ಕೋಟ್ಯಂತರ ರೂ. ವಂಚನೆ ಪ್ರಕರಣದಲ್ಲಿ ಶಾಸಕ ಅರೆಸ್ಟ್

By Suvarna NewsFirst Published Nov 7, 2020, 6:19 PM IST
Highlights

ಕೋಟ್ಯಂತರ ರೂ. ವಂಚನೆ ಪ್ರಕರಣದಲ್ಲಿ ಶಾಸಕರೊಬ್ಬರನ್ನು ಪೊಲೀಸ್ ಅರೆಸ್ಟ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕಾಸರಗೋಡು, (ನ.07): ಕೋಟ್ಯಂತರ ರೂ. ವಂಚನೆ ಪ್ರಕರಣದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಐಯುಎಂಎಲ್) ಮುಖಂಡ ಹಾಗೂ ಮಂಜೇಶ್ವರ ಶಾಸಕ ಎಂ.ಸಿ. ಕಮರುದ್ದೀನ್ ಅವರನ್ನು ಬಂಧಿಸಲಾಗಿದೆ.

ಚಿನ್ನದ ವ್ಯವಹಾರದಲ್ಲಿ ಠೇವಣಿದಾರರನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮರುದ್ದೀನ್ ಅವರನ್ನು ಇಂದು (ಶನಿವಾರ) ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ.  ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಕುಮಾರ್ ನೇತೃತ್ವದ ವಿಶೇಷ ತನಿಖಾ ತಂಡ ಸುದೀರ್ಘ ವಿಚಾರಣೆಯ ಬಳಿಕ ಅವರನ್ನು ಬಂಧಿಸಿದೆ.

ಬಿಜೆಪಿ‌ಗೆ ಕಾಂಗ್ರೆಸ್ ರಿವರ್ಸ್ ಆಪರೇಷನ್: ಸಿದ್ದರಾಮಯ್ಯ ಮಹತ್ವದ ಸಭೆ..!

ಫ್ಯಾಶನ್ ಗೋಲ್ಡ್ ಎಂಬ ಬ್ರಾಂಡ್ ಹೆಸರಿನಲ್ಲಿ ನಡೆಯುವ ಚಿನ್ನದ ವ್ಯವಹಾರದಲ್ಲಿ 115 ಠೇವಣಿದಾರರು ಕಮರುದ್ದೀನ್ ವಿರುದ್ಧ ವಂಚನೆ ಆರೋಪ ಮಾಡಿದ್ದರು. 

15 ಕೋಟಿ ರೂಪಾಯಿ ಚಿನ್ನದ ವ್ಯವಹಾರದ ಠೇವಣಿ ಹಗರಣ ಇದಾಗಿದ್ದು ಇದರಲ್ಲಿ ಶಾಸಕರು 13 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

click me!