ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಹೆಚ್ಚು ಕಾಲ ಭವಿಷ್ಯವಿಲ್ಲ. 0.04ರ ತೀವ್ರತೆಯಲ್ಲಿ ಭೂಕಂಪನ ಆರಂಭವಾಗಿದೆ. 0.06 ಅಥವಾ 07 ರಷ್ಟು ಭೂಕಂಪನ ಆದರೆ ಬಿದ್ದೋಗುತ್ತೆ ಎಂದು ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ವಾಗ್ದಾಳಿ ನಡೆಸಿದರು.
ಕೋಲಾರ (ಆ.1): ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಹೆಚ್ಚು ಕಾಲ ಭವಿಷ್ಯವಿಲ್ಲ. 0.04ರ ತೀವ್ರತೆಯಲ್ಲಿ ಭೂಕಂಪನ ಆರಂಭವಾಗಿದೆ. 0.06 ಅಥವಾ 07 ರಷ್ಟು ಭೂಕಂಪನ ಆದರೆ ಬಿದ್ದೋಗುತ್ತೆ ಎಂದು ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ವಾಗ್ದಾಳಿ ನಡೆಸಿದರು.
ಬಿಜೆಪಿ ಪಾದಯಾತ್ರೆಯಿಂದ ಹಿಂದೆ ಸರಿದ ಜೆಡಿಎಸ್ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕರು, ಯಾವುದೇ ಸರ್ಕಾರವಾಗಲಿ ಪತನವಾಗಲಿ ಎಂದು ಯಾರೂ ಹೇಳಿಕೆ ನೀಡಬಾರದು. ಕೇಂದ್ರದ ಎನ್‌ಡಿಎ ಸರ್ಕಾರ ತಾನೇತಾನಾಗಿ ಪತನಾವಾಗುತ್ತೆ. ಅದಕ್ಕೆ ಹೆಚ್ಚು ದಿನ ಭವಿಷ್ಯವಿಲ್ಲ. ಈಗಾಗಲೇ ಒಳಜಗಳ ಶುರುವಾಗಿದೆ ಎಂದರು.
ರಾಜ್ಯಪಾಲರಿಂದ ಸಿಎಂಗೆ ನೋಟಿಸ್: 'ಏನು ಉತ್ತರ ಕೊಡಬೇಕೋ ಕೊಡ್ತೀವಿ': ಪರಮೇಶ್ವರ್
ಇನ್ನು ಇಷ್ಟು ದಿನ ನಾವೆಲ್ಲ ಅಣ್ಣ-ತಮ್ಮಂದಿರಂತೆ ಇದ್ದೇವೆ ಎನ್ನುತ್ತಿದ್ದ ಕುಮಾರಸ್ವಾಮಿ ಅವರು ಇದೀಗ ಬಿಜೆಪಿ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಬಿಜೆಪಿ-ಜೆಡಿಎಸ್ ನಡುವಿನ ಜಗಳ ಗಂಡ ಹೆಂಡತಿ ಜಗಳ ಇದ್ದಂತೆ ಹಗಲೆಲ್ಲ ಗಲಾಟೆ ಮಾಡಿಕೊಂಡು ರಾತ್ರಿಗೆ ಒಂದಾಗ್ತಾರೆ ಎಂದು ಲೇವಡಿ ಮಾಡಿದರು ಮುಂದುವರಿದು, ಬಿಜೆಪಿ-ಜೆಡಿಎಸ್ ನಡುವಿನ ಬಿರುಕು ಎಲ್ಲ ಪ್ರಾಯೋಜಿತವಾಗಿದೆ ಎಂದರು.
ಮುಡಾ ಹಗರಣ: ಬಿಜೆಪಿ ಪಾದಯಾತ್ರೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ
ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು ಪ್ರವಾಹದಿಂದ ಜಿಲ್ಲೆಗಳಲ್ಲಿ ಸಾಕಷ್ಟು ತೊಂದರೆಯಾಗಿದೆ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಬದಲು ರಾಜಕೀಯ ಹೋರಾಟ ಮಾಡುವುದು ಎಷ್ಟು ಸರಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.