ಈ ಹಿಂದೆ 5 ವರ್ಷ ನಾವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಈಗ 5 ವರ್ಷ ವಿರೋಧಿಗಳೊಂದಿಗೆ ರಾಜಕೀಯ ಮಾಡೋಣ. ಅವರು ಮಾಡಿದ ಆರೋಪಕ್ಕೆ ನಾವು ಉತ್ತರ ಕೊಡೋಣ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಶಿರಾಳಕೊಪ್ಪ (ಜು.29): ಈ ಹಿಂದೆ 5 ವರ್ಷ ನಾವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಈಗ 5 ವರ್ಷ ವಿರೋಧಿಗಳೊಂದಿಗೆ ರಾಜಕೀಯ ಮಾಡೋಣ. ಅವರು ಮಾಡಿದ ಆರೋಪಕ್ಕೆ ನಾವು ಉತ್ತರ ಕೊಡೋಣ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ಶಿರಾಳಕೊಪ್ಪ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ವಿಪಕ್ಷದ ಕಾರ್ಯಕರ್ತರು ಹಗುರವಾಗಿ ಮಾತನಾಡುತ್ತಾರೆ ಎಂದು ಪಕ್ಷದ ಕಾರ್ಯಕರ್ತರು ಶಾಸಕರ ಗಮನಕ್ಕೆ ತಂದರು. ಆಗ ನಮಗೆ ಅಭಿವೃದ್ಧಿ ಮಾಡಿ ಗೊತ್ತಿದೆ. ಈಗ ರಾಜಕೀಯ ಮಾಡಿ ತೋರಿಸೋಣ. ಹಗುರವಾಗಿ ಮಾತನಾಡುವವರಿಗೆ ನೀವೇ ಸರಿಯಾದ ಉತ್ತರ ಕೊಡಿ ಎಂದು ತಿಳಿಸಿದರು.
ಎಸಿ ಜತೆ ಮಾತುಕತೆ ಭರವಸೆ: ವಿಶೇಷವಾಗಿ ಶಾಸಕರಿಗೆ ಅಹವಾಲು ಕೊಡುವಾಗ ಪುರಸಭೆ ನ್ಯೂನತೆ ಬಗ್ಗೆ ಅರ್ಜಿ ಕೊಟ್ಟಿದ್ದು, ಪುರಸಭೆಯಲ್ಲಿ ಯಾವುದೇ ಕೆಲಸ ಕಾರ್ಯ ಆಗುತ್ತಿಲ್ಲ. ವಿಶೇಷವಾಗಿ ಇ-ಸ್ವತ್ತು ಪಡೆಯಲು ಪಟ್ಟಣದ ನಿವಾಸಿಗಳು ಪುರಸಭೆಗೆ ಪ್ರತಿದಿನ ಸುತ್ತುವಂತಾಗಿದೆ. ನಿವೇಶನಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿಲ್ಲ ಎಂದು ಪುರಸಭೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಬರಲಿರುವ ಆಗಸ್ಟ್ ತಿಂಗಳ 2ನೇ ವಾರ ಎಸಿ ಅವರೊಂದಿಗೆ ಮಾತುಕತೆ ನಡೆಸಿ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಅಧಿಕ ಭಾರದ ಕಲ್ಲು ಸಾಗಾಣಿಕೆ ವಿರುದ್ಧ ಕ್ರಮಕ್ಕೆ ಶಾಸಕ ಸುಬ್ಬಾರೆಡ್ಡಿ ಸೂಚನೆ
ತಡಗಣಿ ಗ್ರಾಮದ ಯಾವದೇ ಕೆಲಸ ಕಾರ್ಯಗಳಾಗದೇ ರಸ್ತೆ ದೀಪ ಹಾಕಿಸಲು ಸದಸ್ಯರಾದ ನಮಗೆ ಆಗುತ್ತಿಲ್ಲ. ಗ್ರಾಮಸ್ತರಿಗೆ ಉದ್ಯೋಗ ಖಾತ್ರಿ ಕೆಲಸ ಸಿಗದೇ ಗ್ರಾಮದ ಒಂದು ಮನೆಗೆ ಉದ್ಯೋಗ ಖಾತ್ರಿ ಯೋಜನೆಯಿಂದ ಸಿಗುತ್ತಿದ್ದ 50 ಸಾವಿರ ಸಿಗದಂತಾಗಿದೆ ಎಂದು ಪುರಸಭೆ ನಾಮಕರಣ ಸದಸ್ಯ ಮಂಜಣ್ಣ ತಮ್ಮ ಆಕ್ರೋಶ ಹೊರಹಾಕಿದರು.
‘ಪುರಸಭೆಯಿಂದ ನಮ್ಮನ್ನು ಕೈಬಿಡಿ’ ಎಂದು ಗ್ರಾಮಸ್ಥರು ಪ್ರತಿಭಟನೆ ಸಹ ಮಾಡಿದರು. ಈ ರೀತಿ ಪುರಸಭೆಯಿಂದ ಕೆಲಸ ಕಾರ್ಯವಾಗದಿದ್ದರೆ ಚುನಾವಣೆಯಲ್ಲಿ ಕೆಲಸ ಮಾಡುವುದಾದರೂ ಹೇಗೆ ಎಂದು ಕಾರ್ಯಕರ್ತರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಸಕರೊಂದಿಗೆ ಮುಖಂಡ ಕೆ.ಎಸ್. ಗುರುಮೂರ್ತಿ, ಕೆ.ರೇವಣಪ್ಪ, ಅಗಡಿ ಅಶೋಕ, ಸಣ್ಣ ಹನುಮಂತಪ್ಪ, ಕವಲಿ ಸುಬ್ರಮಣ್ಯ, ಮುಳಕೊಪ್ಪ ಚಂದ್ರಣ್ಣ, ಯೋಗೀಶ್ವರ, ಮಂಚಿ ಶಿವಣ್ಣ ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದರು.
ಉತ್ತರ ಕನ್ನಡ: ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಬ್ಯಾನ್
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಅತ್ಯಂತ ವೇಗವಾಗಿ ಕೆಲಸ ಕಾರ್ಯ ಮಾಡಲಾಯಿತು. ಆದರೆ, ಈಗ ಕಾಂಗ್ರೆಸ್ ಸರ್ಕಾರ ಇರುವುದರಿಂದ ಕೆಲಸ ಕಾರ್ಯಕ್ಕೆ ತಡೆ ಆಗಿದೆ. ನಾಗರಿಕರ ಯಾವುದೇ ಕೆಲಸ ಕಾರ್ಯವಿದ್ದಲ್ಲಿ ಶಾಸಕರು ಸ್ಪಂದಿಸಲಿದ್ದಾರೆ. ಹಾಗೆಯೇ, ಪುರಸಭೆ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು
- ಕೆ.ಎಸ್. ಗುರುಮೂರ್ತಿ, ಪಕ್ಷದ ಮುಖಂಡ