
ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಏ.03): ಬಿಜೆಪಿ ವರಿಷ್ಟರ ವಿರುದ್ದ ಸಿಡಿದಿದ್ದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಬಿ.ಎಸ್.ಯಡಿಯೂರಪ್ಪ ಅವರ ಮಾತಿಗೆ ಸಮಾಧಾನ ಹೊಂದಿದ್ದು, ಇಂದು(ಬುಧವಾರ) ಅಭ್ಯರ್ಥಿ ಗೋವಿಂದ ಕಾರಜೋಳ ಅವರ ಜೊತೆಗೆ ಕೈ ಮಿಲಾಯಿಸಿ ಮೋದಿ ಪ್ರಧಾನಿ ಮತ್ತೊಮ್ಮೆ ಎಂಬ ಘೋಷ ವಾಕ್ಯಕ್ಕೆ ಕಠಿ ಬದ್ಧರಾಗಿ ದುಡಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ರಘುಚಂದನ್ ಅವರಿಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಟರ ವಿರುದ್ಧ ಸಿಡಿದಿದ್ದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಹಾಗೂ ಪುತ್ರ ರಘುಚಂದನ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಹೈ ಕಾಮಂಡ್‌ಗೆ ಎಚ್ವರಿಕೆಯ ಸಂದೇಶ ರವಾನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಂದ್ರಪ್ಪ ಹಾಗೂ ಪುತ್ರ ರಘುಚಂದನ್ ಅವರನ್ನು ಬೆಂಗಳೂರಿಗೆ ಕರೆಸಿ ಮಾತುಕತೆ ನಡೆಸಿದ್ದು ಫಲಪ್ರದ ನೀಡಿದೆ.
'ನಾನು ಪೋತಪ್ಪ ನಾಯಕನೇ ಕಣೋ'; ತಿಪ್ಪಾರೆಡ್ಡಿ ಹೇಳಿಕೆಗೆ ಬಿಜೆಪಿ ಶಾಸಕ ಎಂ ಚಂದ್ರಪ್ಪ ತಿರುಗೇಟು!
ಇಂದು ಬೆಳಗ್ಗೆ ಶಾಸಕ ಎಂ.ಚಂದ್ರಪ್ಪ ಮನೆಗೆ ಗೋವಿಂದ ಕಾರಜೋಳ ಭೇಟಿ ನೀಡಿ, ಚರ್ಚಿಸಿ ಚುನಾವಣೆಯಲ್ಲಿ ನನ್ನ ಗೆಲುವಿನ ರೂವಾರಿಗಳಾಗಬೇಕು ಎಂದು ಚರ್ಚಿಸಿದ್ದು, ಮೋದಿಜೀ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಈನಿ ಟ್ಟಿನಲ್ಲಿ ಚುನಾವಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಚಂದ್ರಪ್ಪ ಹಾಗೂ ರಘುಚಂದನ್ ಅವರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ, ಶಾಸಕ ಎಂ.ಚಂದ್ರಪ್ಪ ಪುತ್ರ ರಘುಚಂದನ್ ಆಶಾವಾದಿ ಯುವಕ. ರಘುಚಂದನ್ ಬಿಜೆಪಿ ಟಿಕೆಟ್ ಸಿಗುವ ನೀರಿಕ್ಷೆಯಲ್ಲಿ ಇದ್ದರು. ಯಾವದೋ ಕಾರಣಕ್ಕೆ ರಘಚಂದನ್ ಗೆ ಟಿಕೆಟ್ ತಪ್ಪಿದೆ. ವರಿಷ್ಠರು ಒತ್ತಾಯ ಮಾಡಿದ್ದರಿಂದ ನಾನು ಬೇಡ ಎನ್ನಲಾಗಲಿಲ್ಲ. ಅಲ್ಲದೆ ನಮಗೆ ಮೋದಿ ಪ್ರಧಾನಿ ಆಗಬೇಕು ಎಂಬುದೊಂದೆ ಉದ್ದೇಶ ಹಾಗಾಗಿ ಒಪ್ಪಿಕೊಂಡಿರುವುದಾಗಿ ತಿಳಿಸಿದರು.
ಪ್ರಧಾನಿ ಮೋದಿ ಸಾಧನೆಯೇ ಬಿಜೆಪಿ ಗೆಲುವಿಗೆ ನಾಂದಿ: ಗೋವಿಂದ ಕಾರಜೋಳ
ಚಂದ್ರಣ್ಣ ನಾನು ಒಂದೇ ತಟ್ಟೆಯಲ್ಲಿ ಉಂಡ ಅಣ್ಣ.ತಮ್ಮಂದಿರು. ಕೆಲವೊಮ್ಮೆ ಆವೇಶಭರಿತರಾದಾಗ ಮಾತುಗಳು ಹೆಚ್ಚು ಕಡಿಮೆ ಆಗಿರುತ್ತವೆ. ಈಗ ಚಂದ್ರಪ್ಪ, ಪುತ್ರ ರಘುಚಂದನ್ ನನ್ನೊಂದಿಗೆ ಸ್ವಚ್ಛ ಮನಸಿನಿಂದ ಬಿಜೆಪಿ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಚುನಾವಣೆ ವೇಳೆ ನಮ್ಮದೇ ಜವಬ್ದಾರಿ ಎಂದು ಹೇಳಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಲು ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ ಎಂದು ಹೇಳಿದ ಅವರು, ನನಗೆ ಚಂದ್ರಪ್ಪ ಮತ್ತು ರಘುಚಂದನ್ ಮೇಲೆ ವಿಶ್ವಾಸವಿದ್ದು, ನಾಳೆ ಎಲ್ಲರೂ ಒಗ್ಗಟ್ಟಿನಿಂದ ನಾಮ ಪತ್ರ ಸಲ್ಲಿಸುತ್ತೇವೆ ಎಂದರು.
ಮೊಳಕಾಲ್ಮೂರು ಎಸ್ಟಿ ಮೋರ್ಚಾ ಅಧ್ಯಕ್ಷ ತಿಪ್ಪೇಸ್ವಾಮಿ ಹಣ ಹಂಚಿಕೆ ಬಗ್ಗೆ ಹೇಳಿಕೆ ವಿಚಾರ ಸತ್ಯಕ್ಕೆ ದೂರವಾದಂತಹ ವಿಚಾರವಾಗಿದೆ. ಯಾರೂ ಸಹ ಈ ಬಗ್ಗೆ ಅಪಪ್ರಚಾರ ಮಾಡಕೂಡದು. ನಮ್ಮ ಬಳಿ ಹಣ ಹಂಚುವ ಪದ್ಧತಿಯೇ ಇಲ್ಲ ಎಂದು ಗೋವಿಂದ ಕಾರಜೋಳ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.