ಬಿಎಸ್‌ವೈ ಸಿಎಂ ಆಗಿ ಮುಂದುವರೆಯೋದು ಸೂರ್ಯ, ಚಂದ್ರರಿರುವಷ್ಟು ಸತ್ಯ: ರೇಣುಕಾಚಾರ್ಯ

By Suvarna News  |  First Published Jun 6, 2021, 3:38 PM IST

* ಇನ್ನೂ ಎರಡೂವರೆ ವರ್ಷ ಸಿಎಂ ಆಗಿ ಯಡಿಯೂರಪ್ಪ ಮುಂದುವರೆಯುತ್ತಾರೆ
* ಬೆಂಗಳೂರಿಗೆ ಹೋಗಿ ಸಿಎಂ ಭೇಟಿ ಮಾಡ್ತೇನೆ 
* ನಾವು ಯಡಿಯೂರಪ್ಪನವರ ಬೆಂಬಲಕ್ಕೆ ಸದಾ ಇರುತ್ತೇವೆ 


ದಾವಣಗೆರೆ(ಜೂ.06): ಬಿ.ಎಸ್‌. ಯಡಿಯೂರಪ್ಪನವರು ಸಿಎಂ ಆಗಿ ಮುಂದುವರೆಯೋದು ಸೂರ್ಯ, ಚಂದ್ರರಿರುವಷ್ಟು ಸತ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಇಂದು(ಭಾನುವಾರ) ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಯಡಿಯೂರಪ್ಪ ಆಲದ ಮರವಿದ್ದಂತೆ. ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ ವಿನಃ ಇದುವರೆಗೂ ಸೂಚಿಸಿಲ್ಲ. ಆದ್ದರಿಂದ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

Tap to resize

Latest Videos

undefined

ನಾಯಕತ್ವ ಬದಲಾವಣೆ ಮತ್ತೆ ಮುನ್ನೆಲೆಗೆ, ಸಿಎಂ ಶಾಕಿಂಗ್​ ಪ್ರತಿಕ್ರಿಯೆ

ಇನ್ನೂ ಎರಡೂವರೆ ವರ್ಷ ಸಿಎಂ ಆಗಿ ಯಡಿಯೂರಪ್ಪನವರು ಮುಂದುವರೆಯುತ್ತಾರೆ. ನಾನು ಕೂಡ ಇಂದು ಸಂಜೆ ಬೆಂಗಳೂರಿಗೆ ಹೋಗಿ ಸಿಎಂ ಅವರನ್ನ ಭೇಟಿ ಮಾಡುತ್ತೇನೆ. ಸಿಎಂ ಭೇಟಿ ಪೂರ್ವ ನಿಯೋಜನೆ ಭೇಟಿಯಾಗಿದೆ ಯಾವುದೇ ರಾಜಕೀಯ ಚರ್ಚೆ ಇಲ್ಲ. ಕ್ಷೇತ್ರದ ಅಭಿವೃದ್ಧಿಗೆ ಸಿಎಂ ಜೊತೆ ಚರ್ಚೆ ಮಾಡಲು ಹೊರಟಿರುವೆ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ ಯಡಿಯೂರಪ್ಪನವರಿಗೆ ಪರ್ಯಾಯ ನಾಯಕತ್ವದ ಪ್ರಶ್ನೆಯೇ ಇಲ್ಲ. ಸಿಎಂ ಬದಲಾವಣೆಯಾದ್ರೆ ಮಾತ್ರ ಪರ್ಯಾಯ ನಾಯಕತ್ವದ ಪ್ರಶ್ನೆ ಬರುತ್ತದೆ. ಯಡಿಯೂರಪ್ಪ ಸಂಘಟನೆಯಿಂದ ಬೆಳೆದು ಬಂದ ಹಿನ್ನಲೆಯಲ್ಲಿ ಶಿಸ್ತಿನಿಂದ ಹೇಳಿಕೆ ನೀಡಿದ್ದಾರೆ. ನಾವು ಯಡಿಯೂರಪ್ಪನವರ ಬೆಂಬಲಕ್ಕೆ ಸದಾ ಇರುತ್ತೇವೆ ಎಂದು ತಿಳಿಸಿದ್ದಾರೆ.
 

click me!