ಭಾರತದ ಒಕ್ಕೊರಲ ಧ್ವನಿಗೆ ನನ್ನ ಹೋರಾಟ, ಯಾವುದೇ ತ್ಯಾಗಕ್ಕೂ ಸಿದ್ಧ; ರಾಹುಲ್ ಗಾಂಧಿ ಟ್ವೀಟ್!

By Suvarna News  |  First Published Mar 24, 2023, 6:20 PM IST

ಮಾನಹಾನಿ ಪ್ರಕರಣದಲ್ಲಿ ದೋಷಿ ಎಂಬ ನ್ಯಾಯಾಲಯದ ತೀರ್ಪು ರಾಹುಲ್ ಗಾಂಧಿಗೆ ತೀವ್ರ ಸಂಕಷ್ಟ ತಂದಿದೆ. ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಈ ಕುರಿತು ಕಾಂಗ್ರೆಸ್ ಕೆರಳಿ ಕೆಂಡವಾಗಿದೆ. ತುರ್ತು ಸಭೆ ಕರೆದು ಚರ್ಚೆ ನಡೆಸಿದೆ. ಇತ್ತ ರಾಹುಲ್ ಗಾಂಧಿ, ಮಹತ್ವದ ಟ್ವೀಟ್ ಮಾಡಿದ್ದಾರೆ.


ನವದೆಹಲಿ(ಮಾ.24): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ ಎಂದು ಸೂರತ್ ಕೋರ್ಟ್ ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಆದರೆ ಕಾಂಗ್ರೆಸ್  ಈ ಪ್ರಕರಣ ರಾಜಕೀಯ ಪ್ರೇರಿತ ಎಂದಿದೆ. ಅದಾನಿ ಪ್ರಕರಣ ಸೇರಿದಂತೆ ಬಿಜೆಪಿ ವಿರುದ್ಧ ಧ್ವನಿ ಎತ್ತಿದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದೆ. ಈ ಆರೋಪ ಪ್ರತ್ಯಾರೋಪಗಳ ಬೆನ್ನಲ್ಲೇ ರಾಹುಲ್ ಗಾಂಧಿ ಟ್ವೀಟ್ ಮೂಲಕ ತಮ್ಮ ನಡೆಯನ್ನು ಸಮರ್ಥಸಿಕೊಂಡಿದ್ದಾರೆ. ಟ್ವೀಟ್ ಮೂಲಕ ತಮ್ಮ ನಡೆ ಸಮರ್ಥಿಸಿಕೊಂಡಿದ್ದಾರೆ. ಭಾರತದ ಒಕ್ಕೊಲರ ಧ್ವನಿಗಾಗಿ ನನ್ನ ಹೋರಾಟ. ಈ ವಿಚಾರದಲ್ಲಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಬಿಜೆಪಿ ಅದಾನಿ ಪ್ರಕರಣದ ದಿಕ್ಕು ತಪ್ಪಿಸಲು ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದೆ. ಬಿಜೆಪಿ ಈ ರೀತಿಯ ಷಡ್ಯಂತ್ರದಿಂದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ರಾಜ್ಯ ನಾಯಕರು ಸೇರಿದಂತೆ ದಿಲ್ಲಿ ನಾಯಕರು ಹೇಳಿಕೆ ನೀಡಿದ್ದಾರೆ. ಇದೇ ದಾಟಿಯಲ್ಲಿ ಇದೀಗ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Tap to resize

Latest Videos

ರಾಹುಲ್ ಗಾಂಧಿ To ಲಾಲೂ ಪ್ರಸಾದ್, ಸಂಸದ, ಶಾಸಕ ಸ್ಥಾನದಿಂದ ಅನರ್ಹಗೊಂಡ ನಾಯಕರ ಲಿಸ್ಟ್!

ಮೇ ಭಾರತ್‌ ಕಿ ಅವಾಜ್ ಕೆ ಲಿಯೋ ಲಡ್ ರಹಾ ಹೂಂ, ಮೇ ಹರ್ ಕೀಮತ್ ಚುಕಾನೆ ಕೋ ತಯಾರ್ ಹೂಂ( ನಾನು ಭಾರತದ ಧ್ವನಿಗಾಗಿ ಹೋರಾಡುತ್ತಿದ್ದೇನೆ. ಇದರ ನಡುವೆ ಯಾವುದೇ ತ್ಯಾಗಕ್ಕೂ ಸಿದ್ದ) ಎಂದು ಹಿಂದಿಯಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 

 

मैं भारत की आवाज़ के लिए लड़ रहा हूं।

मैं हर कीमत चुकाने को तैयार हूं।

— Rahul Gandhi (@RahulGandhi)

 

ರಾಹುಲ್ ಗಾಂಧಿ ಅನರ್ಹ ವಿಚಾರದ ಕುರಿತು ರಾಜ್ಯ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿ ಬಿಜೆಪಿ ಕಾಂಗ್ರೆಸ್ ಧ್ವನಿ ಸದ್ದಡಗಿಸಲು ಸಾಧ್ಯವಿಲ್ಲ ಎಂದು ದಿನೇಶ್ ಗುಂಡುರಾವ್ ಹೇಳಿದ್ದಾರೆ. ಜನರು ಎಚ್ಚೆತ್ತುಕೊಳ್ಳಬೇಕು. ಬಿಜೆಪಿ ಸರ್ವಾಧಿಕಾರಿ ಧೋರಣೆಗಿಂತ ಮಿಗಿಲಾದ ಧೋರಣೆ ತಾಳುತ್ತಿದೆ. ಪ್ರಜಾಪ್ರಭುತ್ವವನ್ನೇ ಅಲುಗಾಡಿಸುತ್ತಿದೆ ಎಂದು ಗುಂಡುರಾವ್ ಹೇಳಿದ್ದಾರೆ. ಇತ್ತ ಪ್ರಿಯಾಂಕ್ ಖರ್ಗೆ, ಇದು ಸಣ್ಣ ಪ್ರಕರಣ, ಭಾರತದ ಬ್ಯಾಂಕ್ ವಂಚಿಸಿ ಪಲಾಯನ ಗೈದ ನೀರವ್ ಮೋದಿ ಸೇರಿದಂತೆ ಇತರರ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದಾರೆ. ಇದು ಸಮಾಜಕ್ಕೆ ಹೇಳಿದ ಮಾತಲ್ಲ ಎಂದು ಪ್ರಿಯಾಂಕ್ ಖರ್ಗೆ ರಾಹುಲ್ ಹೇಳಿಕೆ ಕೆಲ ಅಂಶಗಳನ್ನು ಉಲ್ಲೇಖಿಸಿ ಪ್ರಮುಖ ಅಂಶವನ್ನು ಮರೆ ಮಾಚುವ ಪ್ರಯತ್ನ ಮಾಡಿದ್ದಾರೆ. 

ರಾಹುಲ್ ಗಾಂಧಿ ಅನರ್ಹ, ಕಾಂಗ್ರೆಸ್ ಸದ್ದಡಗಿಸಲು ಬಿಜೆಪಿಯಿಂದ ಷಡ್ಯಂತ್ರ, ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ!

ಇತ್ತ ಸಿದ್ದರಾಮಯ್ಯ, ಇದು ಬಿಜೆಪಿಯ ಹೇಡಿತನದ ಪ್ರದರ್ಶನ ಎಂದು ಕಿಡಿಕಾರಿದ್ದಾರೆ. ಪ್ರಜಾಪ್ರಭುತ್ವ ವಿರೋಧಿ ಬಿಜೆಪಿಗೆ ದಿಕ್ಕಾರ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದೀಗ ರಾಹುಲ್ ಗಾಂಧಿ ಕೂಡ ಅದೇ ದಾಟಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇಂದು ಮಧ್ಯಾಹ್ನ ಕಾಂಗ್ರೆಸ್ ತುರ್ತು ಸಭೆ ನಡೆಸಿತ್ತು. ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಹಿರಿಯ ನಾಯರಾದ ಅಭಿಷೇಕ್ ಮನು ಸಿಂಗ್ವಿ ಹಾಗೂ ಜೈರಾಂ ರಮೇಶ್, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಇಡೀ ಪ್ರರಕರಣದಲ್ಲಿ ಬಿಜೆಪಿ ಹಸ್ತಕ್ಷೇಪವಿದೆ ಎಂದು ಆರೋಪಿಸಿದ್ದಾರೆ.

click me!