ಇಟಲಿ ಮನಸ್ಥಿತಿಯವರಿಂದ ರಾಮನ ಬಗ್ಗೆ ಅಪೇಕ್ಷೆ ಅಸಾಧ್ಯ: ಶಾಸಕ ಅರವಿಂದ ಬೆಲ್ಲದ

By Kannadaprabha News  |  First Published Jan 20, 2024, 8:26 AM IST

ಕಾಂಗ್ರೆಸ್‌ ಮುಖಂಡರ ಮನಸ್ಥಿತಿ ಇಟಲಿಯದ್ದು. ಅವರಿಂದ ರಾಮನ ಬಗ್ಗೆ ಏನೂ ಅಪೇಕ್ಷೆ ಮಾಡಲು ಸಾಧ್ಯವಿಲ್ಲ ಎಂದು ವಿಪಕ್ಷ ಉಪನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ ಹೇಳಿದರು. 


ಧಾರವಾಡ (ಜ.19): ಕಾಂಗ್ರೆಸ್‌ ಮುಖಂಡರ ಮನಸ್ಥಿತಿ ಇಟಲಿಯದ್ದು. ಅವರಿಂದ ರಾಮನ ಬಗ್ಗೆ ಏನೂ ಅಪೇಕ್ಷೆ ಮಾಡಲು ಸಾಧ್ಯವಿಲ್ಲ ಎಂದು ವಿಪಕ್ಷ ಉಪನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ ಹೇಳಿದರು. ಇಟಲಿಯ ಕ್ಯಾಥೊಲಿಕ್‌ ಮೂಲದ ಅಧ್ಯಕ್ಷರನ್ನು ಕಾಂಗ್ರೆಸ್‌ ಸಾಕುತ್ತಿದೆ. ರಾಹುಲ್‌ ಮತ್ತು ಸೋನಿಯಾ ಗಾಂಧಿ ರೀತಿಯಲ್ಲಿಯೇ ಕಾಂಗ್ರೆಸ್‌ ಮುಖಂಡರ ಮನಸ್ಥಿತಿ ಬೆಳೆದಿದ್ದು, ಅವರನ್ನು ಮೆಚ್ಚಿಸಲು ರಾಮ ಮಂದಿರದ ಬಗ್ಗೆ ಕೆಟ್ಟ ಮನಸ್ಥಿತಿ ಪ್ರದರ್ಶಿಸುತ್ತಿದ್ದಾರೆ. ಅವರಿಂದ ರಾಮನ ಬಗ್ಗೆ ಏನೂ ಅಪೇಕ್ಷೆ ಮಾಡಲು ಸಾಧ್ಯವಿಲ್ಲ. ಆರಂಭದಲ್ಲಿ ರಾಮ ಕಾಲ್ಪನಿಕ ಎಂದರು. 

ರಾಮಸೇತು ತೆಗೆಯಬೇಕು ಎಂದರು. ರಾಮ ಹುಟ್ಟಿದ ನೆಲದಲ್ಲಿ ರಾಮ ಏಕೆ ಬೇಕು ಎಂದಿದ್ದರು. ಈಗ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ. ಕಾಂಗ್ರೆಸ್ಸಿಗರದ್ದು ಹಿಂದೂ ವಿರೋಧಿ ಅಜೆಂಡಾ ಎಂದು ಬೆಲ್ಲದ ಟೀಕಿಸಿದರು. ರಾಮ ಮಂದಿರ ಕುರಿತು ಉದಯನಿಧಿ ಸ್ಟಾಲಿನ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬೆಲ್ಲದ, ಉದಯನಿಧಿ ಮೊದಲು ಅವರ ಪತ್ನಿ ಕೇಳಿ ಮಾತನಾಡಲಿ. ಅವರ ಮನೆಯವರು ದೇವಸ್ಥಾನಗಳಿಗೆ ಏತಕ್ಕೆ ಹೋಗುತ್ತಾರೆ. ನಮ್ಮ ಧರ್ಮ, ರಾಷ್ಟ್ರ, ನಮ್ಮ ಭಾವನೆ ಬಗ್ಗೆ ಅವರಿಗೆ ಚಿಂತನೆ ಇಲ್ಲ. ಅವರು ಮೊದಲಿನಿಂದಲೂ ಎಡಪಂಥಿ. ಅವರು ಚರ್ಚ್‌ಗಳ ಪರವಾಗಿಯೇ ಮಾತನಾಡುವವರು ಎಂದರು.

Tap to resize

Latest Videos

ಶ್ರೀರಾಮನ ಅವಹೇಳನ: ಸಿದ್ದು, ರಾಜಣ್ಣ ಕ್ಷಮೆಗೆ ಮಾಜಿ ಸಿಎಂ ಸದಾನಂದಗೌಡ ಆಗ್ರಹ

ಸಿಎಂ ಬಗ್ಗೆ ಹೆಗಡೆ ಹೇಳಿಕೆ ಒಪ್ಪಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಅನಂತಕುಮಾರ ಹೆಗಡೆ ಏಕವಚನ ಪ್ರಯೋಗ ಖಂಡನೀಯ. ನಾನೂ ಹೆಗಡೆ ಅವರ ಹೇಳಿಕೆ ಒಪ್ಪುವುದಿಲ್ಲ. ಮುಖ್ಯಮಂತ್ರಿಗಳು ಅನುಭವದಲ್ಲಿ ದೊಡ್ಡವರು. ಜವಾಬ್ದಾರಿ ಸ್ಥಾನದಲ್ಲಿ ಇದ್ದವರು. ಅವರ ಬಗ್ಗೆ ಗೌರವದಿಂದ ಮಾತನಾಡಬೇಕಾಗುತ್ತದೆ. ಅದರ ಜೊತೆಗೆ ಮುಖ್ಯಮಂತ್ರಿಗಳು ಪ್ರಧಾನಿಗಳ ಬಗ್ಗೆ ಏಕವಚನ ಪ್ರಯೋಗ ಮಾಡಿದ್ದು ತಪ್ಪು. ಎರಡು ತಪ್ಪು ಸೇರಿ ಸರಿ ಆಗುವುದಿಲ್ಲ. ಅವರು ಮಾತನಾಡಿದ್ದಾರೆ ಎಂದು ಇವರು ಮಾತನಾಡುವುದು ಸರಿಯಲ್ಲ ಎಂದು ಬೆಲ್ಲದ ಹೇಳಿದರು.

click me!