ರೇಣುಕಾಚಾರ್ಯ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರ ಖಂಡನೆ: ಉಚ್ಚಾಟನೆಗೆ ವರಿಷ್ಠರಿಗೆ ಮನವಿ

By Kannadaprabha News  |  First Published Oct 20, 2023, 2:49 PM IST

ರೇಣುಕಾಚಾರ್ಯರವರು ಬಿಜೆಪಿ ಪಕ್ಷದಲ್ಲಿ ಹಲವಾರು ರೀತಿಯ ಅಧಿಕಾರ, ಅಂತಸ್ತನ್ನು ಅನುಭವಿಸಿ ಇದೀಗ‌ ತಾನು ಬೆಳೆದು ಬಂದ  ಪಕ್ಷದ ಬಗ್ಗೆ ಮುಳುಗುವ ದೋಣಿ ಎಂದು ಹೇಳಿಕೆ ನೀಡುತ್ತಿರುವುದು ಖಂಡನೀಯ ಕೂಡಲೇ ಪಕ್ಷದ ವರಿಷ್ಠರು ಅವರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡಬೇಕು ಎಂದು ಬಿಜೆಪಿ ಪಕ್ಷದ ಒಬಿಸಿ ಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ಸುರೇಶ್ ಗಂಡಗಾಳೆ ಒತ್ತಾಯಿಸಿದರು.
 


ವರದಿ: ವರದರಾಜ್, ದಾವಣಗೆರೆ

ದಾವಣಗೆರೆ (ಅ.20): ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯರವರು ಬಿಜೆಪಿ ಪಕ್ಷದಲ್ಲಿ ಹಲವಾರು ರೀತಿಯ ಅಧಿಕಾರ, ಅಂತಸ್ತನ್ನು ಅನುಭವಿಸಿ ಇದೀಗ‌ ತಾನು ಬೆಳೆದು ಬಂದ  ಪಕ್ಷದ ಬಗ್ಗೆ ಮುಳುಗುವ ದೋಣಿ ಎಂದು ಹೇಳಿಕೆ ನೀಡುತ್ತಿರುವುದು ಖಂಡನೀಯ ಕೂಡಲೇ ಪಕ್ಷದ ವರಿಷ್ಠರು ಅವರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡಬೇಕು ಎಂದು ಬಿಜೆಪಿ ಪಕ್ಷದ ಒಬಿಸಿ ಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ಸುರೇಶ್ ಗಂಡಗಾಳೆ ಒತ್ತಾಯಿಸಿದರು.

Tap to resize

Latest Videos

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿ.ಜೆ.ಪಿ ಎಂದರೆ ಕಾರ್ಯಕರ್ತರು, ಕಾರ್ಯಕರ್ತರು ಎಂದರೆ ಬಿ.ಜೆ.ಪಿ ಎಂಬ ನಂಬಿಕೆ ಪ್ರತಿಯೊಬ್ಬ ಕಾರ್ಯಕರ್ತನಲ್ಲಿದೆ. ಆದರೆ ರೇಣುಕಾಚಾರ್ಯರ ಹೇಳಿಕೆಯಿಂದ ಲಕ್ಷಾಂತರ ನಿಷ್ಠಾವಂತ ಕಾರ್ಯಕರ್ತರಿಗೆ ನೋವು ಮತ್ತು ಅಗೌರವ ತೋರಿದಂತಾಗಿದೆ. ಇತ್ತೀಚಿನ ದಿನಗಳಲ್ಲಿ ರೇಣುಕಾಚಾರ್ಯರವರು ಮಾಜಿ ಸಿಎಂ .ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ಅನುಕಂಪದ ಮಾತನಾಡುತ್ತಾರೆ. ಬಿಎಸ್ ವೈ ಸಿಎಂ ಆಗಿದ್ದಾಗ ರೇಣುಕಾಚಾರ್ಯ , ಗುಂಪುಗಾರಿಕೆ ಮಾಡುತ್ತಾ ನೆಮ್ಮದಿಯಿಂದ ಅಧಿಕಾರ ಮಾಡಲು ಅವಕಾಶ ನೀಡದೆ ಮಂತ್ರಿಗಿರಿಯನ್ನು ಗಿಟ್ಟಿಸಿಕೊಂಡಿದ್ದಾರೆ. 

ಎಂಪಿಆರ್ ಸಚಿವರಾಗಿ, ರಾಜಕೀಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡು ಗೂಟದ ಕಾರು, ಸರ್ಕಾರಿ ಬಂಗಲೆ, ಅಧಿಕಾರ, ಅಂತಸ್ತು ಎಲ್ಲವನ್ನೂ ಅನುಭವಿಸಿದರು.  ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷ ಮುಳುಗುವ ದೋಣಿಯಾಗಿದೆ ಎಂದು ಹೇಳಿಕೆ ನೀಡಿರುವುದು  ಲಕ್ಷಾಂತರ ಕಾರ್ಯಕರ್ತರ ಮನಸ್ಸಿಗೆ ನೋವುಂಟಾಗಿದೆ. ಎಂ.ಪಿ.ರೇಣುಕಾಚಾರ್ಯರವರು ನಿಂತ ನೀರಿನಲ್ಲಿ ದೋಣಿಯನ್ನು ಚಲಾಯಿಸಿ ತಮ್ಮ ದೋಣಿಯನ್ನು ತಾವೇ ಮುಳುಗಿಸಿ ಕೊಳ್ಳುವಂತಹ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಸರ್ಕಾರ ಬೀಳಿಸೋ ತಾಕತ್ತು ಒಳಗಿನ ಕಾಂಗ್ರೆಸ್ಸಿಗರಿಗಿದೆ: ಸಿ.ಟಿ.ರವಿ

ರೇಣುಕಾಚಾರ್ಯ ಅವರು ನಿಷ್ಠಾವಂತ ಕಾರ್ಯಕರ್ತರಾಗಿದ್ದರೆ ಹಾದಿಬೀದಿಯಲ್ಲಿ ಮಾತನಾಡುವುದನ್ನು ಬಿಡಲಿ ಪಕ್ಷದಲ್ಲಿ ಇರುವುದಾದರೆ‌ ಗೌರವಯುತವಾಗಿರಲಿ ಇಲ್ಲವಾದಲ್ಲಿ ಗೌರವಯುತವಾಗಿ ಹೋಗಲಿ.ಮಾಧ್ಯಮಗಳ ಮುಂದೆ ಬಿಜೆಪಿ ಪಕ್ಷದ ಬಗ್ಗೆ ಅವಹೇಳನವಾಗಿ ಮಾತನಾಡುವುದು ಸರಿಯಲ್ಲ. ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಶಿವಾನಂದ,ಎಸ್.ಟಿ ಯೋಗೀಶ್ವರ್,ಜಿ.ಎಸ್ ಡಿ ಮೂರ್ತಿ,ಜಯಪ್ರಕಾಶ್, ಬಿ.ಟಿ ಲೋಕೇಶ್ ಉಪಸ್ಥಿತರಿದ್ದರು.

click me!