ಕಾಂಗ್ರೆಸ್‌ನವರ ಕುಮ್ಮಕ್ಕುನಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕ ಮುನಿರತ್ನ ವಾಗ್ದಾಳಿ ನಡೆಸಿದರು.
ಬೆಂಗಳೂರು ದಕ್ಷಿಣ (ಏ.22): ಕಾಂಗ್ರೆಸ್ ನವರ ಕುಮ್ಮಕ್ಕುನಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕ ಮುನಿರತ್ನ ವಾಗ್ದಾಳಿ ನಡೆಸಿದರು. ಶಾಸಕರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯ ಹಲವು ವಾರ್ಡ್‌ಗಳಲ್ಲಿ ಅಪರಾಧ ಕೃತ್ಯಗಳು ಗಣನೀಯವಾಗಿ ಏರಿಕೆಯಾಗಿವೆ. ಮಹಿಳೆಯರು ಹಾಗೂ ಮಕ್ಕಳು ಮೇಲೆ ಲೈಂಗಿಕ ದೌರ್ಜನ್ಯ ಮಿತಿ ಮೀರಿದೆ. ಕ್ಷೇತ್ರದ ಹಿಂದು ಧರ್ಮದ ಮಮತಾ ಎಂಬ ಹುಡುಗಿಯನ್ನು ಲವ್ ಜಿಹಾದ್ ಮೂಲಕ ಮುಮ್ತಾಜ್ ಎಂದು ಮತಾಂತರ ಗೊಳಿಸಲಾಗಿದೆ.
ಅಲ್ಲದೇ 15 ವರ್ಷದ ದಲಿತ ಹುಡುಗಿಯ ಮೇಲೆ ಅತ್ಯಾಚಾರ ನಡೆಸಿದವರ ಮೇಲೆ ಕಾಟಾಚಾರಕ್ಕೆ ಎಫ್ಐಆರ್ ದಾಖಲಿಸಿ ಸಂತ್ರಸ್ತೆಯ ಮನೆಯವರಿಗೆ ಕೇಸು ಹಿಂಪಡೆಯಲು ಬೆದರಿಕೆ ಹಾಕಲಾಗುತ್ತಿದೆ ಎಂದು ದೂರಿದರು. ಮಧ್ಯರಾತ್ರಿ 2ರ ವರೆಗೆ ಹೋಟೆಲ್ ತೆರೆದಿರುತ್ತವೆ. ಅನಧೀಕೃತ ಇಸ್ವೀಟ್ ಕ್ಲಬ್, ಪಬ್, ಹುಕ್ಕಾ ಬಾರ್‌ಗಳು ತಲೆ ಎತ್ತಿವೆ.ಕಳ್ಳತನ, ದರೋಡೆ, ಪುಂಡ ಪೋಕರಿ ಹಾವಳಿ, ವೀಲ್ಹಿಂಗ್ ಪ್ರಕರಣ ಹೆಚ್ಚಾಗಿವೆ.ಹೆಣ್ಣು ಮಕ್ಕಳು ಓಡಾಡುವುದೇ ಕಷ್ಟಕರವಾಗಿದೆ. ಗ್ರಾಹಕರಿಂದ ಕೆಲವು ಆಟೋದವರು ಹತ್ತುಪಟ್ಟು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಸಮುದಾಯದ ಓಲೈಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಕಾಂಗ್ರೆಸ್ ಗೆದ್ದರೆ ನಿಮ್ಮ ಮಂಗಳಸೂತ್ರ ಕಿತ್ತು ಮುಸ್ಲಿಮರಿಗೆ ಕೊಡುತ್ತೆ: ಪ್ರಧಾನಿ ಮೋದಿ
ಪೋಲಿಸ್ ಇನ್ಸ್‌ಪೆಕ್ಟರ್‌ಗಳನ್ನು ಬದಲಾವಣೆ ಮಾಡುವಂತೆ ಮೂರು ಬಾರಿ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಪೊಲೀಸರ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ದೂರು ನೀಡಲು ಬರುವವರನ್ನೆ ಬೈದು ಕಳುಹಿಸಲಾಗುತ್ತಿದೆ. ಕಂಪ್ಲೆಂಟ್ ದಾಖಲು ಮಾಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಹಲವು ಕೇಸ್‌ಗಳಲ್ಲಿ ಕಡುಬಡವರು ಹೆದರಿಕೆಯಿಂದ ಕೇಸ್ ದಾಖಲಿಸಲು ಹಿಂಜರಿಯುತ್ತಿದ್ದಾರೆ. ಯಶವಂತಪುರ ಪೋಲಿಸ್ ಠಾಣೆ ಒಂದರಲ್ಲಿಯೆ ಮೂರು ಕೇಸುಗಳಿಗೆ ನ್ಯಾಯ ಒದಗಿಸುವ ಕೆಲಸವಾಗಿಲ್ಲ, ಹಿಂದೊಮ್ಮೆ ಕ್ಷೇತ್ರದ ಅಭಿವೃದ್ಧಿಗಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಾಲಿಗೆ ಬಿದ್ದು ಕೇಳಿಕೊಂಡಿದ್ದೆ, ಈಗ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಉಪಮುಖ್ಯಮಂತ್ರಿಗಳ ಕಾಲಿಗೆ ಬೀಳುತ್ತೇನೆ ಎಂದರು.