ಕಾಂಗ್ರೆಸ್‌ನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ತಂಡ ಸರ್ಕಾರ ಹೈಜಾಕ್ ಮಾಡುತ್ತಿದೆ ಎಂದು ಡಿಕೆಶಿ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಆದರೆ, ಕಾಂಗ್ರೆಸ್ ಸರ್ಕಾರ ತನ್ನಿಂದ ತಾನೇ ಬಿದ್ದರೂ ಆಶ್ಚರ್ಯವಿಲ್ಲ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ತಿರುಗೇಟು ನೀಡಿದರು.
ಹಿರೇಕೆರೂರು (ಅ.20): ಕಾಂಗ್ರೆಸ್‌ನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ತಂಡ ಸರ್ಕಾರ ಹೈಜಾಕ್ ಮಾಡುತ್ತಿದೆ ಎಂದು ಡಿಕೆಶಿ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಆದರೆ, ಕಾಂಗ್ರೆಸ್ ಸರ್ಕಾರ ತನ್ನಿಂದ ತಾನೇ ಬಿದ್ದರೂ ಆಶ್ಚರ್ಯವಿಲ್ಲ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ತಿರುಗೇಟು ನೀಡಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ತಂಡ ಸರ್ಕಾರವನ್ನು ಹೈಜಾಕ್ ಮಾಡುತ್ತಿದೆ ಎಂದು ಡಿಕೆಶಿ ಹೇಳಿದ್ದಾರೆ. ಆದರೆ, ನಮಗೆ ಆ ರೀತಿಯ ಚಿಂತನೆಯೇ ಇಲ್ಲ. ಕಾಂಗ್ರೆಸ್‌ನವರ ಭ್ರಷ್ಟಾಚಾರ, ಕರಾಳ ಮುಖಗಳು ಬಯಲಾಗಬೇಕು. ಇವರನ್ನು ದಾರಿಯಲ್ಲಿ ನಿಲ್ಲಿಸಿ ಜನರು ಹೊಡೆದು ಓಡಿಸುವ ಕೆಲಸ ಆಗಬೇಕು ಎಂದು ವಾಗ್ದಾಳಿ ನಡೆಸಿದರು.
ಡಿಕೆಶಿ ಬೆಳಗಾವಿಗೆ ಹೋದರೆ ಯಾವ ಶಾಸಕರು ಅಲ್ಲಿಗೆ ಹೋಗಿಲ್ಲ. ಕಾಂಗ್ರೆಸ್‌ನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಬಸವರಾಜ ರಾಯರೆಡ್ಡಿ , ಬಿ.ಕೆ. ಹರಿಪ್ರಸಾದ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅದಾಗಿಯೇ ಬಿದ್ದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಬಿದ್ದರೂ ಬಿಜೆಪಿಗೆ ಸರ್ಕಾರ ರಚನೆ ಮಾಡುವ ಮನಸ್ಸಿಲ್ಲ. ಜನರ ತೀರ್ಪು ಪಡೆದು ನಾವು ಸರ್ಕಾರ ಮಾಡುತ್ತೇವೆ. ತಮ್ಮ ಹುಳುಕು ಮುಚ್ಚಿಕೊಳ್ಳಲು ಡಿ.ಕೆ. ಶಿವಕುಮಾರ್ ಬಿಜೆಪಿ ಮೇಲೆ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಈ ಸರ್ಕಾರ ಯಾವಾಗ ಬೇಕಾದರೂ ಬಿದ್ದು ಹೋಗಬಹುದು.
ನನ್ನ, ಸತೀಶಣ್ಣ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಸರ್ಕಾರದಲ್ಲಿ ಅಭದ್ರತೆ ಕಾಣಿಸುತ್ತಿದೆ. ಭ್ರಷ್ಟಾಚಾರ ಕೂಡ ಈ ಸರ್ಕಾರದ ಮತ್ತೊಂದು ಭಾಗ್ಯ ಎಂದು ವ್ಯಂಗ್ಯವಾಡಿದರು. ವಿಧಾನಸೌಧದಲ್ಲಿ ಕುಂಕುಮ, ಅರಿಶಿಣ ಬಳಸದಂತೆ ಆದೇಶ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅರಿಶಿಣ ಕುಂಕುಮ ಸೌಭಾಗ್ಯದ ಸಂಕೇತ. ಭಾರತದ ಪರಂಪರೆ, ಮುತ್ತೈದೆಯರ ಸೌಭಾಗ್ಯ ಎಂದು ನಾವು ನಂಬಿದ್ದೇವೆ. ಟೋಪಿ ಹಾಕಿಕೊಂಡು ನಮಾಜ್ ಮಾಡಬೇಕು ಅಂದರೆ ಅದಕ್ಕೆ ಕಾಂಗ್ರೆಸ್ಸಿನವರು ರೆಡಿಯಿದ್ದಾರೆ. ಆದರೆ, ಅರಿಶಿಣ ಕುಂಕುಮ ಬಳಕೆ ಮಾಡಬಾರದು ಎನ್ನುವ ಕೀಳುಮಟ್ಟಕ್ಕೆ ಹೋಗಿದ್ದಾರೆ. ಸಂಸ್ಕೃತಿಯನ್ನು ಕೊಲೆ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.