ಬಿಜೆಪಿ ನೋಟಿಸ್‌ ತೋರಿಸಿದ್ರೆ 10 ಲಕ್ಷ ಕೊಡುವೆ: ಯತ್ನಾಳ್‌

By Kannadaprabha News  |  First Published Feb 4, 2023, 3:34 AM IST

ಯತ್ನಾಳ್‌ಗೆ ನೋಟಿಸ್‌, ಯತ್ನಾಳ್‌ ವಿರುದ್ಧ ಕಠಿಣ ಕ್ರಮ ಎಂದೆಲ್ಲಾ ಮಾಧ್ಯಮದಲ್ಲಿ ವರದಿಯಾಯಿತು. ಆದರೆ ನನಗೆ ಯಾವ ನೋಟಿಸ್‌ ಬಂದಿಲ್ಲ. ನೋಟಿಸ್‌ ನೀಡಿರುವುದನ್ನು ತೋರಿಸಿದರೆ 10 ಲಕ್ಷ ರು. ನೀಡುತ್ತೇನೆ. ಕೆಲವರು ನಾವೇ ಲೀಡರ್‌ ಎಂದು ಹೇಳುತ್ತಾರೆ. ಎಲೆಕ್ಷನ್‌ ಬಂದರೆ ಲೀಡರ್‌ ಯಾರೆಂದು ಗೊತ್ತಾಗಲಿದೆ’ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ ಯತ್ನಾಳ್‌. 


ಬೆಂಗಳೂರು(ಫೆ.04):  ಬಿಜೆಪಿ ಹೈಕಮಾಂಡ್‌ನಿಂದ ನನಗೆ ಯಾವುದೇ ನೋಟಿಸ್‌ ಬಂದಿಲ್ಲ. ಕಠಿಣ ಕ್ರಮವನ್ನೂ ಕೈಗೊಂಡಿಲ್ಲ. ಇದೆಲ್ಲಾ ವದಂತಿ. ನೋಟಿಸ್‌ ನೀಡಿರುವುದನ್ನು ತೋರಿಸಿದರೆ 10 ಲಕ್ಷ ರು. ನೀಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸವಾಲು ಹಾಕಿದರು. ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಫ್ರೀಡಂಪಾರ್ಕ್‌ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಾಧಿ ಧರಣಿ ಶುಕ್ರವಾರ 21ನೇ ದಿನಕ್ಕೆ ಕಾಲಿರಿಸಿದ್ದು, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಯತ್ನಾಳ್‌ಗೆ ನೋಟಿಸ್‌, ಯತ್ನಾಳ್‌ ವಿರುದ್ಧ ಕಠಿಣ ಕ್ರಮ ಎಂದೆಲ್ಲಾ ಮಾಧ್ಯಮದಲ್ಲಿ ವರದಿಯಾಯಿತು. ಆದರೆ ನನಗೆ ಯಾವ ನೋಟಿಸ್‌ ಬಂದಿಲ್ಲ. ನೋಟಿಸ್‌ ನೀಡಿರುವುದನ್ನು ತೋರಿಸಿದರೆ 10 ಲಕ್ಷ ರು. ನೀಡುತ್ತೇನೆ. ಕೆಲವರು ನಾವೇ ಲೀಡರ್‌ ಎಂದು ಹೇಳುತ್ತಾರೆ. ಎಲೆಕ್ಷನ್‌ ಬಂದರೆ ಲೀಡರ್‌ ಯಾರೆಂದು ಗೊತ್ತಾಗಲಿದೆ’ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

Tap to resize

Latest Videos

ನಾನು ಬಿಎಸ್‌ವೈ ವಿರುದ್ಧ ಮಾತನಾಡಲ್ಲ ಎಂದ ಯತ್ನಾಳ್‌: ನಸು ನಕ್ಕು ಕೈ ಮುಗಿದ ಯಡಿಯೂರಪ್ಪ..!

ಮೀಸಲಾತಿಗಾಗಿ ಧಮಕಿ ಹಾಕಿಲ್ಲ:

ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2 ‘ಎ’ ಅಡಿ ಮೀಸಲಾತಿ ನೀಡಬೇಕೆಂದು ನಾವು ಯಾರಿಗೂ ಧಮಕಿ ಹಾಕಿಲ್ಲ. ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಭರವಸೆ ನೀಡಿದ್ದರು ಎಂದು ಯತ್ನಾಳ್‌ ಸ್ಪಷ್ಟಪಡಿಸಿದರು.

ಧಮಕಿ ಹಾಕಿ ಮೀಸಲಾತಿ ಕೇಳಿದ್ದಾರೆ ಎಂದು ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ. ನಾವು ಯಾರಿಗೂ ಧಮಕಿ ಹಾಕಿಲ್ಲ. ಮೀಸಲಾತಿ ನೀಡುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಹೇಳಿಕೆ ನೀಡಿದ್ದರು. ಕೊಟ್ಟಮಾತಿನಂತೆ ನಡೆದುಕೊಳ್ಳಬೇಕು. ಕಣ್ಣೊರೆಸಲು ಹೊಸ ಪ್ರವರ್ಗ ಸೃಷ್ಟಿಸಿ ಮೀಸಲಾತಿ ನೀಡಿದ್ದು, ಇದರಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಆದ್ದರಿಂದ ಬೇಡಿಕೆ ಈಡೇರುವವರೆಗೂ ಹೋರಾಟ ವಾಪಸ್‌ ಪಡೆಯುವುದಿಲ್ಲ ಎಂದು ವಿವರಿಸಿದರು.

ರಾಜ್ಯಾದ್ಯಂತ ಸಮುದಾಯದ ಜನರಿದ್ದು ಯಾರೇ ಮುಖ್ಯಮಂತ್ರಿ ಆಗಬೇಕು ಎಂದರೂ ಸಮುದಾಯದ ಅವಶ್ಯಕತೆಯಿದೆ. ಬೇರೆ ಸಮುದಾಯಗಳಿಗೆ ನೀಡಿದಂತೆ ನಮಗೂ ಮೀಸಲಾತಿ ನೀಡಬೇಕು. ವಿಪರ್ಯಾಸವೆಂದರೆ ನಮ್ಮ ಸಮುದಾಯವನ್ನು ವಿಭಜಿಸುವ ಕುತಂತ್ರದ ಕೆಲಸವಾಯಿತು. ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ಅವರು ಇತ್ತೀಚೆಗೆ ದೆಹಲಿಗೆ ಹೋಗಿದ್ದಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ‘ನೀವು ಪಂಚಮಸಾಲಿ ಸಮುದಾಯದವರಾ’ ಎಂದು ಕೇಳಿದ್ದಾರೆ. ಪಂಚಮಸಾಲಿ ಪದವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕಿವಿಗೂ ಮುಟ್ಟಿಸುವ ಕೆಲಸವಾಗಿದೆ ಎಂದು ತಿಳಿಸಿದರು.

click me!