ಕುಮಾರಸ್ವಾಮಿ ನಾಯಕತ್ವದ ಬಗ್ಗೆ ಮಾತಾಡಲು ಸುನಿಲ್‌ ಯಾರು?: ಶರವಣ

By Kannadaprabha NewsFirst Published Jul 28, 2023, 9:27 AM IST
Highlights

ಒಂದು ಮಾತಂತೂ ಸತ್ಯ. ಯಾರಿಗೂ ಯಾರು ಅನಿವಾರ್ಯ ಅಲ್ಲ. ತಮ್ಮ ಇತಿಮಿತಿ ಅರಿತು ನಡೆದರೆ, ವರ್ತಿಸಿದರೆ ಬಿಜೆಪಿಗೆ ಒಳಿತು. ಸೋತು ನೆಲಕಚ್ಚಿದರೂ ಸುನೀಲ್‌ ಕುಮಾರ್‌ರಂತಹ ಬಿಜೆಪಿ ನಾಯಕರಿಗೆ ಇನ್ನೂ ಬುದ್ಧಿ ಬಂದಿಲ್ಲ ಎನ್ನುವುದೇ ವಿಷಾದಕರ: ಟಿ.ಎ.ಶರವಣ 

ಬೆಂಗಳೂರು(ಜು.28):  ಬಿಜೆಪಿ ಹಿರಿಯ ಶಾಸಕರು, ಮಾಜಿ ಮಂತ್ರಿಗಳಾದ ಸುನಿಲ್‌ ಕುಮಾರ್‌ ಅವರು ಜೆಡಿಎಸ್‌ ಬಗ್ಗೆ ತಿರಸ್ಕಾರ ಭಾವ ಬರುವ ರೀತಿ ಪತ್ರಿಕಾ ಸಂದರ್ಶನದಲ್ಲಿ ಮತ್ತು ಟ್ವೀಟರ್‌ನಲ್ಲಿ ಹೇಳಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಸುನಿಲ್‌ ಕುಮಾರ್‌ ಅವರ ಈ ಹೇಳಿಕೆ ಹಾಸ್ಯಾಸ್ಪದ ಎಂದು ಜೆಡಿಎಸ್‌ ನಾಯಕ ಟಿ.ಎ.ಶರವಣ ತಿಳಿಸಿದ್ದಾರೆ. 

ಕುಮಾರಸ್ವಾಮಿ ಅವರಿಗೆ ನಾಯಕತ್ವ ನೀಡುವಷ್ಟು ದಾರಿದ್ರ್ಯ ಬಂದಿಲ್ಲ ಎಂದು ಅವರು ಹೇಳಿದ್ದಾರೆ. ಕುಮಾರಸ್ವಾಮಿ ಅವರು ಈಗಾಗಲೇ ಜನ ಮೆಚ್ಚಿದ ನಾಯಕರಾಗಿ ಮನ್ನಣೆ ಪಡೆದು, ಗೌರವಕ್ಕೆ ಪಾತ್ರರಾಗಿದ್ದಾರೆ. ಅವರೇನೂ ನನಗೆ ನಾಯಕತ್ವ ಕೊಡಿ ಎಂದು ಬಿಜೆಪಿ ಬಾಗಿಲಿಗೆ ನಿಂತಿಲ್ಲ. ಹೀಗೆ ಬೇಕಾಬಿಟ್ಟಿನಾಲಿಗೆ ಹರಿಬಿಟ್ಟು ಇನ್ನಷ್ಟುಧಕ್ಕೆ ಮಾಡಿಕೊಳ್ಳುವುದು ಬಿಟ್ಟು, ಸುನೀಲ್‌ಕುಮಾರ್‌ ಗೌರವದಿಂದ ನಡೆದುಕೊಳ್ಳಲಿ.

ಸಿದ್ದರಾಮಯ್ಯ ಅನ್ನಭಾಗ್ಯಕ್ಕೆ ದೇವೇಗೌಡ ಪ್ರೇರಣೆ: ಶರವಣ

ಕುಮಾರಸ್ವಾಮಿ ನಾಯಕತ್ವದ ಬಗ್ಗೆ ಮಾತಾಡಲು ಇವರು ಯಾರು? ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಶರಣಾದ ಬಿಜೆಪಿಯಲ್ಲಿ ನಾಯಕರು ಯಾರಿದ್ದಾರೆ? ಇವರ ಯೋಗ್ಯತೆಗೆ ಸಮರ್ಥ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಬಜೆಟ್‌ ಅಧಿವೇಶನ, ರಾಜ್ಯಪಾಲರ ಭಾಷಣ ಪ್ರತಿಪಕ್ಷ ನಾಯಕರೇ ಇಲ್ಲದೆ ನಡೆದಿದ್ದು, ಸಂಸದೀಯ ಇತಿಹಾಸದಲ್ಲೇ ಕೆಟ್ಟ ಪರಂಪರೆಗೆ ನಾಂದಿ ಹಾಡಿದ ಪಕ್ಷ ಬಿಜೆಪಿ. ಇಂಥ ಪಕ್ಷದ ನಾಯಕರಿಗೆ ನಮ್ಮ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ?. ಎಂದು ಪ್ರಶ್ನಿಸಿದ್ದಾರೆ. 

ಇನ್ನು ಜೆಡಿಎಸ್‌ ಅನಿವಾರ್ಯ ಅಲ್ಲ ಎಂದು ಸುನೀಲ್‌ ಕುಮಾರ್‌ ಹೇಳಿದ್ದಾರೆ. ಒಂದು ಮಾತಂತೂ ಸತ್ಯ. ಯಾರಿಗೂ ಯಾರು ಅನಿವಾರ್ಯ ಅಲ್ಲ. ತಮ್ಮ ಇತಿಮಿತಿ ಅರಿತು ನಡೆದರೆ, ವರ್ತಿಸಿದರೆ ಬಿಜೆಪಿಗೆ ಒಳಿತು. ಸೋತು ನೆಲಕಚ್ಚಿದರೂ ಸುನೀಲ್‌ ಕುಮಾರ್‌ರಂತಹ ಬಿಜೆಪಿ ನಾಯಕರಿಗೆ ಇನ್ನೂ ಬುದ್ಧಿ ಬಂದಿಲ್ಲ ಎನ್ನುವುದೇ ವಿಷಾದಕರ ಎಂದು ಹೇಳಿದ್ದಾರೆ. 

News Hour With HD Kumaraswamy

click me!