ವಿನಯ್ ಕುಲಕರ್ಣಿಗೆ ಶಿಗ್ಗಾವಿ ಟಿಕೆಟ್ ನೀಡದಂತೆ ಅಲ್ಪಸಂಖ್ಯಾತ ಮುಖಂಡರ ಆಗ್ರಹ!

By Gowthami K  |  First Published Mar 24, 2023, 6:38 PM IST

ಶಿಗ್ಗಾವಿಯಲ್ಲಿ ವಿನಯ್ ಕುಲಕರ್ಣಿಗೆ ಟಿಕೇಟ್ ನೀಡಲು ವಿರೋಧ ವ್ಯಕ್ತವಾಗಿದೆ. ಶಿಗ್ಗಾವಿ ತಾಲೂಕು ಅಂಜುಮನ್ ಕಮಿಟಿ ಸದಸ್ಯರು  ಇಂದು ಸುದ್ದಿಗೋಷ್ಟಿ ನಡೆಸಿ ವಿನಯ್ ಕುಲಕರ್ಣಿಗೆ ಟಿಕೇಟ್ ನೀಡದಂತೆ  ಆಗ್ರಹಿಸಿದ್ದಾರೆ. ಶಿಗ್ಗಾವಿಯಲ್ಲಿ  ಬೇರೆ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ.


ವರದಿ: ಪವನ್ ಕುಮಾರ್  ಏಷ್ಯಾನೆಟ್ ಸುವರ್ಣ ನ್ಯೂಸ್  

ಹಾವೇರಿ (ಮಾ.24): ಶಿಗ್ಗಾವಿಯಲ್ಲಿ ವಿನಯ್ ಕುಲಕರ್ಣಿಗೆ ಟಿಕೇಟ್ ನೀಡಲು ವಿರೋಧ ವ್ಯಕ್ತವಾಗಿದೆ. ಶಿಗ್ಗಾವಿ ತಾಲೂಕು ಅಂಜುಮನ್ ಕಮಿಟಿ ಸದಸ್ಯರು  ಇಂದು ಸುದ್ದಿಗೋಷ್ಟಿ ನಡೆಸಿ ವಿನಯ್ ಕುಲಕರ್ಣಿಗೆ ಟಿಕೇಟ್ ನೀಡದಂತೆ  ಆಗ್ರಹಿಸಿದ್ದಾರೆ. ಶಿಗ್ಗಾವಿಯಲ್ಲಿ  ಬೇರೆ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಕಾಂಗ್ರೆಸ್ ಕಳೆದ ಇಪ್ಪತ್ತು ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡುತ್ತಾ ಬಂದಿದೆ. ಶಿಗ್ಗಾವಿ ಅಲ್ಪಸಂಖ್ಯಾತರ ಕ್ಷೇತ್ರ, ಈ ಕ್ಷೇತ್ರದಲ್ಲಿ ಅತಿಹೆಚ್ಚು ಮುಸ್ಲಿಂಮರು ಇದಾರೆ. ಇಲ್ಲಿ ಈ ಬಾರಿಯೂ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು. ಈಗಾಗಲೇ ಖಾದ್ರಿಯವರಿಗೆ ನಾಲ್ಕು ಬಾರಿ ಟಿಕೆಟ್ ಕೊಟ್ಟಿದ್ದಾರೆ. ಅಜ್ಜಂಪೀರ್ ಖಾದ್ರಿ ಬದಲಾಗಿ ಯಾಸೀರ್ ಖಾನ್ ಪಠಾಣ್ ಗೆ ಟಿಕೆಟ್ ಕೊಡಿ ಎಂದು ಶಿಗ್ಗಾವಿ ಅಂಜುಮನ್ ಕಮಿಟಿ ಮುಖಂಡ ಅಬ್ದುಲ್ ಕರೀಂ  ಆಗ್ರಹಿಸಿದ್ದಾರೆ. ಶಿಗ್ಗಾವಿಯಲ್ಲಿ ಪರಿಸ್ಥಿತಿ ಬೇರೆ ಇದೆ, ಹೀಗಾಗಿ ವಿನಯ ಕುಲಕರ್ಣಿ ಗೆ ಟಿಕೆಟ್ ಕೊಟ್ರೆ ಕಷ್ಟ ಆಗುತ್ತದೆ. ಪಾಪ ಅವರು ದೊಡ್ಡ ನಾಯಕರು ಎಲ್ಲೆ ನಿಂತರು ಗೆದ್ದು ಬರ್ತಾರೆ ಎಂದರು.

Tap to resize

Latest Videos

undefined

Breaking ವರುಣಾ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ, ಎರಡು ಕಡೆ ನಿಲ್ಲುವ ಇಂಗಿತ!

ಸಿಎಂ ಬೊಮ್ಮಾಯಿ ವಿರುದ್ಧ ವಿನಯ್‌ ಕುಲಕರ್ಣಿ ಸ್ಪರ್ಧೆ
ಚುನಾಣೆಗಾಗಿ ಈಗಾಗಲೇ ಮೂರು ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಉಮೇದಿಯಲ್ಲಿರುವ ಕಾಂಗ್ರೆಸ್‌ ಹೈಕಮಾಂಡ್‌, ಮಾಜಿ ಸಚಿವ ಹಾಗೂ ಪಂಚಮಸಾಲಿ ನಾಯಕ ವಿನಯ್‌ ಕುಲಕರ್ಣಿ ಅವರಿಗೆ ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸೂಚನೆ ನೀಡಿದೆ.  ಇನ್ನು  ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದು ವಿನಯ್‌ ಕುಲಕರ್ಣಿ ಒಪ್ಪಿಕೊಂಡಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ. ವಿನಯ್‌ ಲಿಂಗಾಯತ ಪಂಚಮಸಾಲಿ ಸಮುದಾಯದ ಪ್ರಭಾವಿ ನಾಯಕನಾಗಿದ್ದು, ಸಿ ಎಂ ವಿರುದ್ಧ ಪ್ರಬಲ ಅಭ್ಯರ್ಥಿ ಎಂದು ತೀರ್ಮಾನಕ್ಕೆ ಕಾಂಗ್ರೆಸ್‌ ಬಂದಿದೆ. ಇನ್ನು ಶಿಗ್ಗಾವಿಯಲ್ಲಿ ಪ್ರಭಲ ಹಿಡಿತ ಹೊಂದಿರುವ ಅಜ್ಜಂಪೀರ್‌ ಖಾದ್ರಿ ತನಗೆ  ಟಿಕೆಟ್‌ ಕೊಡದಿದ್ದಲ್ಲಿ ವಿನಯ್‌ ಕೊಡಲು ಸಹಮತ ತೋರಿಸಿದ್ದು, ಖಾದ್ರಿ ವಿಶ್ವಾಸಕ್ಕೆ ತೆಗೆದುಕೊಂಡು ವಿನಯ್‌ ಕುಲಕರ್ಣಿ  ಕಣಕ್ಕಿಳಿಸುವ  ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದೆ.

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ್ತು ವಿಜಯೇಂದ್ರ ನಡುವೆ ಹಣಾಹಣಿ!?

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಯ್ಯದ್‌ ಅಜ್ಜಂ ಪೀರ್‌ ಖಾದ್ರಿ ವಿರುದ್ಧ ಕೇವಲ 9,265 ಮತಗಳ ಅಂತರದಲ್ಲಿ ಬೊಮ್ಮಾಯಿ ಗೆದ್ದಿದ್ದರು. ಅಲ್ಪಸಂಖ್ಯಾತರು ಹಾಗೂ ಪಂಚಮಸಾಲಿ ಲಿಂಗಾಯತರೇ ನಿರ್ಣಾಯಕರಾಗಿರುವ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬೊಮ್ಮಾಯಿ ಗೆಲುವು ಕಷ್ಟವಾಗಲಿದೆ ಎಂದು ಕಾಂಗ್ರೆಸ್‌ ಈ ಕ್ಷೇತ್ರದ ಬಗ್ಗೆ ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ. ಇದೇ ಸಮೀಕ್ಷೆಯು ವಿನಯ ಕುಲಕರ್ಣಿ ಅವರನ್ನು ಬೊಮ್ಮಾಯಿ ವಿರುದ್ಧ ಕಣಕ್ಕೆ ಇಳಿಸಿದರೆ ಮುಖ್ಯಮಂತ್ರಿಯವರನ್ನು ಕಟ್ಟಿಹಾಕಬಹುದು ಎಂದು ತಿಳಿಸಿದೆ. 

click me!