ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ, ಕಾಂಗ್ರೆಸ್‌ಗೆ ಮರ್ಮಾಘಾತ..!

Published : Nov 07, 2020, 04:47 PM IST
ಮೊದಲ ಬಾರಿಗೆ  ಬಿಜೆಪಿ ಅಧಿಕಾರಕ್ಕೆ, ಕಾಂಗ್ರೆಸ್‌ಗೆ ಮರ್ಮಾಘಾತ..!

ಸಾರಾಂಶ

ಇದೇ ಮೊದಲ ಬಾರಿಗೆ ಇಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇದರಿಂದ ಕಾಂಗ್ರೆಸ್ ಭಾರೀ ಮುಖಭಂಗವಾಗಿದೆ.

ಮೂಡುಬಿದಿರೆ, (ನ.07): ಇದೇ ಮೊದಲ ಬಾರಿಗೆ ಮೂಡುಬಿದಿರೆ ಪುರಸಭೆಯಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಇಂದು (ಶನಿವಾರ) ನಡೆದ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪ್ರಸಾದ್ ಕುಮಾರ್ ಹಾಗೂ ಸುಜಾತಾ ಶಶಿಧರ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.

23 ವಾರ್ಡ್ ಗಳಲ್ಲಿ 11 ಕಾಂಗ್ರೆಸ್ ಹಾಗೂ 12 ಬಿಜೆಪಿ ಪಾಲಾಗಿದ್ದು ಶಾಸಕ ಉಮಾನಾಥ ಕೋಟ್ಯಾನ್ ಅವರು ಉಪಸ್ಥಿತರಿದ್ದರಿಂದ ಪ್ರಸಾದ್ ಕುಮಾರ್ ಹಾಗೂ ಸುಜಾತಾ ಅವರಿಗೆ ತಲಾ 13 ಮತಗಳು ಲಭಿಸಿವೆ.

ಬಿಜೆಪಿ‌ಗೆ ಕಾಂಗ್ರೆಸ್ ರಿವರ್ಸ್ ಆಪರೇಷನ್: ಸಿದ್ದರಾಮಯ್ಯ ಮಹತ್ವದ ಸಭೆ..!

ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪಿ.ಕೆ.ಥಾಮಸ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಮಮತಾ ಅವರಿಗೆ ತಲಾ 11ಮತಗಳು ಲಭಿಸಿವೆ.

ಅಧ್ಯಕ್ಷರಾಗಿ ಅಯ್ಕೆಯಾಗಿರುವ ಪ್ರಸಾದ್ ಕುಮಾರ್ ಸತತ 3ನೇ ಬಾರಿಗೆ ಪುರಸಭಾ ಸದಸ್ಯರಾಗಿರುವ ಅನುಭವಿಯಾಗಿದ್ದರೆ, ಸುಜಾತಾ ಅವರು ಇದೇ ಮೊದಲ ಬಾರಿಗೆ ಪುರಸಭೆಗೆ ಪ್ರವೇಶಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Cockroach Janata Part: ಕಾಕ್ರೋಚ್ ಭಯ ಕಾಂಗ್ರೆಸ್‌ಗೆ ಹೊರತು ಬಿಜೆಪಿಗಲ್ಲ; ಪ್ರಲ್ಹಾದ್ ಜೋಶಿ ಕೊಟ್ಟ ಉತ್ತರ ಕೇಳಿ ಶಾಕ್!
India News Live: IPL 2026 - ಪಂಜಾಬ್ ಕಿಂಗ್ಸ್ ಗೆಲ್ಲುತ್ತಿದ್ದಂತೆಯೇ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ ಮತ್ತೊಂದು ತಂಡ!