ಕೆಲಸ ಮಾಡುವ ತಾಕತ್ ಇರುವುದು ಬಿಜೆಪಿಗಷ್ಟೇ ಅದು ಕಾಂಗ್ರೆಸ್‌ಗಿಲ್ಲ ಎಂದು ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಕೆ.ಅಣ್ಣಾಮಲೈ ಹೇಳಿದರು. ಹನೂರು ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಒಬಿಸಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಹನೂರು (ಏ.01): ಕೆಲಸ ಮಾಡುವ ತಾಕತ್ ಇರುವುದು ಬಿಜೆಪಿಗಷ್ಟೇ ಅದು ಕಾಂಗ್ರೆಸ್‌ಗಿಲ್ಲ ಎಂದು ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಕೆ.ಅಣ್ಣಾಮಲೈ ಹೇಳಿದರು. ಹನೂರು ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಒಬಿಸಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಗಷ್ಟೇ ಜನರಿಗೆ ಕೆಲಸ ಮಾಡುವ ತಾಕತ್ ಇರುವುದು, ಕಾಂಗ್ರೆಸ್ ಪಾರ್ಟಿಗೆ ಇಲ್ಲ, ಕಾಂಗ್ರೆಸ್ ಒಂದು ಪರಿವಾರದ ಪಕ್ಷ, ನಮ್ಮದು ಜನರ ಪಕ್ಷ ಇದು ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದರು. ಕರ್ನಾಟಕ ಕಾಂಗ್ರೆಸ್ ಇರುವುದು ಗಾಂಧಿ ಕುಟುಂಬದ ಸೇವೆ ಮಾಡಲು, ಗಾಂಧಿ ಪರಿವಾರದ ಕೆಲಸ ಮಾಡಲಷ್ಟೇ ಇಲ್ಲಿನ ನಾಯಕರಿದ್ದಾರೆ.
ಅವರು ಒಂದೊಂದು ಸಾರಿ ಅಧಿಕಾರಕ್ಕೆ ಬಂದಾಗಲೂ ಗಾಂಧಿ ಕುಟುಂಬವನ್ನೂ ಹೇಗೆ ಖುಷಿ ಗೊಳಿಸಬೇಕೆಂದು ಯೋಚನೆ ಮಾಡುತ್ತಾರೆ ಎಂದು ಕೈ ಪಡೆ ವಿರುದ್ಧ ವಾಗ್ದಾಳಿ ಮಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಆ ಕೆಲಸ ಮಾಡುತ್ತೇವೆ, ಈ ಕೆಲಸ ಮಾಡುತ್ತೇವೆ ಎನ್ನುತ್ತಾರೆ. 70 ವರ್ಷದಲ್ಲಿ 60 ವರ್ಷ ಅವರೇ ಆಡಳಿತ ನಡೆಸಿದ್ದಾರೆ, ವಿರೋಧ ಪಕ್ಷದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿನ್ನೆ ಮೊನ್ನೆ ರಾಜ್ಯಕ್ಕೆ ಬಂದವರಲ್ಲ, ಅಧಿಕಾರ ಅನುಭವಿಸಿದ್ದಾರೆ..? ಏನು ಮಾಡಿದ್ದಾರೆ ಎಂದು ಹೇಳಲಿ. ಅವರು ಮೈಕ್ ಬಳಸುವುದು ಕೇವಲ ಬಿಜೆಪಿ ವಿರುದ್ಧ ಟೀಕೆ ಮಾಡಲೇ ಹೊರತು ಅಭಿವೃದ್ಧಿ ಬಗ್ಗೆ ಮಾತನಾಡಲು ಅಲ್ಲ ಎಂದು ಕಿಡಿಕಾರಿದರು.
undefined
ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಕೊಡಿ: ಅಣ್ಣಾಮಲೈ
ಇದು ಟ್ರೈಲರ್ ಅಷ್ಟೇ: ಮೀಸಲಾತಿ ವಿಚಾರವನ್ನು ಯಾರು ಮುಟ್ಟುತ್ತಿರಲಿಲ್ಲ, ಆದರೆ ಬಿಜೆಪಿ ಸರ್ಕಾರ ಬಂದ ಬಳಿಕ ಮೀಸಲಾತಿಯನ್ನು ಬದಲಿಸಿದ್ದೇವೆ. ಒಳ ಮೀಸಲಾತಿ ಕೊಟ್ಟಿದ್ದೇವೆ. ಕಾಂಗ್ರೆಸ್ ಪಕ್ಷದವರಿಗೆ ಜನರ ಮತ ಬೇಕಿತ್ತು ಆದರೆ ಅಭಿವೃದ್ಧಿ ಬೇಕಿರಲಿಲ್ಲ. ಆದರೆ ಬೊಮ್ಮಾಯಿ ಅವರು ಜನಪರವಾಗಿ ಮೀಸಲಾತಿ ತಂದಿದ್ದಾರೆ, ಇದು ಕೇವಲ ಟ್ರೈಲರ್ ಅಷ್ಟೇ ಬದಲಾಯಿಸಬೇಕಾದ್ದು ಬಹಳಷ್ಟಿದೆ ಎಂದರು. ನಾವು ಎಲ್ಲಾ ಕೆಲಸ ಮಾಡಿದ್ದೇವೆ ಎಂದು ಹೇಳುತ್ತಿಲ್ಲ, ಮಾಡಬೇಕಾದ ಕೆಲಸ ಬಹಳಷ್ಟಿದೆ. ಡಬಲ್ ಎಂಜಿನ್ ಸರ್ಕಾರದ ವೇಗ ನೋಡಿದ್ದೀರಿ. 100, 120, 107 ಹೀಗೆ ಈ ಸಂಖ್ಯೆ ಬೇಡ, 150 ಸ್ಥಾನ ಕೊಡಿ ಬಳಿಕ ನಿಮ್ಮನೆ ಬಾಗಿಲಿಗೆ ಅಭಿವೃದ್ಧಿ ಪರ್ವ. ಈ ಬಾರಿ ಚಾಮರಾಜನಗರದಲ್ಲಿ ನಾಲ್ಕಕ್ಕೇ ನಾಲ್ಕು ಸ್ಥಾನದಲ್ಲೂ ಬಿಜೆಪಿ ಪತಾಕೆ ಹಾರಿಸಿ ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಜನಾಶ್ರಯ ಟ್ರಸ್ಟ್‌ನ ಬಿ. ವೆಂಕಟೇಶ್, ನಿಶಾಂತ್, ಡಾ. ದತ್ತೇಶ್‌ಕುಮಾರ್ ಹಾಗೂ ಡಾ.ಪ್ರೀತಂ ನಾಗಪ್ಪ ಬಿಜೆಪಿಯನ್ನು ಈ ಬಾರಿ ಗೆಲ್ಲಿಸುವಂತೆ ಮನವಿ ಮಾಡಿದರು.
Chamarajanagar: ಏ.9ಕ್ಕೆ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ?: ಸಫಾರಿಗೆ ಹೋಗ್ತಾರಂತೆ ಮೋದಿ
ತಮಿಳಿನಲ್ಲೂ ಭಾಷಣ: ಹನೂರು ಕ್ಷೇತ್ರದಲ್ಲಿ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದಿದ್ದರಿಂದ ತಮಿಳುನಲ್ಲೂ ಭಾಷಣ ಮಾಡಿದರು. ಅಭಿವೃದ್ಧಿ ಕೇವಲ ಬೆಂಗಳೂರಿನಲ್ಲಷ್ಟೇ ಇರಬಾರದು ಅದು ಚಾಮರಾಜನಗರದಲ್ಲೂ ಆಗಬೇಕು, ಬೀದರ್ ನಲ್ಲೂ ಆಗಬೇಕು ಅದಕ್ಕಾಗಿ ರಾಜ್ಯದಲ್ಲಿ ಈ ಬಾರಿ ಬಿಜೆಪಿ ಬರಬೇಕೆಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.