
ಶಿವಮೊಗ್ಗ(ಜ.08): ಸ್ವಾಭಾವಿಕವಾಗಿ ಸತೀಶ್ ಜಾರಕಿಹೊಳಿ ಅವರು ಮನೆಗೆ ಔತಣಕೂಟಕ್ಕೆ ಕರೆದಿದ್ದಾರೆ ಅಂತ ಹೋಗಿದ್ದಾರೆ, ಡಿಸಿಎಂ ಹೊರ ದೇಶಕ್ಕೆ ಹೋಗಿರುವ ಹಿನ್ನಲೆ ಈ ರೀತಿಯ ಗೊಂದಲ ಸೃಷ್ಟಿ ಆಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬಿ.ವೈ.ವಿಜಯೇಂದ್ರ ಏನು ಭವಿಷ್ಯ ಹೇಳುತ್ತಾರಾ?, ವಿಜಯೇಂದ್ರನ ಬುಡವೇ ಅಲ್ಲಾಡುತ್ತಿದೆ. ಅವರ ಪಕ್ಷದವರೇ ಅವರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ, ಧಮ್ಮು, ತಾಕತ್ತು ಇದ್ರೆ ವಿಜಯೇಂದ್ರ ಸರ್ಕಾರ ಬೀಳಿಸಲಿ ನೋಡೋಣ, ಹಡಬಿ ದುಡ್ಡಿನಿಂದ ಕಳೆದ ಬಾರೀ ಶಾಸಕರನ್ನು ಕರೆದುಕೊಂಡು ಹೋಗಿದ್ರು, ವಿಜಯೇಂದ್ರನಿಗೆ ಇನ್ನೂ ಎಳೆ ವಯಸ್ಸು, ಎಳೆ ವಯಸ್ಸಿನ ಹಿನ್ನಲೆ ಏನ್ ಏನೋ ಮಾತಾಡುತ್ತಿದ್ದಾರೆ ಎಂದು ಕುಟುಕಿದರು.
ಸಾವಿನ ಭಾಗ್ಯವನ್ನೇ ನೀಡುತ್ತಿರುವ ಕಾಂಗ್ರೆಸ್ ಸರ್ಕಾರ: ಬಿ.ವೈ.ವಿಜಯೇಂದ್ರ ಆಕ್ರೋಶ
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ, ವಿರೋಧ ಪಕ್ಷದವರ ಗೊಂದಲ ಇದು ಬಿಟ್ಟರೆ ನಮ್ಮಲ್ಲಿ ಗೊಂದಲ ಇಲ್ಲ ಎಂದರು. ಈಶ್ವರಪ್ಪ ಹೊಸ ಬ್ರಿಗೆಡ್ ಕಟ್ಟುತ್ತಿರುವ ವಿಚಾರಕ್ಕೆ ಮಾತನಾಡಿ, ಹಿಂದುತ್ವ ಹಿಂದುತ್ವ ಅಂತ ಹಿಂದೆ ಹೋಗಿ ಬಿಟ್ಟಿದ್ದಾರೆ. ಈಶ್ವರಪ್ಪ ನವರ ಯಾವ ಬ್ರಿಗೇಡ್ ನಡೆಯಲ್ಲ, ಈಶ್ವರಪ್ಪ ನವರು ಈಗ ಚಾಲ್ತಿಯಲ್ಲಿ ಇಲ್ಲ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಬಿಐಗೆ ಜಾಸ್ತಿ ಕೊಟ್ಟಿದ್ದು ನಾವೇನೇ ಇದನ್ನು ಸಿಬಿಐಗೆ ಕೊಡಬೇಕಾದರೆ ಕೋಡೋಣ ಎಂದು ಹೇಳಿದರು. ಬಿಜೆಪಿ ಪಕ್ಷದಲ್ಲೇ ಎರಡು ಭಾಗವಾಗಿ ಬುಡ ಅಲ್ಲಾಡುತ್ತಿದೆ. ಬಾಣಂತಿಯರ ಸಾವನ್ನು ನಾವು ಸಮರ್ಥಿಸುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಗಮನ ಹರಿಸಬೇಕು. ಯಾರು ಸಹ ಸಾವನ್ನಪ್ಪಬಾರದು ಎಂದರು.
ಇನ್ನೂ ಸಾರಿಗೆ ಬಸ್ ದರ ಎಲ್ಲಾ ಕಡೆ ಹೆಚ್ಚಳ ಮಾಡುತ್ತಾರೆ. ಗ್ಯಾಸ್ ದರ ಏರಿಕೆ ಆಗಿಲ್ವಾ?, ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿಲ್ವಾ? ಕೆಎಸ್‌ಆರ್ಟಿಸಿ ಹಾಳು ಮಾಡಿದ್ದೆ ಈ ಹಿಂದಿನ ಬಿಜೆಪಿ ಸರ್ಕಾರ. ಶಕ್ತಿ ಯೋಜನೆಯಿಂದ ನಮಗೆ ಲಾಸ್ ಆಗಿಲ್ಲ. ಬಿಜೆಪಿಯ ಪಾಪಿಗಳಿಂದ ನಮಗೆ ಲಾಸ್ ಆಗಿದೆ ಹೊರತು ಶಕ್ತಿ ಯೋಜನೆಯಿಂದಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.