
ಬೆಂಗಳೂರು, (ಆ.08): ಬಿಎಸ್ ಯಡಿಯೂರಪ್ಪ ಅವರನ್ನ ಸಿಎಂ ಸ್ಥಾನದಿಂದ ಏಕೆ ಕೆಳಗಿಳಿಸಿದ್ರು ಎನ್ನುವುದಕ್ಕೆ ಅವರ ಅಭಿಮಾನಿಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ
. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಇನ್ನೂ ಎರಡು ವರ್ಷ ಇದೆ. ಆದರೂ ಓರ್ವ ಪ್ರಭಾವಿ ವೀರಶೈವ ಲಿಂಗಾಯತ ನಾಯಕ ಯಡಿಯೂರಪ್ಪನವರನ್ನ ಹೈಕಮಾಂಡ್ ಬದಲಿಸಲು ಕಾರಣ ಏನು ಎನ್ನುವುದು ಮಾತ್ರ ಇನ್ನೂ ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿದಿದೆ.
'ಭ್ರಷ್ಟಾಚಾರದ ಕಾರಣಕ್ಕೆ ಬಿಎಸ್‌ವೈರನ್ನ ಸಿಎಂ ಸ್ಥಾನದಿಂದ ಬದಲಿಸಲಾಗಿದೆಯಾ?'
ಕೆಲವರು ವಯಸ್ಸಿನ ಮೇಲೆ ಅವರನ್ನ ಬದಲಿಸಲಾಗಿದೆ ಎನ್ನುತ್ತಿದ್ರೆ, ಇನ್ನೂ ಕೆಲವರು ಪುತ್ರ ವಿಜಯೇಂದ್ರ ಅವರ ನಡೆಯಿಂದ ಯಡಿಯೂರಪ್ಪನವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲಾಗಿದೆ ಎನ್ನುತ್ತಿದ್ದಾರೆ.
ಆದ್ರೆ, ಇದೀಗ ಕಾಂಗ್ರೆಸ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ಬಿಎಸ್ ಯಡಿಯೂರಪ್ಪ ಅವರನ್ನು ಐಟಿ, ಇಡಿ, ಸಿಬಿಐಗಳ ಬೆದರಿಕೆಯೊಡ್ಡಿ ರಾಜೀನಾಮೆ ಕೊಡಿಸಿದೆ ಬಿಜೆಪಿ ಎಂದಿದೆ.
ಪುತ್ರ ವಿಜಯೇಂದ್ರ ಅವರನ್ನು ಜೈಲಿಗೆ ಕಳಿಸುತ್ತೇವೆ ಎಂದೂ ಸಹ ಬೆದರಿಸಲಾಗಿದೆ. ಕಣ್ಣೀರಿಟ್ಟ BSY ಅವರೂ ಸಹ ರಾಜ್ಯದಲ್ಲಿ ಬಿಜೆಪಿಯನ್ನು ನಿರ್ನಾಮ ಮಾಡುವ ಬೆದರಿಕೆಯೊಡ್ಡಿ ಹೈಕಮಾಂಡ್‌ನ್ನು ಮಣಿಸಿದ್ದಾರೆ ಎಂಬ ಸುದ್ದಿ ಇದೆ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.