ಕನ್ವೀನ್ಸ್ ಮಾಡಲು ಆಗದಿದ್ದರೆ ಕನ್ಫ್ಯೂಸ್ ಮಾಡು ಎನ್ನುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಂದು ಗಂಟೆ ಸುದ್ದಿಗೋಷ್ಠಿಯಲ್ಲಿ ಕನ್ಫ್ಯೂಸ್ ಮಾಡಿದ್ದೇ ಹೆಚ್ಚು ಎಂದು ಮಾಜಿ ಶಾಸಕ ಸಿ.ಟಿ.ರವಿ ಟೀಕಿಸಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಫೆ.05): ಕನ್ವೀನ್ಸ್ ಮಾಡಲು ಆಗದಿದ್ದರೆ ಕನ್ಫ್ಯೂಸ್ ಮಾಡು ಎನ್ನುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಂದು ಗಂಟೆ ಸುದ್ದಿಗೋಷ್ಠಿಯಲ್ಲಿ ಕನ್ಫ್ಯೂಸ್ ಮಾಡಿದ್ದೇ ಹೆಚ್ಚು ಎಂದು ಮಾಜಿ ಶಾಸಕ ಸಿ.ಟಿ.ರವಿ ಟೀಕಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ ತೆರಿಗೆ ಹಣದ ಲೆಕ್ಕ ಹೇಳಲು ಬಹಳ ಕಸರತ್ತು ಮಾಡಿದರು. 2004ರಿಂದ2014 ರ ವರೆಗೆ ಮನಮೋನ್ ಸಿಂಗ್ ಸರ್ಕಾರ ರಾಜ್ಯಕ್ಕೆ ನೀಡಿದ ಹಣ ಎಷ್ಟು, 2014 ರಿಂದ 2024 ಫೆಬ್ರವರಿ ವರೆಗೆ ನರೇಂದ್ರ ಮೋದಿ ಅವರು ಕೊಟ್ಟಿರುವ ತೆರಿಗೆ ಪಾಲೆಷ್ಟು ಎನ್ನುವ ಬಗ್ಗೆ ಮುಖ್ಯಮಂತ್ರಿಗಳು ಶ್ವೇತಪತ್ರವೊಂದನ್ನು ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
2004 ರಿಂದ 2024 ರ ವರೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 81,795 ಕೋಟಿ ರೂ. ತೆರಿಗೆ ಪಾಲನ್ನು ಕೊಟ್ಟಿದ್ದಾರೆ. 2014 ರಿಂದ 2023 ಡಿಸೆಂಬರ್ ವರೆಗೆ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ 2,82,791 ಕೋಟಿ ಅಂದರೆ ಪ್ರತಿಶತ 245 ಪಟ್ಟು ಹೆಚ್ಚು ತೆರಿಗೆ ಪಾಲು ನೀಡಿದ್ದಾರೆ. ಇನ್ನು ಅನುದಾನ ಮತ್ತು ಸಹಾಯಧನದ ರೂಪದಲ್ಲಿ 2004 ರಿಂದ 2014 ರ ವರೆಗೆ ಕಾಂಗ್ರೆಸ್ ಕೊಟ್ಟಿದ್ದು 60,779 ಕೋಟಿ ರೂ., 2014 ರಿಂದ 3023ರ ವರೆಗೆ ನರೇಂದ್ರ ಮೋದಿ ಅವರು ಕೊಟ್ಟಿರುವುದು 2,8,838 ಕೋಟಿ ರೂ. ಸುಮಾರು ಮೂರೂವರೆ ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಮತ್ತು ಸಹಾಯಧನ ಅನುದಾನವನ್ನು ಕಾಂಗ್ರೆಸ್ ಅವಧಿಯಲ್ಲಿ ಕೊಟ್ಟಿದ್ದಕ್ಕಿಂತ ಹೆಚ್ಚು ಬಿಜೆಪಿ ಅವಧಿಯಲ್ಲಿ ನೀಡಿದಂತಾಗಿದೆ ಎಂದು ತಿಳಿಸಿದರು.
ನಾನ್ಯಾಕೆ ಹೋಗಬೇಕು ಎನ್ನುವ ಅಹಂಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ದಿನವೂ ಜಿಎಸ್ಟಿ ಕೌನ್ಸಿಲಿಂಗ್ ಸಭೆಗೆ ಹೋಗಲಿಲ್ಲ. ನಾನ್ಯಾಕೆ ಹೋಗಬೇಕು ಎನ್ನುವ ಅಹಂಕಾರ ಇದಕ್ಕೆ ಕಾರಣ. ಅಕಸ್ಮಾತ್ ಅನ್ಯಾಯವಾಗಿದ್ದರೆ ಜಿಎಸ್ಟಿ ಕೌನ್ಸಿಲ್ನಲ್ಲಿ ಪ್ರಶ್ನೆ ಮಾಡಲು ಸಾಧ್ಯವಿತ್ತು. ಕೃಷ್ಣಭೈರೇಗೌಡರನ್ನು ಸಭೆಗೆ ಕಳಿಸುತ್ತಾರೆ ಅವರು ಕೇಂದ್ರದ ನೀತಿಯೆಲ್ಲಾ ಹಿತಕರವಾಗಿದೆ ಎಂದು ಹೊಗಳುತ್ತಾರೆ. ಹೊರಗೆ ಬಂದು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಾರೆ ಎಂದು ದೂರಿದರು.
35 ವರ್ಷಗಳ ಬಳಿಕ ಶಾಲೆಗೆ ಬಂದ 3 ಸಾವಿರ ವಿದ್ಯಾರ್ಥಿಗಳು: ಗುರುಗಳನ್ನ ಹೆಗಲ ಮೇಲೆ ಹೊತ್ತು ಮೆರವಣಿಗೆ!
ಬಿಲ್ ಪಾವತಿ ಮಾಡದೇ ಬ್ಲಾಕ್ ಮೇಲ್: ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಕಾಮಗಾರಿಯಲ್ಲೂ ರಾಜ್ಯ ಸರ್ಕಾರ ಪರ್ಸೆಂಟೇಜ್ ಹೊಡೆಯುವ ಸಲುವಾಗಿ ಬಿಲ್ ಪಾವತಿ ಮಾಡದೆ ಬ್ಲಾಕ್ ಮೇಲ್ ಮಾಡುತ್ತಿದೆ. ಇದರ ವಿರುದ್ಧ ಹೋರಾಟ ಕೈಗೊಳ್ಳಲಾಗುವುದು ಎಂದರು. ಇನ್ನೂ ಕಾಲೇಜು ಬ್ಲಾಕ್‌ನಲ್ಲಿ 100 ಕೋಟಿ.ರೂ.ಗಳಿಗೂ ಹೆಚ್ಚಿನ ಬಿಲ್ ಪಾವತಿಸುವುದು ಬಾಕಿ ಇದೆ. 45 ಕೋಟಿ ರೂ. ಗಳಿಗೂ ಹೆಚ್ಚಿನ ಬಿಲ್ ಆಸ್ಪತ್ರೆ ಬ್ಲಾಕ್‌ಗೆ ಸಂಬಂಧಿಸಿದ್ದು ಬಾಕಿ ಇದೆ. 2023 ಮಾರ್ಚ್ ನಂತರ ಯಾವುದೇ ಬಿಲ್‌ನ್ನು ಕೊಟ್ಟಿಲ್ಲ. ಹಾಗಾದರೆ ಇವರಿಗೆ ಆಧ್ಯತೆ ಏನು? ಜನರಿಗೆ ಉಪಯೋಗವಾಗುವ ಮೂಲ ಸೌಕರ್ಯಕ್ಕೆ ತಕ್ಷಣಕ್ಕೆ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಬೇಕೋ ? ಅಥವಾ ಇದರಲ್ಲೂ ಬ್ಲಾಕ್ ಮೇಲ್ ಮಾಡುತ್ತ ಪರ್ಸೆಂಟೇಜ್‌ಗಾಗಿ ತೊಂದರೆ ಕೊಡುವುದು ಆಧ್ಯತೆಯ ಎಂದು ಪ್ರಶ್ನಿಸಿದರು.