Yadgir: ಸುರಪುರದಲ್ಲಿ ಕಾಂಗ್ರೆಸ್‌ ಗೆಲ್ಲೋದು ಖಚಿತ: ಪ್ರಿಯಾಂಕ್‌ ಖರ್ಗೆ

By Kannadaprabha News  |  First Published Feb 11, 2023, 11:21 PM IST

ಯಾದಗಿರಿ ಮತ್ತು ಸುರಪುರ ಮತಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಲ್ಕು ಐದು ಬಾರಿ ಕರೆಸಿ ಪ್ರಚಾರ ಮಾಡಿಸಿದರೂ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.


ಸುರಪುರ (ಫೆ.11): ಯಾದಗಿರಿ ಮತ್ತು ಸುರಪುರ ಮತಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಲ್ಕು ಐದು ಬಾರಿ ಕರೆಸಿ ಪ್ರಚಾರ ಮಾಡಿಸಿದರೂ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ತಾಲೂಕಿನ ದೇವತ್ಕಲ್‌ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ 2ನೇ ಹಂತದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಚುನವಾಣೆ ಸಮೀಪಿಸುತ್ತಿದ್ದಂತೆ ಸ್ಥಳೀಯ ಬಿಜೆಪಿ ನಾಯಕರುಗಳು ಮೋದಿಯವರನ್ನು ಕರೆತಂದು ಪ್ರಚಾರ ಮಾಡಿಸುತ್ತಿದ್ದಾರೆ. ಇನ್ನು ಐದಾರು ಬಾರಿ ಪ್ರಧಾನಿ ಮೋದಿ ಸುರಪುರಕ್ಕೆ ಬಂದರೂ ರಾಜಾ ವೆಂಕಟಪ್ಪ ನಾಯಕ ವಿಜಯದ ಮಾಲೆ ತೊಡಲಿದ್ದಾರೆ ಎಂದರು.

ರಾಜ್ಯದಲ್ಲಿ ಮತ ಕೇಳುವ ನೈತಿಕತೆಯ ಮುಖವಿಲ್ಲ. ಹಾಗಾಗಿಯೇ ರಾಷ್ಟ್ರೀಯ ಮುಖಂಡರನ್ನು ಕರೆಸಿ ಮತ ಕೇಳುತ್ತಾರೆ. ಹಾಗಾದರೆ ಇವರ ಬೆಲೆಯೇನು ಎಂದು ಪ್ರಶ್ನಿಸಿದ ಅವರು, ಅಣೆಕಟ್ಟು ಕಟ್ಟಿಸಿದ್ದು ಕಾಂಗ್ರೆಸ್‌ ಗೇಟ್‌ ಉದ್ಘಾಟನೆಗೆ ಪಿಎಂ ಅವರನ್ನು ಕರೆಸಿದರೆ ಹೇಗೆ? 9 ವರ್ಷ ಮೋದಿ ಸರಕಾರ 3 ವರ್ಷ ಬಿಜೆಪಿ ಸರಕಾರ ನಡೆಯುತ್ತಿದೆ. ಬಿಜೆಪಿಯಿಂದ ಬಡವರಿಗೆ ಒಂದು ಯೋಜನೆಯೂ ತಲುಪಿಲ್ಲ. ಕಾಂಗ್ರೆಸ್‌ ಸರಕಾರ 50 ಸಾವಿರ ಕೋಟಿ ರೂ. ನೀರಾವರಿಗೆ ಖರ್ಚು ಮಾಡಿದೆ ಎಂದರು. ರೈತರ ಆದಾಯ ದುಪ್ಪಟ್ಟು ಆಗದೆ ಸಾಲ ಮಾತ್ರ ಡಬಲ್‌ ಆಗಿದೆ. 

Latest Videos

undefined

ಜೆಡಿಎಸ್‌ ಅಧಿಕಾರಕ್ಕೆ ಬರೋದು ಕನಸು: ಡಿ.ಕೆ.ಶಿವಕುಮಾರ್‌

ವಿವಿಧ ರಾಜ್ಯಗಳ ಜನರು ಉದ್ಯೋಗ ಆರಸಿ ನಮ್ಮ ರಾಜ್ಯಕ್ಕೆ ಬರುತ್ತಿದ್ದರು. ಈಗ ನೋಡಿದರೆ ಬಿಜೆಪಿ ರಾಜ್ಯದಲ್ಲಿ ಶೇ. 40 ಕಮಿಷನ್‌ ಪಡೆಯುತ್ತಿದೆ. ಕೆಕೆಆರ್‌ಡಿಬಿಯಲ್ಲಿ ಕೆಲಸ ಮಾಡದೆ ಬೋಗಸ್‌ ಬಿಲ್‌ ಎತ್ತುತ್ತಿದ್ದಾರೆ. ಇದು ಶೇ. 100 ಪರ್ಸಟೇಂಜ್‌ ಪಡೆಯುತ್ತಾರೆ. ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆಯಿಂದ ಹಸಿವು ಮುಕ್ತ ಕರ್ನಾಟಕವನ್ನಾಗಿಸಿದ್ದೇವೆ ಎಂದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರ ತೊಲಗಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ. ಬಿಜೆಪಿ ಸರಕಾರದಿಂದ ಅಭಿವೃದ್ಧಿ ಮಾಡಿದ್ದರೆ ಚರ್ಚೆಗೆ ಬನ್ನಿ. ಅನೇಕ ಯೋಜನೆಗಳನ್ನು ಕಾಂಗ್ರೆಸ್‌ ಜಾರಿಗೆ ತಂದಿದೆ. 

ತಂದೆಗಾದಂತೆ ಶಾಸಕ ಪ್ರಿಯಾಂಕ್‌ಗೂ ಶಾಸ್ತಿ ತಪ್ಪಿದ್ದಲ್ಲ: ಎನ್‌.ರವಿಕುಮಾರ್‌

ಬೆಂಗಳೂರಿನಲ್ಲಿ ಶೇ. 40 ಪರ್ಸೆಂಟ್‌ ಆದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ 100 ಪರ್ಸೆಂಟ್‌ ಸರಕಾರ ನಡೆಯುತ್ತಿದೆ ಎಂದು ಬಿಜೆಪಿ ಆಡಳಿತವನ್ನು ಕಟುಕಿದರು. ಪಿಎಸ್‌ಐ 543 ಹುದ್ದೆಗಳಿಗೆ 2.30 ಲಕ್ಷ ಯುವಕರು ಪರೀಕ್ಷೆ ಬರೆದಿದ್ದರು. ಆದರೆ, ಪಿಎಸ್‌ಐ ಒಂದು ಹುದ್ದೆಯನ್ನು ಒಂದು ಕೋಟಿ ರೂ.ಗೆ ಮಾರಿಕೊಂಡಿದೆ. ಪಿಎಸ್‌ಐ ಹಗರಣದಲ್ಲಿ ಬಹಳ ದೊಡ್ಡ ವ್ಯಕ್ತಿಗಳು ಶಾಮೀಲಾಗಿದ್ದಾರೆ. ಬಿಜೆಪಿ ಆಡಳಿತದಲ್ಲಿ ನಡೆದ ಅತಿದೊಡ್ಡ ಹಗರಣವಾಗಿದೆ. ಇದಲ್ಲದೆ ಬೇರೆ ಬೇರೆ ಉದ್ಯೋಗ ನೀಡುವಲ್ಲಿಯೂ ಭ್ರಷ್ಟಾಚಾರ ನಡೆದಿದೆ ಎಂದು ತಿಳಿಸಿದರು.

click me!