
ಕಲಬುರಗಿ (ಏ.12): ಬಿಜೆಪಿಯವರು ಮಾತ್ರ ದೇಶಭಕ್ತರು. ದೇಶ ತಮ್ಮಿಂದಲೇ ನಡೀತಿದೆ ಅಂದುಕೊಂಡಿದ್ದಾರೆ. ಇಲ್ಲಿ ನೆರದಿರೋ ನಾವೆಲ್ಲರೂ ದೇಶಭಕ್ತರು, ಮಣ್ಣಿನ ಮಕ್ಕಳು. ಕಾಂಗ್ರೆಸ್‌ನವರು ನಮಗಿಂತ ಹೆಚ್ಚು ದೇಶಭಕ್ತರು ಅಂತಾ ಬಿಜೆಪಿಯವರಿಗೆ ಗೊತ್ತಾಗಬೇಕು ಎಂದು 'ಬೋಲೋ ಭಾರತ್ ಮಾತಾ ಕೀ ಜೈ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಕಾರ್ಯಕರ್ತರಿಂದ ಘೋಷಣೆ ಕೂಗಿಸಿದರು.
ಇಂದು ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದರು. ಭಾಷಣಕ್ಕೆ ಮೊದಲು, 'ಖರ್ಗೆ ಸಾಹೇಬ್ರು ತಪ್ಪು ತಿಳಿಯಬಾರದು ಎಂದು ಹೇಳಿ "ಭಾರತ ಮಾತಾಕೀ ಜೈ ಎಂದು ಜಯಘೋಷ ಮೊಳಗಿಸಿದರು.
ಮಂಕುಬೂದಿ ಎರಚಿ ಅಧಿಕಾರಕ್ಕೇರಿದ ನರೇಂದ್ರ ಮೋದಿ: ಲಕ್ಷ್ಮಣ ಸವದಿ
ನರೇಂದ್ರ ಮೋದಿಯವರನ್ನ ಪ್ರಧಾನಿಯನ್ನಾಗಿ ಮಾಡ್ತಿರೋವಾಗ ಸಾಕಷ್ಟು ಕನಸ್ಸು ಕಟ್ಟಿಕೊಂಡಿದ್ದೆವು. ದೇಶಕ್ಕೆ ಕಪ್ಪು ಹಣ ತರ್ತಾರೆ, ಆ ಹಣದಲ್ಲಿ ಚಿನ್ನದ ರಸ್ತೆ ಮಾಡಿ ಓಡಾಡಬಹುದು, ಚಿನ್ನದ ತಟ್ಟೆಯಲ್ಲಿ ಊಟ ಮಾಡಬಹುದು ಎಂದು ಸಂಘ ಪರಿವಾರದ ಚಕ್ರವರ್ತಿ ಸೂಲಿಬೆಲೆ ಹೇಳಿದ್ದರು. ಚಕ್ರವರ್ತಿ ಸೂಲಿಬೆಲೆ ಬರೀ ಸುಳ್ಳು ಹೇಳಿಕೊಂಡು ಓಡಾಡ್ತಾನೆ. ದೇಶದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆ ಇಂದು ಗಗನಕ್ಕೇರಿದೆ. ಬಿಜೆಪಿಯವರು ಯಾವ ಮುಖ ಇಟ್ಟುಕೊಂಡು ಮತ ಕೇಳಲು ಬರ್ತಾರೆ? ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.