'ನಾನು ಆರೆಸ್ಸೆಸ್‌, ಇವನು ತಾಲಿಬಾನ್ ಏಜೆಂಟಾ?' ಬಿ.ಎಂ.ಮುಬಾರಕ್‌ ವಿರುದ್ಧ ಹರಿಹಾಯ್ದ ಶಾಸಕ ಕೊತ್ತೂರು ಮಂಜುನಾಥ್

By Kannadaprabha News  |  First Published Aug 29, 2024, 4:18 PM IST

 ಹೌದು ನಾನು ಆರ್.ಎಸ್.ಎಸ್‌ನವನೇ ಏನೀಗ, ನಾನು ಆರ್.ಎಸ್.ಎಸ್ ಆದರೆ ಇವನು ಒಬ್ಬ ತಾಲಿಬಾನ್ ಏಜೆಂಟ್. ಎಂದು ಶಾಸಕ ಕೊತ್ತೂರು ಮಂಜುನಾಥ್, ನಗರಸಭಾ ಮಾಜಿ ಅಧ್ಯಕ್ಷ ಬಿ.ಎಂ.ಮುಬಾರಕ್‌ ವಿರುದ್ಧ ಹರಿಹಾಯ್ದರು.


ಕೋಲಾರ (ಆ.29) :  ಹೌದು ನಾನು ಆರ್.ಎಸ್.ಎಸ್‌ನವನೇ ಏನೀಗ, ನಾನು ಆರ್.ಎಸ್.ಎಸ್ ಆದರೆ ಇವನು ಒಬ್ಬ ತಾಲಿಬಾನ್ ಏಜೆಂಟ್. ಇವನಿಂದ 50-60 ಮನೆಗಳು ಮುಳುಗಿಸಿ ನಾಶವಾಗಿದೆ, ಹಲವಾರು ಮಂದಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಮುಬಾರಕ್ ಯಾರು, ಅವನ್ಯಾರು ನನ್ನನ್ನು ಪ್ರಶ್ನಿಸಲು ಅವನಿಗೇನು ಅಧಿಕಾರ ಇದೆ ಎಂದು ಶಾಸಕ ಕೊತ್ತೂರು ಮಂಜುನಾಥ್, ನಗರಸಭಾ ಮಾಜಿ ಅಧ್ಯಕ್ಷ ಬಿ.ಎಂ.ಮುಬಾರಕ್‌ ವಿರುದ್ಧ ಹರಿಹಾಯ್ದರು.

ನಾನು ಗೆಸ್ಟ್ ಹೌಸ್‌ನಲ್ಲಿ, ತೋಟದ ಮನೆಯಲ್ಲಿ, ಎಲ್ಲಿ ಬೇಕಾದರೂ ಮೀಟಿಂಗ್ ಮಾಡುತ್ತೇನೆ. ಇದನ್ನು ಕೇಳಲು ಇವನ್ಯಾರು, ನಾನು ಕರೆದ ಮೀಟಿಂಗ್‌ಗೂ ಇವನಿಗೂ ಏನು ಸಂಬಂಧ. ನಾನು ಕೂತ್ತೂರು ಮಂಜುನಾಥ್ ನನ್ನ ಇಷ್ಟ, ನನ್ನ ಅಧಿಕಾರ, ಇವನ್ಯಾರು ಎಂದು ಪ್ರಶ್ನಿಸಿದರು.

Tap to resize

Latest Videos

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಅಭಿವೃದ್ಧಿಗೆ ನೆರವು: ಶಾಸಕ ಕೊತ್ತೂರು ಮಂಜುನಾಥ್

ನಗರದ ನಗರಸಭೆ ನೂತನ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಮತ್ತು ಉಪಾಧ್ಯಕ್ಷೆ ಸಂಗೀತಾರ ಅಧಿಕಾರಿಗಳ ಸ್ವೀಕಾರ ಕಾರ್ಯಕ್ರಮದ ನಂತರ ಸುದ್ಧಿಗಾರರೊಂದಿಗೆ ಅವರು ಮಾತನಾಡಿ, ನಾನು ಆರ್.ಎಸ್.ಎಸ್ ಎಂದು ಮುಬಾರಕ್‌ ರುಜುವಾತುಪಡಿಸಲಿ ಎಂದು ಸವಾಲು ಹಾಕಿದರು. ಮುಬಾರಕ್‌ಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ, ಆತನನ್ನು ಪಕ್ಷವು ಅಮಾನತ್ತುಪಡಿಸಿದೆ, ಆತನಿಗೆ ನಮ್ಮನ್ನು ಪ್ರಶ್ನಿಸುವಂತ ನೈತಿಕತೆ ಇಲ್ಲ, ಅಧಿಕಾರವೂ ಇಲ್ಲ, ಮುಬಾರಕ್ ಏನೆಂದು ಮೊಬೈಲ್‌ನಲ್ಲಿ ಚಿತ್ರಿಸಿದ್ದ ಪೊಲೀಸ್ ಠಾಣೆಯಲ್ಲಿ ಸ್ಲೇಟ್ ಹಿಡಿದುಕೊಂಡಿರುವ ಪೋಟೋವನ್ನು ಪ್ರದರ್ಶಿಸಿದ ಅವರು ಮುಬಾರಕ್ ಎಂತಹವನು, ಎಂತಹ ಒಳ್ಳೆ ಕೆಲಸಗಳು ಮಾಡಿದ್ದಾನೆಂದು ನೀವೇ ಅರ್ಥ ಮಾಡಿಕೊಳ್ಳಿ, ಇಂತಹವನನ್ನು ನಾವು ನಗರಸಭೆಗೆ ಅಧ್ಯಕ್ಷರನ್ನಾಗಿ ಮಾಡಬೇಕಾ ಎಂದು ಪ್ರಶ್ನಿಸಿದರು.

ಅಧ್ಯಕ್ಷರಿಂದ ಅಧಿಕಾರಿ ಸ್ವೀಕಾರ ನಗರಸಭೆ ಅಧ್ಯಕ್ಷೆಯಾಗಿ ಲಕ್ಮೀದೇವಮ್ಮ ಉಪಾಧ್ಯಕ್ಷೆಯಾಗಿ ಸಂಗೀತಾ ಅವರುಗಳು ಇಂದು ಷಷ್ಟಿ ಹಾಗೂ ದಶಮಿಯಾಗಿದ್ದು ಒಳ್ಳೆಯ ದಿನವಾಗಿರುವುದರಿಂದ ಅಧಿಕಾರ ಸ್ವೀಕಾರಕ್ಕೆ ಉತ್ತಮ ದಿನವೆಂದು ಹಿರಿಯರು ತಿಳಿಸಿದ ಹಿನ್ನಲೆಯಲ್ಲಿ ಅವರು ತಮ್ಮ ನಗರಸಭೆ ಕಾರ್ಯಾಲಯದಲ್ಲಿ ತಮ್ಮ ಕೊಠಡಿಗಳಲ್ಲಿ ದೇವರ ಪೂಜೆ ನೆರವೇರಿಸಿ ಅಧಿಕಾರ ಸ್ವೀಕರಿಸಿದ್ದಾರೆ, ನಾವು ಹಾಜರಾಗಿ ಶುಭ ಹಾರೈಸಿದ್ದೇವೆ ಎಂದು ಹೇಳಿದರು.

 

ಕಾಂಗ್ರೆಸ್ ಸರ್ಕಾರ ಪತನ ಬಿಜೆಪಿಗರ ಕನಸು: ಶಾಸಕ ಕೊತ್ತೂರು ಮಂಜುನಾಥ್‌

ನೂತನ ಮಹಿಳಾ ಪೌರಾಯುಕ್ತೆ

ನಗರಸಭೆಗೆ ನೂತನ ಪೌರಾಯುಕ್ತರನ್ನು ನೇಮಿಸಲಾಗಿದೆ. ಇನ್ನು 3 - 4  ದಿನದಲ್ಲಿ ಅಧಿಕಾರವಹಿಸಿಕೊಳ್ಳಲಿದ್ದಾರೆ. ಅವರಿಂದಲೂ ನಗರದ ಅಭಿವೃದ್ದಿಯೊಂದಿಗೆ ಉತ್ತಮ ಕೆಲಸ ನಿರ್ವಹಿಸುತ್ತಾರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು ಎಂದರು. ನಗರಸಭೆಯ ಅಧ್ಯಕ್ಷೆ, ಉಪಾಧ್ಯಕ್ಷೆ ಮಹಿಳೆಯರಾಗಿದ್ದು, ಆಯುಕ್ತರೂ ಮಹಿಳೆಯಾಗಿರುವ ಕಾರಣ ಖಂಡಿತವಾಗಿ ನಗರವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಲಿದ್ದಾರೆ, ಆಡಳಿತದಲ್ಲಿ ನಿರ್ವಹಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅವರ ಪತಿಯಂದಿರು ಯಾರು ಬೇಕಾದರು ಮಾರ್ಗದರ್ಶನ ನೀಡಬಹುದೇ ಹೊರತು ಅಧಿಕಾರ ಚಲಾಯಿಸಲು ಬರುವುದಿಲ್ಲ, ಅವರು ಪತ್ನಿಯ ಜೊತೆಗೆ ಇರಲು ಯಾವೂದೇ ಅಭ್ಯಂತರವಿಲ್ಲ ಎಂದು ಹೇಳಿದರು.

click me!