ಮಲ್ಲಿಕಾರ್ಜುನ ಖರ್ಗೆ ಕೂಡ ಮೋದಿ ಸರಿಗಟ್ಟುವ ನಾಯಕರಲ್ಲ: ಶಾಸಕ ಜಿ.ಟಿ.ದೇವೇಗೌಡ

By Kannadaprabha News  |  First Published Jan 4, 2024, 3:17 PM IST

ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರಿಗಟ್ಟುವ ನಾಯಕರು ಇಂಡಿಯಾ ಮೈತ್ರಿಕೂಟದಲ್ಲೂ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಕೂಡ ನರೇಂದ್ರ ಮೋದಿ ಅವರನ್ನು ಸರಿಗಟ್ಟುವ ನಾಯಕರಲ್ಲ ಎಂದು ಶಾಸಕ ಮತ್ತು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದರು. 


ಮೈಸೂರು (ಜ.04): ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರಿಗಟ್ಟುವ ನಾಯಕರು ಇಂಡಿಯಾ ಮೈತ್ರಿಕೂಟದಲ್ಲೂ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಕೂಡ ನರೇಂದ್ರ ಮೋದಿ ಅವರನ್ನು ಸರಿಗಟ್ಟುವ ನಾಯಕರಲ್ಲ ಎಂದು ಶಾಸಕ ಮತ್ತು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದ ಮಟ್ಟಿಗೆ ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಸರಿಗಟ್ಟುವ ನಾಯಕ ಬೇರೆ ಯಾರು ಇಲ್ಲ. ದೇಶದ ಪ್ರಧಾನಿ ಆಗುವ ಅರ್ಹತೆ, ಜನ ಬೆಂಬಲ ಮೋದಿ ಅವರನ್ನು ಬಿಟ್ಟರೆ ಬೇರೆ ಯಾರಿಗೂ ಇಲ್ಲ. 21ನೇ ಶತಮಾನದ ಆಧುನಿಕ ಯುಗದಲ್ಲಿ ದೇಶದ ಏಕತೆ, ಅಖಂಡತೆ, ದೇಶದ ರಕ್ಷಣೆ ಮತ್ತು ಅಭಿವೃದ್ಧಿ ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ಕೊಂಡಾಡಿದರು.

ಅವರನ್ನು ಮತ್ತೆ ಪ್ರಧಾನಿಯಾಗಿಸುವ ಏಕೈಕ ಗುರಿ ಬಿಟ್ಟರೆ ಬೇರೇನು ಇಲ್ಲ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಂಡಿಯಾ ಮೈತ್ರಿ ಕೂಟದಲ್ಲಿರುವ ಪಕ್ಷಗಳ ಹಲವು ನಾಯಕರೂ ಕೂಡ ಎನ್ ಡಿ ಎ ಮೈತ್ರಿ ಕೂಟದತ್ತ ಬರಲಿದ್ದಾರೆ. ನಮಗೆ ಎಷ್ಟು ಸ್ಥಾನ ಬೇಕು ಬೇಡ ಅನ್ನೋದು ಮುಖ್ಯ ಅಲ್ಲ. ಈ ರಾಷ್ಟ್ರಕ್ಕೆ ಮೋದಿ ಅವರ ನೇತೃತ್ವ ಬೇಕು ಅಷ್ಟೇ. ಅದಕ್ಕಾಗಿ ನಾವು ನಮಗೆ ಇಷ್ಟೇ ಸೀಟು ಬೇಕು, ಆ ಕ್ಷೇತ್ರ ಬೇಡ ಅಂತ ಬೇಡಿಕೆ ಇಟ್ಟಿಲ್ಲ. ಈಗಾಗಲೇ ಜೆಡಿಎಸ್ ಗೆ 5 ಕ್ಷೇತ್ರಗಳನ್ನು ಬಿಟ್ಟುಕೊಡಲು ಬಿಜೆಪಿಯವರು ಒಪ್ಪಿಗೆ ಸೂಚಿಸಿದ್ದಾರೆ. ನಮ್ಮ ಪಕ್ಷ ಎಲ್ಲೆಲ್ಲಿ ಶಕ್ತಿಯುತವಾಗಿದೆಯೋ ಅಲ್ಲಿ ಮಾತ್ರ ನಾವು ಸ್ಪರ್ಧಿಸುತ್ತೇವೆ ಎಂದರು.

Latest Videos

undefined

ರೌಡಿಶೀಟರ್ ಪರ ಬಿಜೆಪಿ ಹೋರಾಡುತ್ತಿರುವುದು ನಾಚಿಗೇಡಿನ‌ ಸಂಗತಿ: ಸಚಿವ ಎಂ.ಬಿ.ಪಾಟೀಲ್‌

ಬಡವರನ್ನು ಸುಲಿಯುವ ರಾಜಕಾರಣದ ವಿರುದ್ಧ ಧ್ವನಿ ಎತ್ತಬೇಕು: ಬಡಜನರನ್ನು ಸುಲಿಯುವ ರಾಜಕಾರಣದ ವಿರುದ್ಧ ಪತ್ರಿಕಾರಂಗ ಧ್ವನಿ ಎತ್ತಬೇಕು ಎಂದು ಮಾಜಿ ಸಚಿವರೂ ಆದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಕಿವಿಮಾತು ಹೇಳಿದರು. ಅವರು ಜಿಲ್ಲಾ ಪತ್ರಕರ್ತರ ಪತ್ರಕರ್ತರ ಸಂಘದ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆಗೊಳಿಸಿ ಮಾತನಾಡಿ, ಉದ್ಯಮಿಗಳು ಕೈಗಾರಿಕೆಗಳ ಮೇಲೆ ಬಂಡವಾಳ ಹೂಡಿಕೆ ಮಾಡಿ ಲಾಭ ಗಳಿಸುತ್ತಿದ್ದರು. ಈಗ ರಾಜಕಾರಣದಲ್ಲಿ ಹೂಡಿಕೆ ಮಾಡಿ ಆಯ್ಕೆಯಾಗಿ ಅಧಿಕಾರಕ್ಕೆ ಬಂದ ಬಳಿಕ ಬಡಜನರನ್ನು ಸುಲಿಗೆ ಮಾಡುತ್ತಾರೆ. ಇದರ ವಿರುದ್ಧ ಪತ್ರಕರ್ತರು ಧ್ವನಿ ಎತ್ತಬೇಕು ಎಂದರು.

ಇಂದು ಪ್ರಾಮಾಣಿಕ ರಾಜಾಕರಣಿಗಳನ್ನು ಗಮನಿಸುವವರು ಕಡಿಮೆ. ಎರಡು ಕೋಟಿ ಕಾರಿನಲ್ಲಿ ಬಂದವರಿಗೇ ಜನತೆ ಹೂ ಹಾರ ಹಾಕಿ, ಜೈ ಕಾರ ಕೂಗುತ್ತಾರೆ. ಇದರಿಂದ ಅಭಿವೃದ್ಧಿ ಎಂಬುದು ತಳ ಹಂತದಲ್ಲಿಯೇ ವಿಫಲವಾಗುತ್ತಿದೆ ಎಂದು ಅವರು ವಿಷಾದಿಸಿದರು. ಈ ಹಿಂದೆ ಶಿಕ್ಷಣ ಕಡಿಮೆ ಇದ್ದರೂ, ಸಂಸ್ಕಾರ ಹೆಚ್ಚಾಗಿತ್ತು. ಆದರೆ ಈಗ ಶಿಕ್ಷಣ ಹೆಚ್ಚಾಗಿ ಸಂಸ್ಕಾರ ಕಡಿಮೆ ಆಗುತ್ತಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ಪತ್ರಿಕಾರಂಗ ಈ ಹಿಂದೆ ಹೇಗಿತ್ತು, ಈಗ ಹೇಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ರಾಷ್ಟ್ರಾಭಿಮಾನ, ರಾಜ್ಯದ ಬಗೆಗಿನ ಅಭಿಮಾನ ಕಡಿಮೆ ಆಗುತ್ತಿದೆ. ಹೇಗೆಗೋ ಜೀವನ ನಡೆಸುತ್ತಿದ್ದಾರೆ. ನಾವು ಅದೇ ರೀತಿ ಜೀವನ ನಡೆಸೋಣ ಎಂಬ ಮನೋಭಾವ ಬೆಳೆಯುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಮೋದಿ ಗ್ಯಾರಂಟಿಯೆದುರು ಬೇರಾವ ಗ್ಯಾರಂಟಿಯೂ ಇಲ್ಲ: ಕೇಂದ್ರ ಸಚಿವ ಕ್ರಿಶನ್ ಪಾಲ್‌

ಮೈಸೂರಿನ ಅನೇಕ ಬಡಾವಣೆಗೆ ರಸ್ತೆ, ಒಳಚರಂಡಿ ಸೌಲಭ್ಯವಿಲ್ಲ. ಸುಮ್ಮನೆ ಬೆಳೆಯುತ್ತಿದೆ ಅಷ್ಟೇ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಜಿಲ್ಲೆಯವರೇ ಆಗಿರುವುದರಿಂದ ಕೂಡಲೇ ಗಮನ ಹರಿಸಬೇಕು ಎಂದರು. ಹೋಟೆಲ್ ಉದ್ಯಮಿ ಪಿ.ವಿ. ಗಿರಿ ಮಾತನಾಡಿ, ಮೈಸೂರಿನ ಪ್ರವಾಸೋದ್ಯಮದ ದೃಷ್ಟಿಯಿಂದ ವಿಮಾನ ಸೌಲಭ್ಯ ಮತ್ತಷ್ಟು ಹೆಚ್ಚಬೇಕು. ಆದರೆ ಗೋವಾಕ್ಕೆ ವರ್ಷಪೂರ್ತಿ ಜನ ಹೋಗುತ್ತಾರೆ. ಅದು ಕೇವಲ ಕಡಲತೀರ ಎಂಬ ಕಾರಣಕ್ಕೆ. ಮೈಸೂರಿಗೆ ಕಡಲ ತೀರವೊಂದನ್ನು ಬಿಟ್ಟು ಅರಣ್ಯ, ಬೆಟ್ಟ, ನದಿ ಎಲ್ಲವೂ ಇದೆ ಎಂದು ಹೇಳಿದರು.

click me!