600 ಕೋಟಿಗಳ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವ ಮಧು ಬಂಗಾರಪ್ಪ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಜಾಮೀನಿಗಾಗಿ ನ್ಯಾಯಾಲಯ ಆವರಣದಲ್ಲಿ ಪರದಾಡುತ್ತಿದ್ದಾನೆ. ಜಾಮೀನು ಸಿಗುವುದು ಯಡವಟ್ಟಾದರೆ ಕಂಬಿಯ ಹಿಂದೆ ಮುದ್ದೆ ಮುರಿಯಲು ಸಿದ್ಧನಾಗಬೇಕಾಗುತ್ತದೆ ಎಂದು ಕುಮಾರ್ ಬಂಗಾರಪ್ಪ ಲೇವಡಿ ಮಾಡಿದರು.
ಸೊರಬ (ಏ.01): 600 ಕೋಟಿಗಳ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವ ಮಧು ಬಂಗಾರಪ್ಪ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಜಾಮೀನಿಗಾಗಿ ನ್ಯಾಯಾಲಯ ಆವರಣದಲ್ಲಿ ಪರದಾಡುತ್ತಿದ್ದಾನೆ. ಜಾಮೀನು ಸಿಗುವುದು ಯಡವಟ್ಟಾದರೆ ಕಂಬಿಯ ಹಿಂದೆ ಮುದ್ದೆ ಮುರಿಯಲು ಸಿದ್ಧನಾಗಬೇಕಾಗುತ್ತದೆ ಎಂದು ಕುಮಾರ ಬಂಗಾರಪ್ಪ ಲೇವಡಿ ಮಾಡಿದರು. ಸೊರಬ ತಾಲೂಕು ಬಿಜೆಪಿ ವತಿಯಿಂದ ಉದ್ರಿ ಮಹಾಶಕ್ತಿ ಕೇಂದ್ರದ ತವನಂದಿ ಗ್ರಾಮದ ಬೂತ್‌ನಲ್ಲಿ ಪಕ್ಷದ ಸಂಘಟನೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ದೊಡ್ಡ ಸಾಹೇಬ್ರು ಮಧು ಸ್ವಲ್ಪ ಹೆಡ್ಡ. ರಾಜಕೀಯಕ್ಕೆ ಆತ ಲಾಯಕ್ಕಿಲ್ಲ. ಆದ್ದರಿಂದ ಸಮನವಳ್ಳಿ ಗ್ರಾಮದ ತೋಟ ಕೊಟ್ಟುಬಿಡು ಅಂದ್ರು ಹಿಂದೆ ಮುಂದೆ ನೋಡ್ಲಿಲ್ಲ. ತಂದೆಯ ಮಾತನ್ನು ಪಾಲಿಸಿದೆ. ಆದರೆ, ಆತ ರಾಜಕೀಯ ಅಸ್ಥಿತ್ವಕ್ಕಾಗಿ ನನ್ನ ಮೇಲೆಯೇ ಹಗೆತನ ಸಾಧಿಸುತ್ತಿದ್ದಾನೆ. ಅಧಿಕಾರ ಇದ್ದಾಗಲೇ ರೈತರ ಜಮೀನು ರಕ್ಷಣೆ ಮಾಡಲಾಗದವನು ಚುನಾವಣೆ ಹತ್ತಿರಾಗುತ್ತಿದ್ದಂತೆ ಪಾದಯಾತ್ರೆ ಮಾಡುವ ನೆಪದಲ್ಲಿ ಜನರೆದುರು ಮೊಸಳೆ ಕಣ್ಣೀರು ಸುರಿಸಿ, ಇಡೀ ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆಸಿ, ದಿಕ್ಕು ತಪ್ಪಿಸುತ್ತಿದ್ದಾನೆ ಎಂದು ಹರಿಹಾಯ್ದರು.
ಕಲಘಟಗಿ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಬಿಗ್ ಫೈಟ್: ಹಾಲಿ ಶಾಸಕನ ವಿರುದ್ಧ ಭುಗಿಲೆದ್ದ ಅಸಮಾಧಾನ
ತಾಳಗುಪ್ಪ ರೈತರ ಒಕ್ಕಲೆಬ್ಬಿಸುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮಸ್ಯೆಯನ್ನು ಹುಟ್ಟು ಹಾಕಿದವನೇ ಮಧು ಬಂಗಾರಪ್ಪ. 13ರ ನಂತರ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ. ಆಗ ತಾಳಗುಪ್ಪ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಒಂದು ತಿಂಗಳು ತನ್ನಲ್ಲಿಯೇ ಬಚ್ಚಿಟ್ಟುಕೊಂಡು ರೈತರನ್ನು ವಂಚಿಸಿದ್ದರ ಬಗ್ಗೆ ಸಮಗ್ರ ತನಿಖೆ ನಡೆಸಿ, ತಕ್ಕಶಾಸ್ತಿ ಮಾಡಲಾಗುವುದು ಎಂದರು.
ಕಳೆದ 5 ವರ್ಷಗಳಲ್ಲಿ .2000 ಕೋಟಿ ವೆಚ್ಚದಲ್ಲಿ ತಾಲೂಕಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಒಂದು ವರ್ಷಕ್ಕೆ ಒಂದು ಕೋಟಿಯಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ಸುಮಾರು 37 ಸಾವಿರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ .850 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ದಂಡಾವತಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನವನ್ನು ಧರ್ಮಸ್ಥಳದ ಮಾದರಿಯಲ್ಲಿ ಡಾ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದಗಳೊಂದಿಗೆ ನಿರ್ಮಿಸಲಾಗುವುದು. ಅಡಕೆ ಮಾರುಕಟ್ಟೆಸೇರಿದಂತೆ ಮುಂದಿನ ಐದು ವರ್ಷದಲ್ಲಿ 15ರಿಂದ 20 ಸಾವಿರ ಯುವಕರಿಗೆ ಉದ್ಯೋಗ ಕಲ್ಪಿಸುವ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಯೋಜನೆ ನಮ್ಮ ಮುಂದಿದೆ ಎಂದು ತಿಳಿಸಿದರು.
ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಕೊಡಿ: ಅಣ್ಣಾಮಲೈ
ಬಗರ್‌ಹುಕುಂ ಸಮಿತಿ ಸದಸ್ಯ ದೇವೇಂದ್ರಪ್ಪ ಚನ್ನಾಪುರ, ಬಿಜೆಪಿ ಮಂಡಲ ಉಪಾಧ್ಯಕ್ಷ ನಾಗರಾಜಗೌಡ, ಜಡೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅಮಿತ್ ಗೌಡ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಪ್ಪಗಡ್ಡೆ, ಯುವ ಮೋರ್ಚಾ ಅಧ್ಯಕ್ಷ ಅಭಿಷೇಕ್ ಗೌಡ ಬೆನ್ನೂರು, ವಿನಾಯಕ ತವನಂದಿ, ವಕೀಲ ಮಂಚಪ್ಪ, ಶಕ್ತಿ ಕೇಂದ್ರದ ಪ್ರಮುಖರಾದ ಗಿರಿಯಪ್ಪ ಮೊದಲಾದವರು ಹಾಜರಿದ್ದರು.