ಲೋಕಸಭೆ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿ ಸಂಸದ ಭತೃಹರಿ ನೇಮಕ

By Anusha KbFirst Published Jun 20, 2024, 9:57 PM IST
Highlights

18ನೇ ಲೋಕಸಭೆ ಸ್ಪೀಕರ್ ಯಾರಾಗ್ತಾರೆ ಎಂಬ ಕುತೂಹಲ ಇನ್ನಷ್ಟು ತೀವ್ರವಾಗಿದ್ದು, ಒಡಿಶಾದ ಪ್ರಮುಖ ನಾಯಕ ಬಿಜೆಪಿ ಸಂಸದ ಭತೃಹರಿ ಅವರು ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿದ್ದಾರೆ.

ನವದೆಹಲಿ: 18ನೇ ಲೋಕಸಭೆ ಸ್ಪೀಕರ್ ಯಾರಾಗ್ತಾರೆ ಎಂಬ ಕುತೂಹಲ ಇನ್ನಷ್ಟು ತೀವ್ರವಾಗಿದ್ದು, ಒಡಿಶಾದ ಪ್ರಮುಖ ನಾಯಕ ಬಿಜೆಪಿ ಸಂಸದ ಭತೃಹರಿ ಅವರು ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಭತೃಹರಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದ್ದಾರೆ. ಹಂಗಾಮಿ ಸ್ಪೀಕರ್ ಹುದ್ದೆ ತಾತ್ಕಾಲಿಕವಾದದ್ದಾಗಿದ್ದು ಹೊಸ ಸ್ಪೀಕರ್ ನೇಮಕವಾಗುವವರೆಗೂ ಇರಿಗೆ ಜವಾಬ್ದಾರಿ ಇರುತ್ತದೆ., ಸಾಂಪ್ರದಾಯಿಕವಾಗಿ ಈ ಹುದ್ದೆ ಸಂಸತ್ತಿನ ಹಿರಿಯ ಸದಸ್ಯರಿಗೆ ಹೋಗುತ್ತದೆ. ಅವರು ಮುಂದೆ ಹೊಸ ಸ್ಪೀಕರ್ ನೇಮಕಗೊಳ್ಳುವವರೆಗೂ ಪ್ರಧಾನಮಂತ್ರಿ, ಸಚಿವರು ಹಾಗೂ ಇತರ ಸಂಸದರಿಗೆ ಪ್ರಮಾಣವಚನ ಬೋಧಿಸುತ್ತಾರೆ. ಸೋಮವಾರ 18ನೇ ಲೋಕಸಭೆಯ ಮೊದಲ ಕಲಾಪ ಆರಂಭವಾಗಲಿದೆ. 

ಯಾರು ಈ ಭತೃಹರಿ?
ಒಡಿಶಾದ ಕಟಕ್ ಕ್ಷೇತ್ರದಿಂದ 7 ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಭತೃಹರಿ ಲೋಕಸಭಾ ಚುನಾವಣೆಗೆ ಸ್ವಲ್ಪ ದಿನದ ಹಿಂದಷ್ಟೇ ಒಡಿಶಾದ ಮಾಜಿ ಸಿಎಂ ನವೀನ್ ಪಟ್ನಾಯಕ್ ಅವರ ಬಿಜು ಜನತಾದಳ ಪಕ್ಷದಿಂದ ಬಿಜೆಪಿಗೆ ಬಂದವರು. ಬಿಜು ಜನತಾದಳ ಪಕ್ಷದ ಕಾರ್ಯವೈಖರಿಯಿಂದ ಅಸಮಾಧಾನಗೊಂಡು ಅವರು ಬಿಜೆಪಿ ಸೇರಿದ್ದರು. 

Latest Videos

ಸ್ಪೀಕರ್‌ ಹುದ್ದೆಗೆ ಬಿಜೆಪಿ ಪ್ಲ್ಯಾನ್‌, ಉಪಸ್ಪೀಕರ್‌ ಹುದ್ದೆ ಜೆಡಿಯು ಅಥವಾ ಟಿಡಿಪಿಗೆ!

ಭತೃಹರಿ ಮಹತಾಬ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕಗೊಳಿಸಿರುವುದರಿಂದ ಇದು ಲೋಕಸಭೆಯ ಸ್ಪೀಕರ್ ಹುದ್ದೆಗೆ ಯಾರಾಗಬಹುದು ಎಂಬ ನಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಆಂಧ್ರ ಪ್ರದೇಶ ಹಾಗೂ ಒಡಿಶಾ ಈ ಎರಡೂ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಈ ರಾಜ್ಯದ ನಾಯಕರಿಗೆ ಸಂಸತ್‌ನಲ್ಲಿ ಪ್ರಾಶಸ್ತ್ಯ ನೀಡಬೇಕಿದೆ. ಭತೃಹರಿ ಮಹತಬ್ ಹಾಗೂ ಆಂಧ್ರಪ್ರದೇಶ ಬಿಜೆಪಿ ಘಟಕದ ಮುಖ್ಯಸ್ಥೆ ಡಾ. ಪುರಂದರೇಶ್ವರಿ ಅವರ ಹೆಸರು ಸ್ಪೀಕರ್ ಹುದ್ದೆಗೆ ಕೇಳಿ ಬರುತ್ತಿದ್ದು, ಇದರ ಜೊತೆಗೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಅವರು ಕೂಡ ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. 

ಬಿಜೆಪಿಯ ಕೆಲ ಮೂಲಗಳ ಪ್ರಕಾರ ಪಕ್ಷವೂ ಸ್ಪೀಕರ್ ಹುದ್ದೆಯನ್ನು ತನ್ನ ಮಿತ್ರಪಕ್ಷಗಳಿಗೆ ನೀಡಲು ಇಷ್ಟಪಡುತ್ತಿಲ್ಲ, ಹೀಗಾಗಿ ಈ ವಿಚಾರ ಎರಡು ದಿನಗಳಿಂದ ಇನ್ನೂ ಚರ್ಚೆಯಲ್ಲಿದೆ. ಸಂಸತ್ ಕಲಾಪಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ವರದಿ ಆಗಿದೆ. 

ಟಿಡಿಪಿ ಅಭ್ಯರ್ಥಿ ಸ್ಪೀಕರ್‌ ಸ್ಥಾನಕ್ಕೆ ಕಣಕ್ಕಿಳಿದರೆ ಬೆಂಬಲ: ಇಂಡಿಯಾ ಕೂಟ

ಇದರ ಜೊತೆಗೆ ಲೋಕಸಭೆಯ ಉಪ ಸಭಾಪತಿ ಹುದ್ದೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳೊಂದಿಗೆ ಸರ್ಕಾರವೂ ಮುಖಾಮುಖಿಯಾಗುವ ಸಾಧ್ಯತೆ ಇದೆ. ಸಾಂಪ್ರದಾಯಿಕವಾಗಿ ಉಪ ಸ್ಪೀಕರ್ ಹುದ್ದೆಯೂ ವಿರೋಧ ಪಕ್ಷದ ನೇಮಕವಾಗಿದೆ. ಆದರೆ ಸರ್ಕಾರವು ಇದನ್ನು ನಿರಾಕರಿಸಿದರೆ, ವಿರೋಧ ಪಕ್ಷದ ನಾಯಕರು ಖಾಸಗಿಯಾಗಿ ಸಭೆ ನಡೆಸಿ ಸ್ಪೀಕರ್ ಹುದ್ದೆಗೆ ಚುನಾವಣೆಯನ್ನು ಮುಂದೂಡುವ ಬಗ್ಗೆ ಮಾತನಾಡಬಹುದು ಎಂದು ಊಹಿಸಲಾಗಿದೆ. 

click me!