸ್ ಇಲ್ಲದೇ ಇರುತ್ತಿದ್ದರೆ ದೇಶದ ಪರಿಸ್ಥಿತಿ ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ಆರ್‌ಎಸ್‌ಎಸ್ ಸಿದ್ದರಾಮಯ್ಯಗೆ ಏನು ಮಾಡಿದೆಯೋ ಗೊತ್ತಿಲ್ಲ, ದೇಶಭಕ್ತರ ತಯಾರು ಮಾಡುವ ಸಂಸ್ಥೆ ಆರ್‌ಎಸ್‌ಎಸ್. ರಾಷ್ಟ್ರೀಯತೆ ಮತ್ತು ಒಳ್ಳೆಯ ಶಿಕ್ಷಣ ಕೊಡುತ್ತಿರುವುದೇ ಆರೆಸ್ಸೆಸ್, ಆರೆಸ್ಸೆಸ್ ಇರುವುದರಿಂದ ಸಿದ್ದರಾಮಯ್ಯನ ಬೇಳೆ ಬೆಳೆಯುತ್ತಿಲ್ಲ, ಆರ್‌ಎಸ್‌ಎಸ್ ಏನು ಎಂಬುದು ಇಡೀ ವಿಶ್ವಕ್ಕೇ ತಿಳಿದಿದೆ ಎಂದು ಹೇಳಿದರು.
Udupi; ಕೊಲ್ಲೂರು ಕ್ಷೇತ್ರದ ಸುತ್ತಲೂ ಕೊಳಚೆ, ಭಕ್ತರಿಗೆ ಬೇಸರ
ಭಾಗವತ್ ಹೇಳಿದ್ದನ್ನು ಕಾರ್ಯಕರ್ತರು ಕೇಳುತ್ತಾರೆ: ಎಲ್ಲಾ ಮಸೀದಿಗಳಲ್ಲಿ ಶಿವಲಿಂಗ ಹುಡುಕಬೇಡಿ ಎಂದು ಕರೆಕೊಟ್ಟಿರುವ ಮೋಹನ್ ಭಾಗವತ್ ಹೇಳಿಕೆಯ ಬಗ್ಗೆ ಶಾಸಕ ಭಟ್ ಪ್ರತಿಕ್ರಿಯೆ ನೀಡಿದರು. ಭಾಗವತ್ ಹೇಳಿದ್ದನ್ನು ಖಂಡಿತವಾಗಿ ಎಲ್ಲರೂ ಕೇಳುತ್ತಾರೆ, ಎಲ್ಲಾ ಮಸೀದಿಗಳಲ್ಲಿ ದೇವರನ್ನು ಹುಡುಕಲು ಹೋಗಬೇಡಿ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಈಗ ಇರುವುದನ್ನು ಸರಿ ಮಾಡಿಕೊಳ್ಳೋಣ ಎಂಬುದು ಅದರ ಅರ್ಥ, ಕೆಲವು ಕುರುಹುಗಳು ಸಿಕ್ಕಾಗ ಜನರ ಭಾವನೆಗೆ ಧಕ್ಕೆ ಆಗುತ್ತದೆ, ನಮ್ಮ ಮೂಲಸ್ಥಾನಕ್ಕಾಗಿ ಹುಡುಕಿಕೊಂಡು ಹೋಗಿ ಜೀರ್ಣೋದ್ಧಾರ ಮಾಡುತ್ತೇವೆ. ಹಾಗಿರುವಾಗ ಕುರುಹುಗಳು ಕಂಡಾಗ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದು ಸಹಜ .ಸೌಹಾರ್ದತೆ ಇರಬೇಕೆಂಬುದು ಭಾಗವತ್ ಅವರ ಆಶಯ. ಜನರು ಭಾವನಾತ್ಮಕವಾಗಿ ಹೋರಾಟ ಮಾಡುತ್ತಿದ್ದಾರೆ, ಸಾಕ್ಷಿಗಳು ಸಿಕ್ಕಲ್ಲಿ ಹೋರಾಟ ಅಗಿಯೇ ಆಗುತ್ತದೆ ಎಂದವರು ಹೇಳಿದರು.
ಸರಕಾರಿ ಪದವಿ ಪೂರ್ವ ಹೆಮ್ಮಕ್ಕಳ ಕಾಲೇಜು ಸಾಧನೆಗೆ ಮೆಚ್ಚುಗೆ: ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ್ ಹಿಜಾಬ್ ತೊಡುವ ವಿಚಾರಕ್ಕೆ ರಾಷ್ಟ್ರಾದ್ಯಂತ ಚರ್ಚೆಗಳಾಗಿದ್ದು, ನಮ್ಮ ಕಾಲೇಜು ಪ್ರಖ್ಯಾತಿ ಮತ್ತು ಕುಖ್ಯಾತಿಗೆ ಒಳಗಾಗಿತ್ತು, ಆದರೆ ಈ ಒತ್ತಡದ ಮಧ್ಯೆ ನಮ್ಮ ಮಕ್ಕಳು ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ್ದಾರೆ ಎಂದು ಶಾಸಕ ರಘುಪತಿ ಭಟ್ ಹೇಳಿದರು. ಪರೀಕ್ಷೆ ಬರೆಯುವಾಗ ಕಾಲೇಜು ಆವರಣದಲ್ಲಿ ಗೊಂದಲಮಯ ವಾತಾವರಣ ಇತ್ತು. ಇದರ ನಡುವೆಯೂ ನಮ್ಮ ವಿದ್ಯಾರ್ಥಿನಿ ಗಾಯತ್ರಿ 625 ಅಂಕ ಗಳಿಸಿದ್ದಾಳೆ.
10 ವಿದ್ಯಾರ್ಥಿಗಳಿಗೆ ಆರುನೂರಕ್ಕೂ ಹೆಚ್ಚು ಅಂಕ ಸಿಕ್ಕಿದೆ ಅನೇಕ ವಿದ್ಯಾರ್ಥಿಗಳು ಡಿಸ್ಟ್ರಿಂಕ್ಷನ್ ಪಡೆದಿರುವುದು ಹೆಮ್ಮೆ ತಂದಿದೆ. ಕೇವಲ ಕಾಲೇಜಿನ ಹೊರಗೆ ಗೊಂದಲ ಇತ್ತು ಎಂಬುದು ಸಾಬೀತಾಗಿದೆ, ಕಾಲೇಜಿನ ಅಡ್ಮಿಶನ್ ಈ ವರ್ಷ ಹೆಚ್ಚಾಗಿದೆ. ಎಲ್ಲಾ ಧರ್ಮದ ವಿದ್ಯಾರ್ಥಿನಿಯರು ಕಾಲೇಜಿಗೆ ಸೇರಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ನಮ್ಮ ಕಾಲೇಜಿನ ಬೇಡಿಕೆ ಹೆಚ್ಚಾಗಿದೆ. ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಹೊಸ ವಿಭಾಗ ಆರಂಭಿಸಲಾಗಿದೆ, ಕಾಮರ್ಸ್ ನಲ್ಲೂ ಕಂಪ್ಯೂಟರ್ ಸೈನ್ಸ್ ವಿಭಾಗ ಅರಂಭಿಸಿದ್ದೇವೆ, ಮುಸಲ್ಮಾನ ವಿದ್ಯಾರ್ಥಿನಿಯರ ಸಂಖ್ಯೆ ಕೂಡ ಈ ಬಾರಿ ಹೆಚ್ಚಾಗಿದೆ ಎಂದರು.
ಉಡುಪಿ: ತಲವಾರ್ ಹಿಡಿದು ಬರ್ತ್ ಡೇ ಆಚರಣೆ: ಮೂವರ ಹೆಡೆಮುರಿ ಕಟ್ಟಿದ ಪೊಲೀಸರು
ಪತ್ರಕರ್ತರ ಮೇಲಿನ ಹಲ್ಲೆಗೆ ಸೂಕ್ತ ಉತ್ತರ ನೀಡಬೇಕು: ಉಪ್ಪಿನಂಗಡಿ ಕಾಲೇಜಿನಲ್ಲಿ ನಡೆದಿರುವ ಘಟನೆಯ ಬಗ್ಗೆ ಮಾತನಾಡಿ, ಇವರೆಲ್ಲಾ ಕಾನೂನನ್ನು ಕೈಗೆತ್ತಿಕೊಳ್ಳುವವರು, ಸರ್ಕಾರ ಹಾಗು ಕೋರ್ಟ್ ಆದೇಶ ಸ್ಪಷ್ಟವಾಗಿದೆ. ಈಗಲೂ ಹಿಜಾಬ್ ಬಗ್ಗೆ ಒತ್ತಡ ಹಾಕುವವರು ಕ್ರಿಮಿನಲ್ ಗಳು. ಮಾಧ್ಯಮಗಳ ಮೇಲೆ ಹಲ್ಲೆ ಮಾಡುವವರೆಗೆ ಮತಾಂಧರು ಬೆಳೆದಿದ್ದಾರೆ, ಇದಕ್ಕೆ ಸರಿಯಾದ ಉತ್ತರ ಸಮಾಜ ಕೊಡಬೇಕಾಗುತ್ತದೆ ಎಂದು ತೀಕ್ಷವಾಗಿ ಪ್ರತಿಕ್ರಿಯಿಸಿದರು. ಕಾನೂನು ಕೈಗೆತ್ತಿಕೊಂಡು ಕೋರ್ಟ್ ಆದೇಶ ಧಿಕ್ಕರಿಸುವುದು ಮೂರ್ಖತನ, ಮಾಧ್ಯಮಗಳು ನಾಲ್ಕನೇ ಅಂಗ ಎಂದು ಮರೆತುಹೋಗಿದೆಯೇ? ಹಿಜಾಬ್ ಒಂದು ಅಂತರಾಷ್ಟ್ರೀಯ ಷಡ್ಯಂತ್ರ, ಪೊಲೀಸರು ಸುಮೋಟೋ ಕೇಸು ದಾಖಲಿಸಬೇಕು ಹಿಜಬ್ ಧರಿಸಿ ಬರುವ ಮಕ್ಕಳ ಪೋಷಕರ ಮೇಲೆ ಕ್ರಿಮಿನಲ್ ಕೇಸು ಹಾಕಿ ಎಂದು ಆಗ್ರಹಿಸಿದರು.