Lok Sabha Election 2024: ಕಾಂಗ್ರೆಸ್‌ಗೆ ಮೋದಿ ಭಯ ಶುರುವಾಗಿದೆ: ಸಂಸದ ಉಮೇಶ್ ಜಾಧವ್

Published : Apr 03, 2024, 11:46 AM IST
Lok Sabha Election 2024: ಕಾಂಗ್ರೆಸ್‌ಗೆ ಮೋದಿ ಭಯ ಶುರುವಾಗಿದೆ: ಸಂಸದ ಉಮೇಶ್ ಜಾಧವ್

ಸಾರಾಂಶ

ಪ್ರಧಾನಿ ಮೋದಿ ಅವರು 10 ವರ್ಷಗಳಲ್ಲಿ ದೇಶದಲ್ಲಿ ಹಾಗೂ ಕಲ್ಬುರ್ಗಿಗೆ ನೀಡಿದ ಕೊಡುಗೆಗಳನ್ನು ನೋಡಿ ಕಾಂಗ್ರೆಸ್ಸಿನಲ್ಲಿ ಮೋದಿ ಭಯ ಶುರುವಾಗಿದೆ ಎಂದ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ 

ಕಲಬರಗಿ(ಏ.03):  ಬ್ರಿಟಿಷ್ ಕಾನೂನು ಪದ್ಧತಿಯಲ್ಲಿದ್ದ ಐಪಿಸಿ ಕಾನೂನುಗಳ ತಿದ್ದುಪಡಿ ಮಾಡಿ ಭಾರತೀಯ ನ್ಯಾಯ ಸಂಹಿತೆ (ಬಿ.ಎನ್. ಎಸ್)ಜಾರಿ ಮಾಡಿರುವುದರಿಂದ ಬ್ರಿಟಿಷ್ ಗುಲಾಮತನದಿಂದ ಮುಕ್ತಗೊಳಿಸಿ ಭಾರತೀಯ ಸಂಸ್ಕೃತಿಯ ಮಾನಸಿಕತೆ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ನಿರ್ಧಾರ ಮಾಡಿರುವುದು ಐತಿಹಾಸಿಕ ಕ್ರಮ ಎಂದು ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಹೇಳಿದರು.

ಕಲ್ಬುರ್ಗಿ ನ್ಯಾಯವಾದಿಗಳ ಸಂಘದಲ್ಲಿ ಏ.2ರಂದು ನ್ಯಾಯವಾದಿಗಳನ್ನುದ್ದೇಶಿಸಿ ಮಾತನಾಡುತ್ತಾ ಸುಮಾರು 1500 ಕಳಪೆ ಕಾನೂನುಗಳನ್ನು ರದ್ದು ಮಾಡಿ ಭಾರತೀಯ ಸಾಮಾಜಿಕ ಜೀವನಕ್ಕೊಪ್ಪುವ ಕಾನೂನುಗಳನ್ನು ಜಾರಿಗೆ ತಂದು ಜನಸಾಮಾನ್ಯರ ಬಾಳಿಗೆ ಕಾನೂನು ಕೈಗೆಟಕುವಂತೆ ಮಾಡಿದರು. ಕೇಂದ್ರ ಸರ್ಕಾರದಲ್ಲಿ ದಲಿತ ಮುಖಂಡ, ನಿವೃತ್ತ ಐಎಎಸ್ ಅಧಿಕಾರಿ ಅರ್ಜುನ್ ರಾಮ್ ಮೇಘಾವಾಲ್ ಎರಡನೇ ದಲಿತ ಕಾನೂನು ಮಂತ್ರಿಯಾಗಿ ಪ್ರಧಾನಿ ಮತ್ತು ಗೃಹ ಸಚಿವರ ದಕ್ಷಿಣ ನಾಯಕತ್ವದಲ್ಲಿ ಭಾರತೀಯ ನ್ಯಾಯ ಸಮಿತಿ ಜಾರಿಗೆ ತಂದರು ನನ್ನ ಹಿರಿಯ ಸಹೋದರ ಭೀಮ್ ಸಿಂಗ್ ಜಾಧವ್ ನ್ಯಾಯವಾದಿಗಳಾಗಿ ಜನಸೇವೆ ಮಾಡಿದ್ದು ಈಗ ನ್ಯಾಯವಾದಿಗಳ ಬೆಂಬಲ ಮತ್ತು ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು ಜಾಧವ್ ಮನವಿ ಮಾಡಿದರು.

ಡಿಎನ್ಎ ಟೆಸ್ಟ್ ಮಾಡಿಸಿದ್ರೆ ಕುಟುಂಬ ರಾಜಕಾರಣ ಬಯಲು: ಸಚಿವ ಪ್ರಿಯಾಂಕ್‌ ಖರ್ಗೆ

ಮೋದಿ ಭಯ ಶುರು:

ಪ್ರಧಾನಿ ಮೋದಿ ಅವರು 10 ವರ್ಷಗಳಲ್ಲಿ ದೇಶದಲ್ಲಿ ಹಾಗೂ ಕಲ್ಬುರ್ಗಿಗೆ ನೀಡಿದ ಕೊಡುಗೆಗಳನ್ನು ನೋಡಿ ಕಾಂಗ್ರೆಸ್ಸಿನಲ್ಲಿ ಮೋದಿ ಭಯ ಶುರುವಾಗಿದೆ ಎಂದರು. ಕಲ್ಬುರ್ಗಿಯಲ್ಲಿ ಹತ್ತು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮೆಗಾ ಜವಳಿ ಪಾರ್ಕ್ ಅಸ್ತಿತ್ವಕ್ಕೆ ಬರಲಿದ್ದು ಈ ಯೋಜನೆ ಜಾರಿಯಾಗದಿದ್ದರೆ ರಾಜೀನಾಮೆಗೂ ಸಿದ್ಧ ಎಂದು ಪಟ್ಟು ಹಿಡಿದ ಪರಿಣಾಮವಾಗಿ ಇನ್ನು ಆರು ತಿಂಗಳಲ್ಲಿ ಕೆಲಸ ಪ್ರಾರಂಭವಾಗಲಿದೆ. 1475 ಕೋಟಿ ರುಪಾಯಿ ವೆಚ್ಚದಲ್ಲಿ ಭಾರತ್ ಸಾಗರ್ ಮಾಲಾ ರಸ್ತೆ 200 ಕೋಟಿ ರೂಪಾಯಿ ವೆಚ್ಚದಲ್ಲಿ ಅಮೃತ್ ಭಾರತ್ ರೈಲು ನಿಲ್ದಾಣ ಅಭಿವೃದ್ಧಿ ಯೋಜನೆ ಅಡಿ ವಾಡಿ ಶಹಾಬಾದ್ ಕಲಬುರ್ಗಿ ಹಾಗೂ ಸ್ಟೇಷನ್ ಗಾಣಗಾಪುರ ರೈಲು ನಿಲ್ದಾಣಗಳು ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿಗೆ ಚಾಲನೆ ದೊರೆತಿದೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಾಂಗ್ರೆಸ್ಸಿಗೆ ಮೋದಿ ಭಯ ಈಗಲೇ ಪ್ರಾರಂಭವಾಗಿದೆ ಎಂದು ಹೇಳಿದರು.

ಹಿಂದೂ ಧರ್ಮವನ್ನು ಕ್ಯಾನ್ಸರ್ ಹೀಯಾಳಿಸಿ ಅಪಮಾನಕರ ಹೇಳಿಕೆ ನೀಡಿದ ಮತ್ತು ವಿಧಾನ ಸೌಧ ದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ಬೆಂಬಲಿಸಿದ ಕಾಂಗ್ರೆಸ್ಸಿನ ನಿಜ ಬಣ್ಣ ಬಯಲಾಗಿದೆ. ಭಾರತದ ಉಜ್ವಲ ಭವಿಷ್ಯಕ್ಕಾಗಿ ಮೋದಿಯವರನ್ನು ಪ್ರಧಾನಿಯಾಗಿಸಲು ಎಲ್ಲರೂ ಬೆಂಬಲಿಸಬೇಕು ಎಂದು ಜಾಧವ್ ಹೇಳಿದರು.

ವಕೀಲರುಗಳು ಪ್ರತಿಯೊಬ್ಬರಲ್ಲೂ ಶಿಸ್ತು ಮೂಡಿಸುವವರು.ಹಾಗೆ ಕೇಂದ್ರದಲ್ಲಿ ಮೋದಿಯವರು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿ ದೇಶಕ್ಕೆ ಶಿಸ್ತಿನ ಸರಕಾರವನ್ನು ನೀಡಿ ಜನಪ್ರಿಯತೆ ಗಳಿಸಿದ್ದಾರೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ ನಮೋಶಿ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ತುಘಲಕ್‌ ಆಡಳಿತ: ಕೇಂದ್ರ ಸಚಿವ ಭಗವಂತ ಖುಬಾ

ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಗುಪ್ತಲಿಂಗ ಪಾಟೀಲ್ ಮಾತನಾಡಿ, ಮೋದಿಯವರ ಆಡಳಿತದ ಹತ್ತು ವರ್ಷ ಹಾಗೂ ಜಾಧವ್ ಅವರ ಐದು ವರ್ಷಗಳ ಸಾಧನೆಯನ್ನು ವಿವರವಾಗಿ ತಿಳಿಸಿರುವುದರಿಂದ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಶುಭ ಹಾರೈಸಿದರು.

ಪ್ರಧಾನ ಕಾರ್ಯದರ್ಶಿ ಬಿ.ಎಸ್ ನಾಶಿ, ಜಯಶೀಲ ಬದೋಲೆ, ಶಿವರಾಜ್ ಸಿ. ಪಾಟೀಲ್ ದಯಾಘನ ಧಾರವಾಡಕರ್, ಬಸವರಾಜ ಚಿಂಚೋಳಿ ವಿಠ್ಠಲ್ ಮಿಸ್ಕಿನ್, ಸಿದ್ದಾಜಿ ಪಾಟೀಲ್ ರಾಜು ಕೊರಳ್ಳಿ ,ಎಸ್ ಆರ್ ಪೊಲೀಸ್ ಪಾಟೀಲ್ ಮತ್ತು ಲಕ್ಷ್ಮಿಕಾಂತ್ ಕುಲಕರ್ಣಿ ಮತ್ತಿತರದಿದ್ದರು. ಸಂಘದ ಉಪಾಧ್ಯಕ್ಷರಾದ ಧರ್ಮಣ್ಣ ಜೈನಾಪುರ್ ಸ್ವಾಗತಿಸಿ ನಿರೂಪಿಸಿದರು ನ್ಯಾಯವಾದಿ ಶಾಂತಪ್ಪ ಚಿಕಾಲಿ ವಂದಿಸಿದರು. ನಿಯೋಜಿತ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಅವರು ಕೋರ್ಟ್ ಆವರಣದಲ್ಲಿ ನ್ಯಾಯವಾದಿಗಳು ಹಾಗೂ ಸಾರ್ವಜನಿಕರನ್ನು ಭೇಟಿಯಾಗಿ ಮತ ಯಾಚಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು - Jaya Bachchan ಬಾಯ್ಕಾಟ್‌ ಆಗ್ತಾರಾ?