ಸಿದ್ದುಗೆ ವಯಸ್ಸಾಗಿದೆ, ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟುಕೊಡಲಿ: ಶಾಸಕ ಪ್ರಭು ಚವ್ಹಾಣ್‌

Published : Jun 20, 2024, 10:58 PM ISTUpdated : Jun 20, 2024, 10:59 PM IST
ಸಿದ್ದುಗೆ ವಯಸ್ಸಾಗಿದೆ, ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟುಕೊಡಲಿ: ಶಾಸಕ ಪ್ರಭು ಚವ್ಹಾಣ್‌

ಸಾರಾಂಶ

ಸಿಎಂಗೆ ವಯಸ್ಸಾಗಿದೆ ಅವರಿಗೆ ನೆನಪು ಇರುತ್ತಿಲ್ಲ, ಇವತ್ತು ಒಂದು ಹೇಳುತ್ತಾರೆ ನಾಳೆ ಮತ್ತೊಂದು ಹೇಳುತ್ತಾರೆ. ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುಔಊದು ಅವರಿಗೆ ತಿಳಿಯುತ್ತಿಲ್ಲ. ಸಿದ್ದರಾಮಯ್ಯ ಆಗಲ್ಲ ಅಂದ್ರೆ ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಮಾಜಿ ಸಚಿವ, ಔರಾದ್‌ ಶಾಸಕರಾದ ಪ್ರಭು ಚವ್ಹಾಣ್‌ ಆಗ್ರಹಿಸಿದರು. 

ಬೀದರ್‌ (ಜೂ.20): ಸಿಎಂಗೆ ವಯಸ್ಸಾಗಿದೆ ಅವರಿಗೆ ನೆನಪು ಇರುತ್ತಿಲ್ಲ, ಇವತ್ತು ಒಂದು ಹೇಳುತ್ತಾರೆ ನಾಳೆ ಮತ್ತೊಂದು ಹೇಳುತ್ತಾರೆ. ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುಔಊದು ಅವರಿಗೆ ತಿಳಿಯುತ್ತಿಲ್ಲ. ಸಿದ್ದರಾಮಯ್ಯ ಆಗಲ್ಲ ಅಂದ್ರೆ ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಮಾಜಿ ಸಚಿವ, ಔರಾದ್‌ ಶಾಸಕರಾದ ಪ್ರಭು ಚವ್ಹಾಣ್‌ ಆಗ್ರಹಿಸಿದರು. ರಾಜ್ಯ ಸರ್ಕಾರದ ತೈಲ ಬೆಲೆ ಏರಿಕೆ ವಿರೋಧಿಸಿ ಔರಾದ್‌ ಪಟ್ಟಣದಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸುದ್ದಿಗಾರರಿಗೆ ಮಾತನಾಡಿದರು.

ಪೆಟ್ರೋಲ್‌ ಡೀಸೆಲ್‌ ಕಡಿಮೆ ಮಾಡುತ್ತೇವೆಂದು ಮಾತು ತಪ್ಪಿದ ಸಿದ್ದರಾಮಯ್ಯ ಬರೀ ಸುಳ್ಳು ಹೇಳುತ್ತಿದ್ದು, ಕೂಡಲೇ ಸಿಎಂ ಹುದ್ದೆಗೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುವದು ಸಿದ್ದರಾಮಯ್ಯಗೆ ತಿಳಿಯುತ್ತಿಲ್ಲ. ಕಾಂಗ್ರೆಸ್‌ ಶಾಸಕರೇ ಸಿಎಂ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ. ನನಗೆ ಕಾಂಗ್ರೆಸ್‌ ಶಾಸಕರು ಗೆಳೆಯರಿದ್ದಾರೆ. ಅವರಿಗೆ ಅನುದಾನ ಸಿಗುತ್ತಿಲ್ಲವೆಂದು ಬೇಸರದಲ್ಲಿದ್ದಾರೆ ಎಂದರು.

ಗ್ಯಾರಂಟಿಗಾಗಿ ಅಲ್ಲ, ರಾಜ್ಯದ ಅಭಿವೃದ್ಧಿಗಾಗಿ ತೈಲ ಬೆಲೆ ಏರಿಕೆ: ಸಿಎಂ ‌ಸಿದ್ದರಾಮಯ್ಯ

ಕಾಂಗ್ರೆಸ್‌ ಬಡವರಿಗೆ ಅನ್ಯಾಯ ಮಾಡ್ತಿದೆ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆ ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಇದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬಿಜೆಪಿ ವಿಭಾಗೀಯ ಪ್ರಭಾರಿ ಹಾಗೂ ಬೀದರ್‌ ವಿಧಾನಸಭಾ ಕ್ಷೇತ್ರದ ನಾಯಕ ಈಶ್ವರಸಿಂಗ್‌ ಠಾಕೂರ್‌ ತಿಳಿಸಿದರು. ಬೀದರ್‌ ತಾಲೂಕಿನ ಜನವಾಡಾ ಗ್ರಾಮದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವತಿಯಿಂದ ಬೀದರ್‌-ಔರಾದ್‌ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದರು.

ಒಂದು ಕಡೆ ಸುಳ್ಳು ಗ್ಯಾರಂಟಿಗಳ ಹೆಸರಿನ ಮೇಲೆ ಮಹಿಳೆಯರಿಗೆ ಹಣ ಕೊಡುವುದು, ಮತ್ತೊಂದು ಕಡೆ ಬೆಲೆ ಏರಿಕೆ ಮಾಡಿ ಗಂಡಸರ ಜೇಬಿನಿಂದ ಕಸಿದುಕೊಳ್ಳುವುದು ಸರ್ಕಾರದ ಗಿಮಿಕ್‌ ಆಗಿದೆ ಎಂದರು. ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಕೆಯಿಂದ ದಿನಸಿ ವಸ್ತುಗಳು ಗಗನಕ್ಕೇರುತ್ತಿವೆ. ಇದರಿಂದ ಬಡವರು ಬದುಕು ಸಾಗಿಸುವುದೇ ದುಸ್ತರವಾಗುತ್ತದೆ. ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ಬೆಲೆ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಹಳ್ಳಿ ಹಳ್ಳಿಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.

ರಸ್ತೆ ಗುಂಡಿ ದೂರು ಸಲ್ಲಿಸಲು ‘ಪೇಸ್‌ ಆ್ಯಪ್‌’: ಬಿಬಿಎಂಪಿಯಿಂದ ಅಭಿವೃದ್ಧಿ

ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ರಾಜೇಂದ್ರ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಅವರಾದೆ, ನಗರ ಮಂಡಲ ಅಧ್ಯಕ್ಷರಾದ ಶಶಿಧರ ಹೊಸಳ್ಳಿ ರಾಜ್ಯ ಸರ್ಕಾರದ ವಿರುದ್ಧ ಬೆಲೆ ಏರಿಕೆ ಖಂಡಿಸಿ ಮಾತನಾಡಿದರು. ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಪಾಟೀಲ್‌ ಚಾಂಬೋಳ, ದೀಪಕ ಗಾದಗೆ, ನಿಜಲಿಂಗಪ್ಪ ಪಾಟೀಲ್‌ ಚಿಮಕೋಡ್‌, ದೇವೇಂದ್ರ ಸಾಧು, ಮಾರುತಿ ಕೋಳಿ, ಗುರಪ್ಪ ರಕ್ಷೆ ಇಸ್ಲಾಂಪೂರ, ಭೀಮರಾವ್ ಪವಾರ, ಧರ್ಮೇಂದ್ರ ಏರ್ನಳ್ಳಿ, ನಾಮದೇವ್‌ ದದ್ದಾಪುರ ಸೇರಿದಂತೆ ಪಕ್ಷದ ಪ್ರಮುಖ ಪದಾಧಿಕಾರಿಗಳು ಹೋರಾಟದಲ್ಲಿ ಭಾಗವಹಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ