
ತುಮಕೂರು (ಫೆ.05): 52 ಸಾವಿರ ಕೋಟಿ ರು. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ರೂಪದಲ್ಲಿ ಪೋಲು ಮಾಡಿದ್ದಾರೆ ಎಂದು ಮಾಜಿ ಸಚಿವ ಮುನಿರತ್ನ ಆರೋಪಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪದೇಪದೇ ಹಣ ಕೇಳಿಕೊಂಡು ಇವರು ಕೇಂದ್ರಕ್ಕೆ ಹೋಗುತ್ತಿದ್ದಾರೆ. ತೆರಿಗೆ ಹಣವನ್ನು ದಾನ ಮಾಡುವ ಮುಂಚೆ ಯೋಚನೆ ಮಾಡಬೇಕಿತ್ತು ಎಂದಿದ್ದಾರೆ. ದಾನ ಮಾಡಿ ರಾಜ್ಯ ಅಭಿವೃದ್ಧಿಯಾಗದಂತೆ ಮಾಡಿದ್ದಾರೆ. ಗ್ಯಾರಂಟಿ ಯೋಜನೆ ಘೋಷಣೆ ಮಾಡುವ ಮುಂಚೆ ಯೋಚನೆ ಮಾಡಬೇಕಿತ್ತು. ಯಾವುದೇ ಯೋಚನೆ ಮಾಡದೆ ಅಧಿಕಾರದ ದಾಹಕ್ಕಾಗಿ ಐದು ಗ್ಯಾರಂಟಿ ಆರು ಗ್ಯಾರೆಂಟಿ ಘೋಷಣೆ ಮಾಡಿದರು. ಇಲ್ಲಿ ದಾನ ಕೊಟ್ಟು ಅಲ್ಲಿ ಭಿಕ್ಷೆ ಬೇಡಲು ಹೋಗುತ್ತಾರೆ ಎಂದು ಹರಿಹಾಯ್ದರು.
ಇವರು ಕೇಂದ್ರದಿಂದ ಹಣ ಕೇಳೋದು ರಾಜ್ಯದ ಅಭಿವೃದ್ಧಿಗಲ್ಲ, ಹಣತಂದು ಲೋಕಸಭಾ ಚುನಾವಣೆಗೆ ಇನ್ನಷ್ಟು ಗ್ಯಾರಂಟಿ ಕೊಡಲು ಎಂದ ಮುನಿರತ್ನ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ನವರು ಗ್ಯಾರಂಟಿ ನಿಲ್ಲಿಸುತ್ತಾರೆ ಎಂದರು. ಮಾಗಡಿ ಶಾಸಕ ಬಾಲಕೃಷ್ಣ ಹೇಳಿರುವುದು ಸರಿಯಾಗಿದೆ. ಶಾಸಕ ಬಾಲಕೃಷ್ಣ ಮಾತನಾಡುವಾಗ ವೇದಿಕೆ ಮೇಲೆ ಡಿ.ಕೆ. ಸುರೇಶ್ ಕೂಡ ಇದ್ದರು . ಹಾಗಾಗಿ ಮಾಗಡಿ ಬಾಲಕೃಷ್ಣರ ಮಾತಿಗೆ ಡಿ.ಕೆ. ಸುರೇಶ್ ಅವರ ಸಹಮತ ಕೂಡ ಇದೆ ಅಂತಾಯ್ತು ಎಂದರು. ಕಾಂಗ್ರೆಸ್ ನವರಿಗೆ ಬಹುಶಃ ಪ್ರತ್ಯೇಕ ದೇಶ ಮಾಡೋದಕ್ಕೆ ಉತ್ತಮವಾದ ಆಲೋಚನೆ ಬಂದಿರಬೇಕು.
ಬಿಜೆಪಿಯಿಂದ ಧರ್ಮದ ಹೆಸರಿನಲ್ಲಿ ಜನರ ಮಧ್ಯೆ ವಿಷಬೀಜ ಬಿತ್ತುವ ರಾಜಕಾರಣ: ಸಚಿವ ಮಹದೇವಪ್ಪ
ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಕೊಡುವ ವಿಚಾರದಲ್ಲಿ ನಾವೆಲ್ಲ ಬೆಂಬಲವಾಗಿ ನಿಲ್ಲುವುದಾಗಿ ತಿಳಿಸಿದ ಅವರು ಅಂತಹ ಮಹನೀಯರು ಮತ್ತೇ ಇಲ್ಲಿ ಹುಟ್ಟಬೇಕು. ಅವರಿಗೆ ಭಾರತ ರತ್ನ ಕೊಡುವ ವಿಚಾರದಲ್ಲಿ ನಾವೆಲ್ಲ ಒಗ್ಗಟ್ಟಾಗಿ ಇರ್ತಿವಿ ಎಂದರು. ಅಡ್ವಾಣಿಜಿಗೆ ಭಾರತ ರತ್ನ ಲಭಿಸಿರೋದು ಬಹಳ ಸಂತೋಷ. ಅವರ ಹೋರಾಟ ಇವತ್ತಿನದಲ್ಲ, ಬಹಳಷ್ಟು ಶ್ರಮ ಪಟ್ಟ ಈ ದೇಶದಲ್ಲಿನ ಹಿಂದೂ ಧರ್ಮವನ್ನು ಕಟ್ಟಿದವರು. ಮಾಜಿ ಪ್ರಧಾನಿ ವಾಜಪೇಯಿಯವರ ಜೊತೆಯಲ್ಲಿ ಕೆಲಸ ಮಾಡಿದ್ದವರು. ಅವರಿಗೆ ಭಾರತ ರತ್ನ ಕೊಟ್ಟಿರೋದು ಸೂಕ್ತ ವ್ಯಕ್ಯಿಗೆ ಸೂಕ್ತ ಸಮಯದಲ್ಲಿ ಕೊಟ್ಟಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.