ನನಗೆ ಮಂತ್ರಿ ಸ್ಥಾನಕ್ಕಿಂತ ಸಿದ್ದರಾಮಯ್ಯ ಸಿಎಂ ಆಗಿದ್ದು ಸಂತಸ ತಂದಿದೆ: ಶಾಸಕ ರಾಯರಡ್ಡಿ

By Kannadaprabha NewsFirst Published Jun 2, 2023, 11:59 PM IST
Highlights

ಸಿದ್ದರಾಮಯ್ಯ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕೆನ್ನುವುದು ನನ್ನ ಬಯಕೆಯಾಗಿತ್ತೇ ವಿನಃ ನನಗೆ ಮಂತ್ರಿ ಸ್ಥಾನ ಸಿಗದಿರುವುದು ಮುಖ್ಯವಲ್ಲ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಯಲಬುರ್ಗಾ (ಜೂ.02): ಸಿದ್ದರಾಮಯ್ಯ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕೆನ್ನುವುದು ನನ್ನ ಬಯಕೆಯಾಗಿತ್ತೇ ವಿನಃ ನನಗೆ ಮಂತ್ರಿ ಸ್ಥಾನ ಸಿಗದಿರುವುದು ಮುಖ್ಯವಲ್ಲ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು. ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಗುರುವಾರ ಬಳೋಟಗಿ ಮತ್ತು ಮುಧೋಳ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ದುರಾಡಳಿತಕ್ಕೆ ಜನರು ಬೇಸತ್ತು ಕಾಂಗ್ರೆಸ್‌ಗೆ 135 ಸ್ಥಾನಗಳನ್ನು ನೀಡುವ ಮೂಲಕ ಸುಭದ್ರ ಆಡಳಿತ ನೀಡಲು ಅಧಿಕಾರ ನೀಡಿದ್ದಾರೆ ಎಂದರು.

ರಾಜ್ಯದ ಜನರ ಹಿತ ಕಾಪಾಡಲು ಸಮರ್ಥ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಗಬೇಕು ಎನ್ನುವುದು ರಾಜ್ಯದ ಬಹುಜನರ ಬೇಡಿಕೆಯಾಗಿತ್ತು. ಅದರಲ್ಲಿ ನಾನೊಬ್ಬನಾಗಿದ್ದೆ. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದು ನನಗೆ ಅತೀವ ಸಂತಸ ತಂದಿದೆ. ಇಂತಹ ಬುದ್ಧಿವಂತ, ಅನುಭವಿ ರಾಜಕಾರಣಿ ನೇತೃತ್ವದಲ್ಲಿ ನಾನು ಶಾಸಕನಾಗಿ ಕೆಲಸ ಮಾಡಲು ಹೆಮ್ಮೆ ಎನಿಸುತ್ತಿದೆ. ಈ ತಾಲೂಕಿಗೆ ಹೆಚ್ಚಿನ ಅನುದಾನವನ್ನು ತರುವ ಮೂಲಕ ಈ ತಾಲೂಕನ್ನು ಮಾದರಿ ಮಾಡುವುದು ನನ್ನ ಸಂಕಲ್ಪ ಎಂದು ಹೇಳಿದರು.

ಮಳೆ ಅನಾಹುತ ಎದುರಿಸಲು ಸನ್ನದ್ಧರಾಗಿ: ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ರಾಜೇಗೌಡ

ಕುಕನೂರು ಮತ್ತು ಯಲಬುರ್ಗಾಕ್ಕೆ 20 ಸಾವಿರ ಮನೆಗಳನ್ನು ನೀಡುವಂತೆ ಈಗಾಗಲೇ ವಸತಿ ಸಚಿವ ಜಮೀರ ಅಹ್ಮದ್‌ ಅವರಿಗೆ ಪತ್ರ ಕೂಡ ಬರೆಯಲಾಗಿದೆ. ನಾನೇ ಬಂದು ಹಕ್ಕುಪತ್ರ ನೀಡುವುದಾಗಿ ಹೇಳಿದ್ದಾರೆ. ಇನ್ನೂ ಚಿಕ್ಕಮ್ಯಾಗೇರಿ ಮೊರಾರ್ಜಿ ವಸತಿ ಶಾಲೆಗೆ .25 ಕೋಟಿ ಮಂಜೂರು ಮಾಡಿಸಿ ಸುಸಜ್ಜಿತ ಕಟ್ಟಡ ನಿರ್ಮಿಸಿ ಈ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿಕೊಡುವುದಾಗಿ ಹೇಳಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಕಾಂಗ್ರೆಸ್‌ ಮುಖಂಡರಾದ ವೀರನಗೌಡ ಬಳೋಟಗಿ ಹಾಗೂ ಎ.ಜಿ. ಭಾವಿಮನಿ ಮಾತನಾಡಿದರು.

ಸಾರ್ವಜನಿಕ ಸೇವೆಯಲ್ಲಿ ಉದಾಸೀನತೆ ಬೇಡ: ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಕೆ

ಹನುಮಂತಗೌಡ ಚೆಂಡೂರು, ರಾಮಣ್ಣ ಸಾಲಭಾವಿ, ಕೆರಿಬಸಪ್ಪ ನಿಡಗುಂದಿ, ಮಹೇಶ ಅಳ್ಳಿ, ಅಪ್ಪಣ್ಣ ಜೋಶಿ, ಈರಪ್ಪ ಕುಡಗುಂಟಿ, ಅಂದಾನಗೌಡ ಪೊಲೀಸ್‌ ಪಾಟೀಲ, ಗ್ರಾಪಂ ಅಧ್ಯಕ್ಷರಾದ ನಗೀನಾಬೇಗಂ, ಗ್ರಾಪಂ ಕೆಂಚವ್ವ ಹಿರೇಮನಿ, ಶರಣಪ್ಪ ಕುರಿ, ಗಿರಿಜಾ ಸಂಗಟಿ, ಸಾವಿತ್ರಿ ಗೊಲ್ಲರ್‌, ರೇವಣೆಪ್ಪ ಸಂಗಟಿ, ವೈ.ಬಿ. ಮೇಟಿ, ಹುಲಗಪ್ಪ ಬಂಡಿವಡ್ಡರ, ಶೇಖರಗೌಡ ಪಾಟೀಲ, ಅಲ್ಲಾಸಾಬ್‌ ಕಟ್ಟಿಮನಿ, ಈಶ್ವರ ಅಟಮಾಳಗಿ, ಶರಣಗೌಡ ಪಾಟೀಲ, ಶರಣಪ್ಪ ಕುರಿ, ಕಾಳೇಶ ಕಮ್ಮಾರ, ಸಂಗಮೇಶ ಚವಡಿ, ಡಾ. ಶಿವನಗೌಡ ದಾನರಡ್ಡಿ, ಮಲ್ಲು ಜಕ್ಕಲಿ, ಗವಿಸಿದ್ದಪ್ಪ ಚೆಂಡೂರ, ಸಾವಿತ್ರಿ ದಳವಾಯಿಮಠ, ಯಮನೂರಪ್ಪ ಬೇವಿನಗಿಡದ, ರಾಜಶೇಖರ ಶ್ಯಾಗೋಟಿ ಮತ್ತಿತರರು ಇದ್ದರು.

click me!