ಸನಾತನಕ್ಕೆ ಬೈಯ್ದವರ ಕುಟುಂಬಕ್ಕೆ ಏಡ್ಸ್, ಕುಷ್ಟ ಬರುತ್ತೆ ನೋಡುವಿರಂತೆ ಅಂತಾ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ. ಹುಬ್ಬಳ್ಳಿಗೆ ತೆರಳುವ ಮಾರ್ಗಮಧ್ಯೆ ಭೇಟಿಯಾದ ನರಗುಂದ ಬಿಜೆಪಿ ಕಾರ್ಯಕರ್ತರ ಜೊತೆ ಮಾತನಾಡಿದರು.
ಗದಗ (ಸೆ.17): ಸನಾತನಕ್ಕೆ ಬೈಯ್ದವರ ಕುಟುಂಬಕ್ಕೆ ಏಡ್ಸ್, ಕುಷ್ಟ ಬರುತ್ತೆ ನೋಡುವಿರಂತೆ ಅಂತಾ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ. ಹುಬ್ಬಳ್ಳಿಗೆ ತೆರಳುವ ಮಾರ್ಗಮಧ್ಯೆ ಭೇಟಿಯಾದ ನರಗುಂದ ಬಿಜೆಪಿ ಕಾರ್ಯಕರ್ತರ ಜೊತೆ ಮಾತನಾಡಿದ ಅವರು, ಆಟೋ ತೆಗೆದುಕೊಳ್ಳೋದಕ್ಕೆ ಒಂದೇ ಕೋಮಿಗೆ 50 ಪರ್ಸೆಂಟ್ ಸಬ್ಸಿಡಿ ಇದೆ. ಹಿಂದುಳಿದವರು ದಲಿತರಿಗೂ 50% ಸಬ್ಸಿಡಿ ಕೊಡಬೇಕಲ್ಲ ಅಂತಾ ಪ್ರಶ್ನಿಸಿದರು.
ದಲಿತರಿಗೆ, ಹಿಂದುಳಿದವರಿಗಿಲ್ಲ, ಒಂದು ಕೋಮಿಗಷ್ಟೆ ಸಬ್ಸಿಡಿ ಇದು ತುಷ್ಟೀಕರಣ ಅಂತಾ ಹೇಳಿದ ಯತ್ನಾಳ್, ಬಡವ ಯಾವುದೇ ಸಮಾಜದಲ್ಲಿ ಇದ್ದರು ಬಡವನೇ ಅವರ ಉದ್ಧಾರ ಆಗ್ಬೇಕು ಅಂತಾ ಹೇಳಿದರು. ಕಾಂಗ್ರೆಸ್ ಜಾತಿ ತಾರತಮ್ಯ ಮಾಡಿದೆ. ನಾವು ಮನುಸ್ಮೃತಿ ಬಗ್ಗೆ ಎಲ್ಲಿಯೂ ಹೇಳಿಲ್ಲ. ಮನುಸ್ಮೃತಿಯನ್ನ ಬಿಜೆಪಿ, ಆರ್‌ಎಸ್‌ಎಸ್ ಎಲ್ಲಿಯೂ ಸಮರ್ಥನೆ ಮಾಡಿಲ್ಲ. ಆದರೆ, ಸರ್ಕಾರದ ವಿಫಲತೆ ಮುಚ್ಚಿ ಹಾಕಲು ಮನುಸ್ಮೃತಿ ವಿಷಯ ಎತ್ತಿದರು, ಸನಾತನ ಧರ್ಮಕ್ಕೆ ಬೈಯಲು ಮುಂದಾಗಿದ್ದಾರೆ ಎಂದರು. ಸನಾತನಕ್ಕೆ ಬೈಯ್ದವರು ನಾಶವಾಗುತ್ತಾರೆ ನೋಡಿ ಎಂದರು.
ಭಾರತೀಯ ಸೇನೆಯ ಬೇಹುಗಾರಿಕೆ ವಿಭಾಗಕ್ಕೆ ಕಾಫಿನಾಡ ಬೆಲ್ಜಿಯಂ ನಾಯಿಗಳು!
ರಾಹುಲ್ ಗಾಂಧಿ ಜನಿವಾರ ಹಾಕಿಕೊಂಡು ಬ್ರಾಹ್ಮಣ ಅಂತಾ ಹೇಳ್ತಾನೆ. ನಮಾಜ್ ಮಾಡಿ ಮುಸ್ಲಿಂ ಅಂತಾ ಹೇಳ್ತಾನೆ. ವಿದೇಶದಲ್ಲಿ ದೇಶದ ವಿರುದ್ಧ ಮಾತಾಡ್ತಾರೆ. ಅಲ್ಲಿ ಮುಸ್ಲಿಂ ಲೀಗ್ ಪ್ಯೂರ್ ಸೆಕ್ಯೂಲರ್ ಪಾರ್ಟಿ ಅಂತಾ ಹೇಳ್ತಾನೆ .ಅದರ ಹೆಸರಲ್ಲೇ ಮುಸ್ಲಿಂ ಲೀಗ್ ಅಂತಾ ಇದೆ. ತುಷ್ಟೀಕರಣ ಮಾಡಿ ಭಾರತವನ್ನು ಅಸ್ಥಿರ ಮಾಡಬೇಕು, ಸನಾತನ ಧರ್ಮ ನಾಶ ಮಾಡಬೇಕು ಅಂತಾ 'ಇಂಡಿಯಾ' ಅಲಯನ್ಸ್ ಮಾಡಿದ್ದಾರೆ ಅಂತಾ I.N.D.I.A ಒಕ್ಕೂಟವನ್ನ ಬಿಜಾಪುರ ಜಿಲ್ಲೆಯಲ್ಲಿ 'ಇಂಡಿ' ಅಂತಾ ವ್ಯಂಗ್ಯವಾಡಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲವು: ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಿಶ್ವಾಸ ವ್ಯಕ್ತಪಡಿಸಿದರು. ನಗರದ ಜಿಲ್ಲಾ ಬಿಜೆಪಿ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಂಖನಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ವಿರೋಧಿಗಳ ಪೋಸ್ಟ್‌ಗೆ ಅಲ್ಲಿಯೇ ಕಾಮೆಂಟ್ ಮಾಡಿ ತಕ್ಕ ಉತ್ತರ ನೀಡಬೇಕು ಎಂದು ಹೇಳಿದರು.
ಹಿಂದೂ ಸನಾತನ ಧರ್ಮ ಕಾಗೆ ಇದ್ದ ಹಾಗೆ ಎಂದು ಪ್ರಕಾಶ ರಾಜ್ ಹೇಳಿದ್ದ. ಅದಕ್ಕೆ ಪ್ರಕಾಶ ರಾಜ್ ಹಂದಿ ಎಂದು ನಾನು ಉತ್ತರ ಕೊಟ್ಟಿದ್ದೆ. ನೀವು ಕೂಡ ಸುಖಾ ಸುಮ್ಮನೆ ಮಾತನಾಡದೇ ತಕ್ಕಉತ್ತರ ನೀಡಬೇಕು ಎಂದರು. ಈ ಹಿಂದೆ ಮೀಡಿಯಾ ಎಡ ಪಂಥೀಯ ಸಿದ್ಧಾಂತದವರ ಕೈಯಲ್ಲಿತ್ತು. ಮೋದಿ ಬೆಂಬಲಿಸುವ ಮಾಧ್ಯಮಗಳಿಗೆ ಮೋದಿ ಮೀಡಿಯಾ ಎನ್ನುತ್ತಿದ್ದಾರೆ. 14 ನಿರೂಪಕರನ್ನು ಇಂಡಿಯಾ ಅಲೈನ್ಸ್ ನಿಷೇಧಿಸಿರುವುದು ಏಕೆ ಎಂದು ಪ್ರಶ್ನಿಸಿದರು.
ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುತ್ತಿರುವ ಶಿಕ್ಷಕ: ಅಲ್ಹಾಭಕ್ಷ ಕೈಯಲ್ಲಿ ಅರಳಿವೆ ನೂರಾರು ಗಣಪ ವಿಗ್ರಹ!
ಸನಾತನ ಉಳಿದರೆ ಮಾತ್ರ ಹಿಂದುಗಳು, ದಲಿತರು ಹಾಗೂ ಸಂವಿಧಾನ ಉಳಿಯಲು ಸಾಧ್ಯ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಮನುವಾದ ಮತ್ತು ಮನುಸ್ಮೃತಿ ಬಗ್ಗೆ ಚರ್ಚೆ ಮಾಡುತ್ತಾರೆ. ನಾವು ಎಂದಾದರೂ ಮನುಸ್ಮೃತಿ ಬಗ್ಗೆ ಚರ್ಚೆ ಮಾಡಿದ್ದೇವಾ? ನಾವು ಸಂವಿಧಾನ ಬದಲು ಮಾಡುವುದಾಗಿಯೂ ಎಲ್ಲೂ ಹೇಳಿಲ್ಲ ಎಂದು ತಿಳಿಸಿದರು. ಮೀಸಲಾತಿ ಪ್ರಮಾಣ ಹೆಚ್ಚು ಮಾಡಿದ್ದೇ ಬಿಜೆಪಿ. ಕಾಂಗ್ರೆಸ್ಸಿನವರು ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಡಲಿಲ್ಲ. ಅವರು ನಿಧನರಾದಾಗ ಅಂತ್ಯಕ್ರಿಯೆಗೂ ಜಾಗ ನೀಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.