
ತುಮಕೂರು (ಸೆ.13): ಕಾಂಗ್ರೆಸ್ ಸರ್ಕಾರ ಅಂದರೆ ಟಿಪ್ಪು ಸರ್ಕಾರ. ಕಾಂಗ್ರೆಸ್ ಸರ್ಕಾರ ಅಂದರೆ ಔರಂಗಜೇಬ್ ಸರ್ಕಾರ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು. ಇಲ್ಲಿನ ಹಿಂದೂ ಗಣಪತಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಯತ್ನಾಳ್, ಹಿಂದೂ ಬಗ್ಗೆ ಮಾತನಾಡಿದ್ರೆ ಬ್ಯಾನ್ ಆಗುತ್ತಾರೆ. ಕುಂಕುಮ ಹಚ್ಚಿಕೊಂಡವರ ಮಾರಿ ನೋಡಬಾರದು. ಗಡ್ಡ ಬಿಟ್ಟು ಟೋಪಿ ಹಾಕೊಂಡವರ ಕಂಡರೆ ಖುಷಿ ಆಗ್ತಾರೆ. ಬ್ರಿಟಿಷರನ್ನು ಒದ್ದು ಓಡಿಸಲು ಗಣಪತಿ ಆಚರಣೆ ಮಾಡಲಾಯ್ತು. ತಿಲಕರು ಮನೆಯಲ್ಲಿದ್ದಂತಹ ಗಣಪತಿಯನ್ನು ಸಾರ್ವಜನಿಕವಾಗಿ ಕೂರಿಸಿದರು. ಇವತ್ತು ಕಂಟ್ರೀ ಜಾತ್ಯಾತೀತ ಗಣಪತಿ ಉತ್ಸವ ಮಾಡೊ ಹಾಗೆ ಆಗಿದೆ ಎಂದರು.
ಇಂತಹ ಭ್ರಷ್ಟ ಹಿಂದೂ ವಿರೋಧಿ ರಾಜಕಾರಣಿಗಳನ್ನು ಕಿತ್ತೊಗೆದು, ಕರ್ನಾಟಕದಲ್ಲಿ ಭ್ರಷ್ಟಾಚಾರದಲ್ಲಿ ತುಂಬಿ ತುಳುಕುತ್ತಿದೆ. ಮಾತು ತೆಗೆದೆರೆ ಗ್ಯಾರಂಟಿ ಎಂದು ಹೇಳ್ತಾರೆ. ಸಾಬ್ರಿಗೆ ಕಾಂಟ್ರಾಂಕ್ಟ್, ಸಾಬ್ರಿಗೆ ಮೀಸಲಾತಿ. ಸಾಬ್ರು ಪಾಳ್ಯಗಳ ಅಭಿವೃದ್ಧಿ. ಪ್ರವಾದಿ ಅಂದರೆ ಶಾಂತಿ ದೂತ, ಮದ್ದೂರಿನಲ್ಲಿ ಕಲ್ಲು ಹೊಗೆದವರು ಯಾರು ಸಿದ್ದರಾಮಣ್ಣ.? ಪಾಕಿಸ್ತಾನದ ಧ್ವಜ ಹಾರಿಸೋರು ಯಾರು ಸಿದ್ದರಾಮಣ್ಣ.? ಈದ್ ಮಿಲಾದ್ ಹಬ್ಬದಲ್ಲಿ ಯಾವ ಒಬ್ಬನಾದರೂ ಹಿಂದೂಗಳು ಎಲ್ಲಾದರೂ ಕಲ್ಲು ಎಸೆದಿದ್ದಾರಾ.? ನೀವ್ಯಾಕೆ ಕಲ್ಲಾಕುತ್ತೀರಾ ಹಲ್ ಕಟ್ ನನ್ನ ಮಕ್ಕಳಾ.. ಭಾರತದಲ್ಲಿ ಇರಬೇಕಾದರೇ ಒಂದೇ ಮಾತರಂ, ಭಾರತ್ ಮಾತಾ ಕೀ ಜೂ ಅನ್ನಬೇಕು.
ಮದ್ದೂರಿನಲ್ಲಿ 70ನೇ ಕೇಸ್ ಹಾಕಿದ್ದಾರೆ. ತುಮಕೂರಿನಲ್ಲಿ 71ನೇ ಕೇಸ್ ಹಾಕ್ತಾರೆ. ಈ ದೇಶದ ಅನ್ನ ತಿನ್ನುತ್ತೀರಾ.. ನೀರು ಕುಡಿತೀರ.. ಗಾಳಿ ಕುಡಿತೀರಾ. ಪಾಕಿಸ್ತಾನ ಜಿಂದಾಬಾದ್ ಎನ್ನುತ್ತೀರಾ. ಆರ್‌ಎಸ್‌ಎಸ್ ಪಾಕಿಸ್ತಾನದಲ್ಲಿದೆಯಾ..? ವಿಶ್ವ ಹಿಂದೂ ಪರಿಷತ್ ಇದೆಯಾ..? ಬಿಜೆಪಿ ಇದೆಯಾ..? ಮತ್ತೆ ನೀವೆ ಯಾಕೆ ಬಾಂಬ್ ಹಾಕೊತೀರಾ. ಪಾಕಿಸ್ತಾನದ ಜಿಂದಾಬಾದ್ ಅಂದವರಿಗೆ ಗುಂಡು ಹಾಕಬೇಕೋ ಅಲ್ವೋ. ಪ್ರಪಂಚದ ಜಪಾನ್, ಜರ್ಮನ್, ಫ್ರಾನ್ಸ್ ನಲ್ಲಿ ಶಾಂತಿ ಇಲ್ಲ, ಅಮೆರಿಕ, ಬಾಂಗ್ಲಾದಲ್ಲಿ ಹಿಂದೂಗಳ ಕಗ್ಗೊಲೆ ನಡೆಯುತ್ತಿದೆ. ಕರ್ನಾಟಕ ಸರ್ಕಾರ ಈ ರಾಜ್ಯವನ್ನು ಪಾಕಿಸ್ತಾನ ಮಾಡಲು ಹೊರಟಿದೆ ಎಂದರು.
ನಿಮಗ್ಯಾರದರೂ ಇಲ್ಲಿ ಬರೊಕೆ ಆಮಿಷ ಒಡ್ಡಿದ್ದಾರಾ..? ನಿಮಗೆ 500 ರೂ ಕೊಟ್ಟಿದ್ದಾರಾ..? ಸನಾತನ ಹಿಂದೂ ಧರ್ಮಕ್ಕಾಗಿ ನೀವು ಇಲ್ಲಿ ಬಂದಿದ್ದೀರ.. ನಾನು ಒಕ್ಕಲಿಗ, ದಲಿತ, ಮರಾಠ, ಲಿಂಗಾಯತ ಯಾವುದು ಇಲ್ಲ ನಾವೇಲ್ಲಾ ಹಿಂದೂ, ಒಂದು. ಕೆಲ ಸ್ವಾಮೀಜಿಗಳು ಧರ್ಮ ಪ್ರಚಾರ ಮಾಡಲು ಬಿಟ್ಟು ಇಸ್ಲಾಂ ಲಿಂಗಾಯತ ಒಂದೇ ಅಂತಾರೆ. ಅಂತಹ ಸ್ವಾಮಿಗಳು ಹಿಂದೂ ಧರ್ಮವೆಲ್ಲಾ ಬಿಟ್ಟಿದ್ದಾರೆ. ಲಿಂಗಾಯತ ವೀರಶೈವ ಬೇರೆ ಅಂತ ಹೇಳ್ತಾರೆ. ನಾವೇಲ್ಲಾ ಒಂದೇ ಆಗಿದ್ದರೆ ಮಾತ್ರ ಭಾರತ ಉಳಿಯುತ್ತದೆ. ಮುಸ್ಲಿಂರಿಗೆ ಮೀಸಲಾತಿ ಕೊಡ್ತಿದ್ದಾರೆ. ಬಾಬಾ ಸಾಹೇಬ್ ಹೇಳ್ತಾರೆ ಧರ್ಮಾಧರಿತ ಮೀಸಲಾತಿ ಕೊಡಬಾರದು.
ಸಿದ್ದರಾಮಯ್ಯ ಸರ್ಕಾರ ಮುಸ್ಲೀಮರಿಗೆ ಮೀಸಲಾತಿ ಕೊಟ್ಟಿದೆ. ನಾವೇಲ್ಲಾ ಒಂದಾಗಬೇಕು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಂತೇನು ಇಲ್ಲಾ.. ನಮ್ಮ ಧರ್ಮಕ್ಕೆ ಅನ್ಯಾಯ ಆದಾಗ, ನಮ್ಮ ಧರ್ಮದ ಮನಸ್ಸು ಯಾರಾದರೂ ನೋಯಿಸಿದ್ರೆ, ಬ್ಯಾಲೇಟ್ ಪೇಪರ್ ನಲ್ಲಿ ನಮ್ಮ ಶಕ್ತಿ ತೋರಿಸಬೇಕು. ಮದ್ದೂರಿನಲ್ಲಿ ಜನ ಪ್ರೀತಿ ವಿಶ್ವಾಸ ತೋರಿಸಿದರು. ಹಿಂದೂಗಳ ಪರವಾಗಿ ನೀವು ಸಿಎಂ ಆಗಬೇಕು ಅಂತ ಹೇಳಿದ್ರು. ನಾನು ಮುಖ್ಯಮಂತ್ರಿ ಆದರೇ ಮಾಡುವ ಮೊದಲ ಕೆಲಸ. ಭ್ರಷ್ಟ ಮುಕ್ತ ಸರ್ಕಾರ. ಪಾಕಿಸ್ತಾನ ಜಿಂದಾಬಾದ್ ಅಂದ್ರೆ ಅಲ್ಲೇ ಢಂ. ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವುದಿಲ್ಲ. ಕಾಫೀರ್ ರನ್ನು ಹೊಡೆದರ ಜೆನ್ನತ್ ಸಿಗತ್ತೆ ಅಂತಾರೆ.. ಪಾಕಿಸ್ತಾನ ಜಿಂದಾಬಾದ್ ಅನ್ನೋನಿಗೆ ಜನ್ನತ್ ಕಳಿಸಿದ್ರೆ, ನಮಗೆ ಕೈಲಾಸ, ವೈಕುಂಠ ಸಿಗುತ್ತೆ.
ಅಂತಹ ಪೊಲೀಸರಿಗೆ ಪ್ರಮೋಷನ್ ಸಿಗತ್ತೆ. ರೋಡಿಗೆಲ್ಲಾ ಅನಧಿಕೃತ ಮಸೀದಿ. ಒಂದಕ್ಕೂ ಅನುಮತಿ ಇಲ್ಲ.. ನೀರಿಗೆ ಟ್ಯಾಕ್ಸ್ ಇಲ್ಲ. ತುಮಕೂರು ಜಿಲ್ಲೆಯ ಅಧಿಕಾರಿಗಳಿಗೆ ಹೇಳ್ತಿನಿ ಡಿಜೆಗೆ ಅನುಮತಿ ಕೊಡಿ. ಡಿಜೆಗೆ ಪರ್ಮೆಷನ್ ಕೊಡದಿದ್ದರೆ ಮಸೀದಿ ಮೈಕ್ ಬಂದ್ ಮಾಡಿಸಿ. ಜಿಲ್ಲಾಧಿಕಾರಿಗಳೇ ಸುಪ್ರೀಂ ಕೋರ್ಟ್ ಆದೇಶ ಪಾಲಿಸ್ತಿರಾ..? ಸಣ್ಣಪುಟ್ಟ ಗಲಾಟೆ ಅನ್ನೋ ಮಹಾನ್ ಗೃಹ ಮಂತ್ರಿಗಳೇ.. ನನಗೇನು ಗೊತ್ತಿಲ್ಲ.. ನಾನು ಪೊಲೀಸ್ ಅಧಿಕಾರಿಗಳ ಬಳಿ ತಿಳಿದುಕೊಂಡು ಹೇಳ್ತಿನಿ.. ಹಿಂದೂಗಳಿಂದಲೇ ಗಲಭೆಗೆ ಕಾರಣ.. ಹಾಗಾದರೇ ಗೃಹ ಮಂತ್ರಿಗಳೇ ಬರೀ ಸಾಬ್ರಾಗಳೇ ಓಟ್ ಹಾಕಿದ್ದಾರಾ.. ಹಿಂದೂಗಳು ಓಟ್ ಹಾಕಿಲ್ವಾ.. ನಾವೆಲ್ಲಾ ಬಾಬಾ ಸಾಹೇಬ್ ಅನುಯಾಯಿಗಳು ಎಂದರು.
ಅವರು ಭಾರತ ಪಾಕಿಸ್ತಾನ ಎರಡು ಇಬ್ಬಾಗ ಮಾಡಬಾರದು ಎಂದು ನೆಹರು ಹಾಗೂ ಗಾಂಧಿಗೆ ಹೇಳಿದ್ದರು. ಒಂದು ವೇಳೆ ನೆಹರವನ್ನು ಪ್ರಧಾನಿ ಮಾಡಬೇಕೆಂದರೆ, ಜಿನ್ನಾ ಒತ್ತಾಯ ಮಾಡಿದರೆ, ಪಾಕಿಸ್ತಾನ ಭಾರತ ಡಿವೈಡ್ ಮಾಡಿದರೆ, ಭಾರತದ ಮುಸ್ಲಿಮರು ಪಾಕಿಸ್ತಾನಕ್ಕೆ ಹೊಗಬೇಕು ಎಂದಿದ್ದರು. ಅವರ ಮಾತಿಗೆ ನಾವು ಗೌರವ ಕೊಡಬೇಕಲ್ಲವಾ. ಅವರು ಹೇಳಿದಂತೆ ಆಗುತ್ತಿದೆ ಅಲ್ಲವಾ. ಗಣಪತಿ ಮೇಲೆಯೇ ಉಗಿತಾರೆ. ಎಂತಹ ಸಂಸ್ಕಾರ ಕಲಿಸಿದ್ದಾರೆ ಅವರಿಗೆ, ಹಿಂದುಗಳು ಕುಡಿದು ಗಣಪತಿ ಮುಂದೆ ಕುಣಿದರೂ ಭಾರತದ ವಿರುದ್ಧ ಘೋಷಣೆ ಮಾಡಲ್ಲ. ಮತ್ತೊಂದು ಧರ್ಮಕ್ಕೆ ಬೈಯೋದಿಲ್ಲ. ನಾವೆಲ್ಲಾ ಓರಿಜಿನಲ್ ಹಿಂದೂಗಳು. ಟಿಪ್ಪು ಸುಲ್ತಾನ ಹಾಗೂ ಔರಂಗ ಜೇಬ್ ಟೈಂನಲ್ಲಿ ಕನ್ವರ್ಟ್ ಆದವರು ಈಗಿನ ಮುಸ್ಲೀಮರು.
ಯಾರು ಏನೆ ಬಂದರು ನಾವು ಕನ್ವರ್ಟ್ ಆಗಿಲ್ಲಾ. ಟಿಪ್ಪು ಸುಲ್ತಾನ್ ಮದ್ದೂರಿನಲ್ಲಿ ಆಂಜನೇಯ ದೇವಸ್ಥಾನದಲ್ಲಿನ ವಿಗ್ರಹವನ್ನು ಕಾವೇರಿಗೆ ಎಸೆದಿದ್ಧಾನೆ. ಅಲ್ಲಿ ಮಸೀದಿ ಕಟ್ಟಿದ್ದಾನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೋರ್ಟ್ ನಲ್ಲಿ ಕೇಸ್ ಗೆದ್ದು ಅಲ್ಲಿ ದೇವಸ್ಥಾನ ಕಟ್ಟುತ್ತೀವಿ. ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಕೆಲವೇ ಕುಟುಂಬಗಳು ರಾಜ್ಯವನ್ನು ಆಳುತ್ತಿದೆ. ಆರ್‌ಸಿಬಿ ವಿಜಯೋತ್ಸವದ ವೇಳೆ 11 ಜನರ ಪ್ರಾಣ ಹೊಯ್ತು. ಆದರೇ ಯಾರೂ ರಾಜೀನಾಮೆ ಕೊಟ್ಟಿಲ್ಲ. ಯಾರೂ ರಾಜಿನಾಮೆ ಕೇಳಿಲ್ಲಾ. ಸಿದ್ದರಾಮಯ್ಯ ನಂಬರ್ ಒನ್ ಅಪರಾಧಿ, ಟ್ರೋಫಿಗೆ ಮುತ್ತು ಕೊಟ್ಟ ಡಿಕೆಶಿ ಎರನೇ ಆರೋಪಿ. ಮೂರನೇ ಆರೋಪಿ ಜಿ. ಪರಮೇಶ್ವರ್. ಆದರೇ ಅಧಿಕಾರಿಗಳು ಸಸ್ಪೆಂಡ್ ಆದರು.
ನಿಮ್ಮ ಪೌರುಷ ಪಾಕಿಸ್ತಾನ ಧ್ವಜ ಹಾರಿಸುವವರ ಮೇಲೆ ಇರಲಿ, ಹಿಂದೂಗಳ ಮೇಲೆ ಅಲ್ಲಾ. ಓವೈಸಿ 15 ನಿಮಿಷ ಪೊಲೀಸರು ಸುಮ್ಮನೆ ಇದ್ರೆ ಇಡೀ ಭಾರತದ ಹಿಂದೂಗಳನ್ನು ಮುಗಿಸುತ್ತೇವೆ ಅಂತಾನೆ. ನಾವು ಕರೆ ಕೊಟ್ಟರೆ ನಿಮ್ದು ಕತೆ ಮುಗಿತ್ತು. ನನ್ನ ಸಿಎಂ ಮಾಡಿದರೇ ಭಾರತ್ ಮಾತಾಕಿ ಜೈ, ವಂದೇ ಮಾತರಂ ಎನ್ನಬೇಕು. ಹಾಗೆ ಮಾಡ್ತೀನಿ. ಇದು 72ನೇ ಕೇಸ್. ನೂರು ಕೇಸ್ ಆದ ಬಳಿಕ ಮತ್ತೆ ನಾನು ತುಮಕೂರಿಗೆ ಬಂದು ಮಾತನಾಡುತ್ತೀನಿ. ಹಿಂದುಗಳು ನಾವು ಗಟ್ಟಿಯಾಗಿರಬೇಕು. ಕರ್ನಾಟಕದಲ್ಲಿ ಗಜಾನನ ಹಾಗೂ ದೇವಿ ಉತ್ಸವ ರಾಷ್ಟ್ರೀಯ ಉತ್ಸವ ಆಗಬೇಕು. ಪೊಲೀಸ್ ಠಾಣೆಯಲ್ಲಿ ಅನುಮತಿ ಪಡೆಯಬೇಕಾಗಿಲ್ಲ.
ಕಾರ್ಪೊರೇಷನ್ ನವರು, ಪೊಲೀಸರು ಗಣಪತಿ ಕೂರಿಸುವವರ ಬಳಿ ಬರಬೇಕು. ನಮಸ್ಕಾರ ನಾವು ಸರ್ಕಾರದ ಕಡೆಯಿಂದ ಬಂದಿದ್ದೇವೆ. ಎಲ್ಲಿ ಗಣಪತಿ ಕೂರಿಸುತ್ತೀರಾ ಅಂತ ಕೇಳಬೇಕು. ಜೊತೆಗೆ ಸರ್ಕಾರದಿಂದ 11 ಸಾವಿರ ಹಣ ತೆಗೆದುಕೊಳ್ಳಿ ಎನ್ನಬೇಕು. ಸಾಧ್ಯವಾದರೇ ನಮಗೂ ಡ್ಯಾನ್ಸ್ ಮಾಡಲು ಅವಕಾಶ ಕೊಡಿ ಎನ್ನಬೇಕು. 2028ರಲ್ಲಿ ಇಂತಹ ಸರ್ಕಾರ ಬರಬೇಕು. ಅಲ್ಲಿನ ಪಿಎಸ್ ಐ ಡಿಜೆ ಆನ್ ಮಾಡಬೇಕು.. ಟೇಪ್ ಕಟ್ಟ್ ಮಾಡಬೇಕು. ಅಭಿವೃದ್ಧಿ ಹಾಗೂ ಹಿಂದುತ್ವ ಎರಡು ನಮ್ಮ ಅಜೆಂಡ. ಭ್ರಷ್ಟಾಚಾರ ಮಾಡಿ ತಮ್ಮ ಮಕ್ಕಳು ಮೊಮ್ಮಕಳು ತಿನ್ಕೊಳಿ ಅಂತ ನಾವು ಇರೊಲ್ಲ ಎಂದು ಶಾಸಕ ಯತ್ನಾಳ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.