ನಾನೇ ಅಭ್ಯರ್ಥಿ ಎಂಬಂತೆ ಪ್ರಚಾರ ಮಾಡ್ತೇನೆ: ಯಶ್ಪಾಲ್‌ ಬೆನ್ನಿಗೆ ನಿಂತ ಶಾಸಕ ರಘುಪತಿ ಭಟ್

By Sathish Kumar KH  |  First Published Apr 14, 2023, 8:44 PM IST

ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಶ್ಪಾಲ್ ಸುವರ್ಣ ಅವರನ್ನು 60,000 ಕ್ಕೂ ಹೆಚ್ಚು ಬಹುಮತದೊಂದಿಗೆ ಗೆಲ್ಲಿಸಲು ಪಣತೊಟ್ಟಿದ್ದೇವೆ ಎಂದು ಟಿಕೆಟ್ ವಂಚಿತ ಶಾಸಕ ರಘುಪತಿ ಭಟ್ ತಿಳಿಸಿದರು.


ಉಡುಪಿ (ಏ.14): ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಶ್ಪಾಲ್ ಸುವರ್ಣ ಅವರನ್ನು 60,000 ಕ್ಕೂ ಹೆಚ್ಚು ಬಹುಮತದೊಂದಿಗೆ ಗೆಲ್ಲಿಸಲು ಪಣತೊಟ್ಟಿದ್ದೇವೆ ಎಂದು ಟಿಕೆಟ್ ವಂಚಿತ ಶಾಸಕ ರಘುಪತಿ ಭಟ್ ತಿಳಿಸಿದರು.

ಉಡುಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣರೊಂದಿಗೆ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಪೇಜ್ ಪ್ರಮುಖ್ ವರೆಗೆ ಸಂಘಟನೆಯನ್ನು ಮಾಡಲಾಗಿದ್ದು, ಇಂದಿನಿಂದ ( ಶುಕ್ರವಾರ) ಅಭ್ಯರ್ಥಿಯೂ ಗ್ರಾಮೀಣ ಭಾಗದಿಂದ ತನ್ನ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. 226 ಬೂತ್ ಸಮಿತಿಯವರು ಮತದಾರರ ಪಟ್ಟಿಯನ್ನು ಪರಿಶೀಲನೆ ನಡೆಸಿ ಎ,ಬಿ,ಸಿ ಎಂದು ವಿಂಗಡಿಸಿ, ಎಲ್ಲರನ್ನು ಎ ಕೆಟಗೆರಿಯೊಳಗೆ ಬರುವಂತೆ ಮಾಡುವ ಮುಖಾಂತರ ಬಿಜೆಪಿ ಗೆಲುವಿನ ಸುಗಮಗೊಳಿಸುತ್ತೇವೆ ಎಂದರು. 

Latest Videos

undefined

Jan Ki Baat Suvarna Survey: ಪ್ರಾದೇಶಿಕ ವಿಭಾಗವಾರು ಪಕ್ಷಗಳ ಬಲಾಬಲವೆಷ್ಟು?

ಟಿಕೆಟ್ ವಂಚಿತನಾದಾಗ ಭಾವನಾತ್ಮಕನಾಗುವುದು ಸಾಮಾನ್ಯ. ತಂದೆ - ತಾಯಿ ಬೈದಾಗ ಮಗು ಕೋಪಗೊಂಡು ಎದುರುತ್ತರ ಕೊಡುತ್ತದೆ. ನಂತರ ಸರಿಯಾಗುತ್ತದೆ. ಹಾಗೆಯೇ ನಾನು ಬೇಸರದಲ್ಲಿ ಮಾತನಾಡಿದ್ದೇನೆ. ಯಾವುದು ಮನಸ್ಸಲಿಲ್ಲ, ಪಕ್ಷಕ್ಕಾಗಿ ಒಟ್ಟಿಗೆ ದುಡಿಯುತ್ತೇನೆ. ನನ್ನ ಚುನಾವಣೆಗೆ ಕೆಲಸ ಮಾಡಿದಂತೆ, ಯಶ್ಪಾಲ್ ರ ಚುನಾವಣೆಗೆ ಕೆಲಸ ಮಾಡುತ್ತೇವೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಮಾತನಾಡಿ ಬಗೆಹರಿಸುವಂತಹ ದೊಡ್ಡ ಸಮಸ್ಯೆ ಇದಾಗಿರಲಿಲ್ಲ. ಗುರುವಾರ ಬೆಳಗ್ಗೆ ಯಡಿಯೂರಪ್ಪನವರು ಕರೆ ಮಾಡಿ ಉತ್ತಮ ಕೆಲಸ ಮಾಡಿದ್ದೀಯಾ ಎಂದು ತಿಳಿಸಿದ್ದಾರೆ. ಅವರ ಕರೆಯಿಂದಾಗಿ ಇನ್ನಷ್ಟು ಉತ್ಸಾಹ ಬಂದಿದೆ. 3 ಬಾರಿ ಶಾಸಕನಾಗಲು ಪಕ್ಷ ಅವಕಾಶ ಮಾಡಿಕೊಟ್ಟಿದೆ. ಇನ್ನು ಆಸೆ ಪಟ್ಟರೆ ನನ್ನಷ್ಟು ಮೂರ್ಖ ಯಾರಿಲ್ಲ ಎಂದರು. 

ರಘುಪತಿ ಭಟ್ ಮಾರ್ಗದರ್ಶನದಲ್ಲಿ ಸ್ಪರ್ಧೆ: ಅಭ್ಯರ್ಥಿ ಯಶ್ಪಾಲ್ ಸುವರ್ಣ ಮಾತನಾಡಿ, ಶಾಸಕ ರಘುಪತಿ ಭಟ್ ಅವರ ಮಾರ್ಗದರ್ಶನದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ. ಪಕ್ಷ ಅವಕಾಶ ಮಾಡಿಕೊಟ್ಟಿದ್ದು, ಪಕ್ಷದ ಹಿರಿಯರ ಮಾರ್ಗದರ್ಶನ ಮತ್ತು ಅಶೀರ್ವಾದೊಂದಿಗೆ ಮುನ್ನಡೆಯುವೆ ಎಂದು ತಿಳಿಸಿದರು. 
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ, ಮಾಜಿ ನಗರಸಭಾ ಅಧ್ಯಕ್ಷ ಹೆರ್ಗ ದಿನಕರ್ ಶೆಟ್ಟಿ, ನಗರ‌ ಅಧ್ಯಕ್ಷ ಮಹೇಶ್ ಠಾಕೂರ್, ಚುನಾವಣಾ ಉಸ್ತುವಾರಿ ಗಣೇಶ್ ಹೊಸಬೆಟ್ಟು, ಜಿ.ಪ್ರ.ಕಾರ್ಯದರ್ಶಿಗಳಾದ ಮನೋಹರ ಕಲ್ಮಾಡಿ, ನವೀನ್, ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ವೀಣಾ ನಾಯ್ಕ್ ಉಪಸ್ಥಿತರಿದ್ದರು.

ಕಾಂಗ್ರೆಸ್‌ ಬಂಡಾಯ ಶಮನವಾಗುತ್ತೆ -ಬಿ.ಕೆ ಹರಿಪ್ರಸಾದ್
ಉಡುಪಿ (ಏ.14): ಜಿಲ್ಲಾ ಕಾಂಗ್ರೆಸ್ ನಲ್ಲಿ ಆಕಾಂಕ್ಷಿಯಾಗಿದ್ದ ಎಲ್ಲರನ್ನು ಒಳಗೊಂಡಂತೆ ಸಮನ್ವಯ ಸಭೆ ನಡೆಸಲಾಗಿದೆ. ಸರ್ವರು ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ತಿಳಿಸಿದ್ದಾರೆ. 

ಅವರು ಉಡುಪಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದ ಕೃಷ್ಣಮೂರ್ತಿ ಆಚಾರ್ಯ ಮತ್ತ ಅವರ ಪತ್ನಿ, ನಗರಸಭೆ ಸದಸ್ಯ ಅಮೃತಾ ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕೆಲವೊಂದು ವಿಚಾರಗಳನ್ನು ನನ್ನ ಬಳಿ ಹೇಳಿಕೊಂಡಿದ್ದಾರೆ. ಅದನ್ನು ನಾನು ಹೈಕಮಾಂಡ್ ಗಮನಕ್ಕೆ ತರುತ್ತೇನೆ. ಕಾರ್ಕಳಕ್ಕೆ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು  ಆಯ್ಕೆ ಮಾಡುವ ವಿಚಾರಕ್ಕೆ ಸಂಭಂದಿಸಿ ಯಾವುದೇ ಒತ್ತಡಗಳು ಇಲ್ಲ. ಹಿರಿಯನಾಯಕ, ಮಾಜಿ ಸಿಎಂ ವೀರಪ್ಪ ಮೊಯಿಲಿ ಕ್ಷೇತ್ರವಾಗಿದ್ದು, ಕ್ಷೇತ್ರದ ಸಾಮಾಜಿಕ ಸಾಮರಸ್ಯದ ಅರಿವು ಅವರಿಗಿದೆ. ಎಲ್ಲರಲ್ಲಿ ಸಮನ್ವಯ ಮೂಡಿಸುವ ಕೆಲ ಅಭ್ಯರ್ಥಿಗಳ ಹೆಸರು ಅವರ ಬಳಿ ಇದೆ.  ಯಾವುದೇ ಗೊಂದಲ ಇಲ್ಲ, ಎರಡು ಮೂರು ದಿನದಲ್ಲಿ ಟಿಕೆಟ್ ಘೋಷಣೆ ಆಗಲಿದೆ ಎಂದರು. 

Jan Ki Baat Suvarna News Survey: ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಗೆ ಕಾಂಗ್ರೆಸ್ ಠಕ್ಕರ್, ಯಾರಿಗೆ ಎಷ್ಟು ಸ್ಥಾನ?

ಬಿಜೆಪಿ ಬೂಟಾಟಿಕೆಯ ಪಾರ್ಟಿ: ಬಿಜೆಪಿಯ ಹಲವು ಹಿರಿಯ ನಾಯಕರು ಅವಕಾಶ ವಂಚಿತರಾಗಿದ್ದಾರೆ. 4 ವರ್ಷದಲ್ಲಿ ಒಳ್ಳೆ ಕೆಲಸ ಮಾಡಿದ್ದಲ್ಲಿ ಬದಲಾವಣೆ ಮಾಡುವ ಅಗತ್ಯ ಪಕ್ಷಕ್ಕೆ ಇರಲಿಲ್ಲ. ಬಿಜೆಪಿ ದೇಶಭಕ್ತ ಪಾರ್ಟಿ ಎಂದು ಹೇಳುತ್ತಿತ್ತು. ಆದರೆ ಅದು ಈಗ ಭೂಟಾಟಿಕೆಯ ಪಾರ್ಟಿಯಾಗಿದೆ. ಕಾಂಗ್ರೆಸ್ ನಲ್ಲಿ ಪಟ್ಟಿ ಬಿಡುಗಡೆ ಆದ ಮೇಲೆ ಅಲ್ಲೋಲೊ ಕಲ್ಲೋಲ ಆಗಲಿದೆ ಎಂದು ಕಾಂಗ್ರೆಸ್ ವಿರೋದಿಗಳು ಎಣಿಸಿದ್ದರು,ಆದರೆ ಅದು ಫಲಿಸಲಿಲ್ಲ. ಬಿಜೆಪಿಗೆ ಕೆಲವು ಕಡೆ ಅಭ್ಯರ್ಥಿಗಳೇ ಇಲ್ಲ,  ಎರಡು ಎರಡು ಕಡೆ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ನಾಲ್ಕು ವರ್ಷದ ಆಡಳಿತ ಅವಧಿಯಲ್ಲಿ ನಡೆಸಿದ ಪಾಪ ಪ್ರಾಯಶ್ಚಿತ್ತಕ್ಕೆ ದೇಗುಲ ಭೇಟಿ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ದುರಾಚಾರ ಭ್ರಷ್ಟಾಚಾರ ಮಾಡಿದೆ ಎಂದು ವ್ಯಂಗಿಸಿದರು. ಲಕ್ಷ್ಮಣ ಸವದಿ ಹಿರಿಯ ಪ್ರಬುದ್ಧ ರಾಜಕೀಯ ಮುಖಂಡ, ಉಪಮುಖ್ಯಮಂತ್ರಿ, ಸಚಿವ ಸ್ಥಾನ ಹುದ್ದೆ ನಿಭಾಯಿಸಿದವರು. ನಮ್ಮ ಸಿದ್ದಾಂತವನ್ನು ಒಪ್ಪಿ ಬರುವುದಾದರೆ ಯಾರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಬಹುದು ಎಂದು ತಿಳಿಸಿದರು.

click me!