'ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ : ಯಾವಾಗ ಏನು ಆಗುತ್ತೋ ಹೇಳಲಾಗದು'

By Kannadaprabha NewsFirst Published Aug 9, 2021, 10:31 AM IST
Highlights
  • ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಆಕ್ರೋಶವಿದೆ
  • ಯಾವುತ್ತಾದರೂ ಒಂದು ದಿನ ಆಕ್ರೋಶ ಸ್ಫೋಟವಾಗಬಹುದು
  • ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಬೊಮ್ಮಾಯಿ ಮುಖ್ಯಮಂತ್ರಿ ಮಾಡಿದ್ದಕ್ಕೂ ಅಸಮಾಧಾನವಿದೆ

ಬೆಂಗಳೂರು (ಆ.09):  ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಆಕ್ರೋಶವಿದೆ. ಯಾವುತ್ತಾದರೂ ಒಂದು ದಿನ ಆಕ್ರೋಶ ಸ್ಫೋಟವಾಗಬಹುದು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ರಚನೆ ಹಾಗೂ ಖಾತೆ ಹಂಚಿಕೆ ಆ ಪಕ್ಷದ ಆಂತರಿಕ ವಿಚಾರ. ಇಷ್ಟುಮಾತ್ರ ನಿಜ ಅನ್ನಿಸುತ್ತಿದೆ. ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಬೊಮ್ಮಾಯಿ ಮುಖ್ಯಮಂತ್ರಿ ಮಾಡಿದ್ದಕ್ಕೂ ಅಸಮಾಧಾನವಿದೆ. ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಿದ್ದಕ್ಕೂ ಆಕ್ರೋಶವಿದೆ. ಯಾವಾಗ ಏನು ಆಗುತ್ತದೆ ಎಂದು ಹೇಳಲು ಆಗುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ಖಾತೆ ಬಗ್ಗೆ ಅಪಸ್ವರವೆತ್ತಿದ ಮುಖಂಡರಿಗೆ ಟಾಂಗ್ ನೀಡಿದ ಸಚಿವ

ಈಗಾಗಲೇ ರಾಜ್ಯದಲ್ಲಿ ಸಂಪುಟ ವಿಸ್ತರಣೆಯಾದರು ಅನೇಕರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.  ಸಂಪುಟದಲ್ಲಿ ಸ್ಥಾನ ಸಿಗಲಿಲ್ಲವೆಂದು ಕೆಲ ಶಾಸಕರು ಅಸಮಾಧಾನಗೊಂಡರೆ ಇನ್ನು ಕೆಲವರು ಸಿಕ್ಕ ಸಚಿವ ಸ್ಥಾನದ ಬಗ್ಗೆಯೂ ಅಸಮಾದಾನಗೊಂಡಿದ್ದಾರೆ. ವಲಸಿಗರಾದ ಎಂಟಿಬಿ ನಾಗರಾಜ್ ಹಾಗು ಆನಂದ್ ಸಿಂಗ್ ಸಿಕ್ಕ ಖಾತೆಗಳ ಬಗ್ಗೆ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಯಾವಾಗ ಬೇಕಾದ ಆಕ್ರೋಶ ಸ್ಫೋಟವಾಗಬಹುದೆಂದು ಭವಿಷ್ಯ ನುಡಿದಿದ್ದಾರೆ. 

click me!