ಅವರವರ ಪಕ್ಷ ಅವರವರ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ. ಸಿಎಂ ಇಬ್ರಾಹಿಂ ಅವರು ಯಾವುದಕ್ಕಾಗಿ ಈ ರೀತಿ ಹೇಳಿದರೆ ಅವರೇ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಜೆಡಿಎಸ್ ಮೈತ್ರಿ ಬೆಳವಣಿಗೆ ಬಗ್ಗೆ ಪಕ್ಷದ ಮಾಜಿ ಸಚಿವ ಎ ಮಂಜು ತಿಳಿಸಿದ್ದಾರೆ.
ಹಾಸನ (ಅ.20): ಅವರವರ ಪಕ್ಷ ಅವರವರ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ. ಸಿಎಂ ಇಬ್ರಾಹಿಂ ಅವರು ಯಾವುದಕ್ಕಾಗಿ ಈ ರೀತಿ ಹೇಳಿದರೆ ಅವರೇ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಜೆಡಿಎಸ್ ಮೈತ್ರಿ ಬೆಳವಣಿಗೆ ಬಗ್ಗೆ ಪಕ್ಷದ ಮಾಜಿ ಸಚಿವ ಎ ಮಂಜು ತಿಳಿಸಿದ್ದಾರೆ. ಇಬ್ರಾಹಿಂರವರು ತಾವೇ ಇಂಡಿಯಾ ಜೊತೆ ಹೋಗುತ್ತೇವೆ ಎಂದು ಘೋಷಣೆ ಮಾಡಿಕೊಂಡಾಗ ಪರ್ಯಾಯವಾಗಿ ಅಧ್ಯಕ್ಷರನ್ನ ಮಾಡಿಕೊಳ್ಳುವುದು ನಮ್ಮ ಪಕ್ಷದ ಜವಾವ್ದಾರಿ.
ಆ ಜವಾಬ್ದಾರಿಗಳ ಮೇಲೆ ಕುಮಾರಸ್ವಾಮಿಯವರನ್ನು ನಾವು ನೇಮಿಸಿಕೊಂಡಿದ್ದೇವೆ ಅದರಲ್ಲಿ ತಪ್ಪೇನಿದೆ. ಹೊಂದಾಣಿಕೆ ಅನ್ನೋದು ಮೊದಲಿನಿಂದಲೂ ರಾಜಕೀಯದಲ್ಲಿ ಇರುವ ಪ್ರಕ್ರಿಯೆ. ಈ ಹಿಂದೆ ರಾಮಕೃಷ್ಣ ಹೆಗಡೆ ಬಂಗಾರಪ್ಪ ಮುಖ್ಯಮಂತ್ರಿಯಾದಾಗ ಎಲ್ಲರೂ ಹೊಂದಾಣಿಕೆ ಮಾಡಿಕೊಂಡಿರಲಿಲ್ವಾ. ಹೊಂದಾಣಿಕೆ ಮಾಡಿಕೊಳ್ಳುವುದು ಆ ಪಕ್ಷದ ಸಂಘಟನೆ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಹೊಂದಾಣಿಕೆ ಮಾಡಿಕೊಂಡ ತಕ್ಷಣ ಜಾತ್ಯತೀತ ತತ್ವ ಬದಲಾಗುವುದಿಲ್ಲ. ಉದಾಹರಣೆಗೆ ನಾನು ಮದುವೆಯಾಗಿ ಹಿಂದುಳಿದ ವರ್ಗದ ಮಹಿಳೆಯನ್ನ ಇದರಿಂದ ನನ್ನ ಹೆಸರು ಇನಿಶಿಯಲ್ ಬದಲಾಗುತ್ತಾ.
ಕುಡಿದು ವಾಹನ ಸಮೇತ ರಸ್ತೆಗಿಳಿದ್ರೆ ಹುಷಾರ್: ಸ್ವತಃ ಎಸ್ಪಿಯಿಂದಲೇ ರಿಯಾಲಿಟಿ ಚೆಕ್!
ನಮ್ಮ ದೇಶದ ಹಿತದೃಷ್ಟಿಯಿಂದ ನಾವು ಹೊಂದಾಣಿಕೆ ಮಾಡಿಕೊಂಡಿರುವುದಲ್ಲಿ ತಪ್ಪೇನಿಲ್ಲ. ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಹಿಂದೆ ಸಭೆ ಸೇರಿದಾಗ ರಾಜ್ಯಾಧ್ಯಕ್ಷರಾಗಿ ಸಿಎಂ ಇಬ್ರಾಹಿಂ ಕೂಡ ಇದ್ದರು. ಎಲ್ಲೂ ಕೂಡ ಈ ಬಗ್ಗೆ ವಿರೋಧವನ್ನು ಅವರು ವ್ಯಕ್ತಪಡಿಸಲೇ ಇಲ್ಲ. ಈಗ ಅವರು ಈ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದು ಹೇಳುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಸಿಗೋದಿಲ್ಲ. ಈಗ ನಮಗೆ ಏನು ಗೊತ್ತೇ ಇಲ್ಲ ಎಂದು ಹೇಳುವುದು ಒಳ್ಳೆಯದಲ್ಲ ಎಂದು ಎ.ಮಂಜು ಹೇಳಿದರು.
ಇಬ್ರಾಹಿಂ ಏನೆಂದಿದ್ದರು?: ಇಬ್ರಾಹಿಂ ಅವರು ಇತ್ತೀಚೆಗೆ ತಮ್ಮ ಬೆಂಬಲಿಗರ ಸಭೆ ನಡೆಸಿ ನಮ್ಮದೇ ಮೂಲ ಜೆಡಿಎಸ್ ಎಂಬ ಹೇಳಿಕೆ ನೀಡಿದ್ದರು. ಅಲ್ಲದೇ, ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ್ದರು. ಬಿಜೆಪಿಯೊಂದಿಗಿನ ಮೈತ್ರಿ ಸಂಬಂಧ ತಮ್ಮೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು. ಇದೀಗ ಇಬ್ರಾಹಿಂ ಹೇಳಿಕೆಗೆ ಜೆಡಿಎಸ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಬ್ರಾಹಿಂ ಸಮ್ಮುಖದಲ್ಲಿಯೇ ಎನ್‌ಡಿಎ ಸೇರುವ ಕುರಿತು ಚರ್ಚೆ ನಡೆಸಲಾಗಿದೆ. ಚರ್ಚೆಯ ವೇಳೆ ಇಬ್ರಾಹಿಂ ಅವರೇ ಮೈತ್ರಿಗೆ ಸಹಮತ ವ್ಯಕ್ತಪಡಿಸಿದ್ದರು.
ರೇಣುಕಾಚಾರ್ಯ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರ ಖಂಡನೆ: ಉಚ್ಚಾಟನೆಗೆ ವರಿಷ್ಠರಿಗೆ ಮನವಿ
ಇದೀಗ ಏಕಾಏಕಿ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಉಚ್ಚಾಟಿಸುವ ಕಾಲ ಪಕ್ವವಾಗಿಲ್ಲ ಎಂಬ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಇಬ್ರಾಹಿಂ ವಿರುದ್ಧವೇ ಕ್ರಮ ಕೈಗೊಳ್ಳುವಂತೆ ಪಕ್ಷದ ನಾಯಕರು ಒತ್ತಾಯಿಸಿದ್ದಾರೆ. ಹೀಗಾಗಿ ಗುರುವಾರ ಸಭೆ ನಡೆಸಿ ಇಬ್ರಾಹಿಂ ವಿರುದ್ಧ ಒಮ್ಮತದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಪಕ್ಷದ ಸಂವಿಧಾನದಲ್ಲಿ ಪಕ್ಷದ ವಿರುದ್ಧ ಹೇಳಿಕೆ ನೀಡಿದರೆ ಕ್ರಮ ಕೈಗೊಳ್ಳುವ ಅಧಿಕಾರ ಇದೆ. ಈ ಅಧಿಕಾರವನ್ನು ಬಳಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಕ್ಷದ ಮೂಲಗಳು ಹೇಳಿವೆ.